Advertisement

Gadag;ರಂಗಪ್ಪಜ್ಜ-ವೀರಪ್ಪಜ್ಜ ಜೋಡು ರಥೋತ್ಸವ ಅದ್ದೂರಿಯಾಗಿ ಸಂಪನ್ನ

09:53 PM Feb 19, 2024 | Team Udayavani |

ಗದಗ: ತಾಲೂಕಿನ ನರಸಾಪೂರ ಗ್ರಾಮದ ರಂಗಾವಧೂತರ ತಪೋಭೂಮಿಯಲ್ಲಿ ಅವರಾತ್ರಿ ಅಮವಾಸ್ಯೆಯ ದಶಮಿ ದಿನವಾದ ಸೋಮವಾರ ವೀರಪ್ಪಜ್ಜ ಹಾಗೂ ರಂಗಪ್ಪಜ್ಜ ಗುರು ಶಿಷ್ಯರ ಜೋಡು ರಥೋತ್ಸವ ಸಹಸ್ರಾರು ಸದ್ಭಕ್ತರ ಹರ್ಷೋದ್ಘಾರಗಳ ಮಧ್ಯೆ ಅದ್ದೂರಿಯಾಗಿ ಜರುಗಿತು.

Advertisement

ಜಾತ್ರೆಯಲ್ಲಿ ನೆರೆದಿದ್ದ ಸಹಸ್ರಾರು ಸದ್ಭಕ್ತರು ರಥೋತ್ಸವದ ಪ್ರಾರಂಭವಾಗುತ್ತಿದ್ದಂತೆ ‘ರಂಗಪ್ಪಜ್ಜ ಮಹಾರಾಜಕೀ ಜೈ’, ‘ವೀರಪ್ಪಜ್ಜ ಮಹಾರಾಜಕೀ ಜೈ’’ ಹಾಗೂ ನಾಗಮ್ಮತಾಯಿ ಮಾತಾಕೀ ಜೈ, ಹರ ಹರ ಮಹಾದೇವ ಎಂಬ ಹರ್ಷೋದ್ಘಾರಗಳು ಮೊಳಗಿದವು.

ಇದಕ್ಕೂ ಮುನ್ನ ರಂಗಪ್ಪಜ್ಜನ ಮಠದಲ್ಲಿ ನೂತನವಾಗಿ ನಿರ್ಮಿಸಿದ ಗಡ್ಡಿತೇರು ವೀರಪ್ಪಜ್ಜನ ರಥ ಸಿದ್ಧಪಡಿಸಲಾಗಿತ್ತು. ನರಸಾಪೂರದಲ್ಲಿ ಸಿದ್ದಗೊಳಿಸಿದ್ದ ರಂಗಪ್ಪಜ್ಜನ ತೇರು ಸಂಜೆ 6ಕ್ಕೆ ರಂಗಪ್ಪಜ್ಜನ ಮಠ ತಲುಪಿ ವಿಲೀನಗೊಂಡಾಗ ಅಲ್ಲಿ ನೆರೆದಿದ್ದ ಸದ್ಭಕ್ತರ ಭಕ್ತಿ ಹಾಗೂ ಸಂತಸ ನೋಡುವಂತಿತ್ತು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಾತ್ರೆಗೆ ಚಾಲನೆ ನೀಡಿ ಶುಭ ಕೋರಿದರು. ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next