Advertisement

Gadag; ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದ ಟಂಟಂ, ಆಟೋ, ದ್ವಿಚಕ್ರ ವಾಹನ ಜಪ್ತಿ

02:29 PM Aug 24, 2024 | Team Udayavani |

ಗದಗ: ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಗರ ಸಂಚಾರಿ ಠಾಣೆ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿ 40 ದ್ವಿಚಕ್ರ ವಾಹನ ಹಾಗೂ 20ಕ್ಕೂ ಹೆಚ್ಚು ಟಂಟಂ, ಆಟೋ ಜಪ್ತಿ ಮಾಡಿದ್ದಾರೆ.

Advertisement

ಅವಳಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದ್ವಿಚಕ್ರ ವಾಹನ, ಟಂಟಂ ಮತ್ತು ಆಟೋಗಳಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿರುವುದು, ನಂಬರ್ ಪ್ಲೇಟ್ ಮರೆಮಾಚಿ ಚಾಲನೆ, ಅತಿ ವೇಗದ ಚಾಲನೆ ಮಾಡುತ್ತಿರುವವರ ವಿರುದ್ಧ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.

ನಗರದೊಳಗೆ ಅತಿ ವೇಗದ ಚಾಲನೆ, ನಂಬರ್ ಪ್ಲೇಟ್ ಮರೆಮಾಚಿ ಓಡಿಸುವುದು ಇವೆಲ್ಲ ಕಾನೂನುಬಾಹಿರ. ವಾಹನ ಚಾಲಕರು ಕಾನೂನಿನ ಪ್ರಕಾರವೇ ನಡೆದುಕೊಳ್ಳಬೇಕು. ಇಲ್ಲವಾದರೆ ಅಂತಹವರನ್ನು ಗುರುತಿಸಿ, ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಂದು ವಾಹನ ಚಾಲಕರಿಗೆ ವಾಹನ ಚಾಲನಾ ನಿಯಮಗಳ ಕುರಿತು ವಿವರಿಸಿದರು.

ಅವಳಿ ನಗರದಲ್ಲಿ ಸಂಚರಿಸುತ್ತಿದ್ದ ಡಿಎಲ್, ಇನ್ಸೂರೆನ್ಸ್, ಪರ್ಮಿಟ್ ಇಲ್ಲದ ಹಾಗೂ ನಾನ್ ರೆಜಿಸ್ಟ್ರೇಶನ್ ಆಟೋಗಳನ್ನು ಸೀಜ್ ಮಾಡಲಾಗಿದೆ. ಆಟೋ ಚಾಲಕರು, ಮಾಲೀಕರು ವಾಹನಗಳನ್ನು ಸಾರಿಗೆ ಇಲಾಖೆ ನಿಯಮದಡಿ ಎಲ್ಲ ದಾಖಲಾತಿ ಹೊಂದಿರಬೇಕು. ಚಾಲನಾ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಅವಳಿ ನಗರದ ವಿವಿಧೆಡೆ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿ, ವಾಹನ ಸೀಜ್ ಮಾಡಲಾಗಿದೆ ಎಂದು ಸಂಚಾರಿ ಠಾಣೆ ಪಿಎಸ್ಐ ಶಕುಂತಲಾ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next