Advertisement

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

11:06 AM Oct 22, 2024 | Team Udayavani |

ಗದಗ: ವಿಜಯನಗರ ಜಿಲ್ಲೆ ಹೂವಿನ ಹಡಗಲಿ ವ್ಯಾಪ್ತಿಯ ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕ ದಿನೇಶ್ ಮೃತದೇಹ‌ ಮಂಗಳವಾರ(ಅ.22) ತೀರದಲ್ಲಿ ಪತ್ತೆಯಾಗಿದೆ.

Advertisement

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಮೇಲಿಂದ ತುಂಗಭದ್ರಾ ನದಿಗೆ ಹಾರಿ ದಿನೇಶ್ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ವರದಿ ತಿಳಿಸಿದೆ.

ಮುಂಡರಗಿ ತಾಲೂಕು ಮುರಡಿ ತಾಂಡಾದ ಯುವಕ ದಿನೇಶ ಸಾಲದ ಸುಳಿಗೆ ಸಿಲುಕಿದ್ದು, ಇದರಿಂದಾಗಿ ಅಕ್ಟೋಬರ್ 20 (ಭಾನುವಾರ)ದಂದು ನದಿಗೆ ಹಾರಿದ್ದ.

ನೀರಿನ ಸೆಳೆತ ಹೆಚ್ಚಾಗಿದ್ದರಿಂದ ದಿನೇಶ್‌ ಕೊಚ್ಚಿಕೊಂಡು ಹೋಗಿದ್ದ. ಎರಡು ದಿನಗಳಿಂದ ಆತನ ಶವಕ್ಕಾಗಿ ಶೋಧ ನಡೆಸಲಾಗುತ್ತಿತ್ತು. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಮುಂಡರಗಿ ತಹಶಿಲ್ದಾರ ಯರಿಸ್ವಾಮಿ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next