Advertisement

Gadag; ಫಲ-ಪುಷ್ಪ ಪ್ರದರ್ಶನಕ್ಕೆ ಸಚಿವ ಎಚ್.ಕೆ. ಪಾಟೀಲ ಚಾಲನೆ

11:45 AM Feb 10, 2024 | Team Udayavani |

ಗದಗ: ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಶನಿವಾರ ಚಾಲನೆ ನೀಡಿದರು.

Advertisement

ಗುಲಾಬಿ ಹೂವುಗಳಿಂದ ಅಲಂಕೃತಗೊಂಡ ವೀರನಾರಾಯಣ ದೇವಸ್ಥಾನ, ಸಿರಿಧಾನ್ಯಗಳಲ್ಲಿ ಅರಳಿದ ಕನ್ನಡಾಂಬೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಮರಳಿನಲ್ಲಿ ಸಾಂಸ್ಕೃತಿಕ ರಾಯಭಾರಿ ಬಸವಣ್ಣನ ಮೂರ್ತಿ, ಏಲಕ್ಕಿಯಲ್ಲಿ ಹಣೇಶನ ಮೂರ್ತಿ, ಹೂವುಗಳಲ್ಲಿ ಅಲಂಕೃತಗೊಂಡಿರುವ ಸೆಲ್ಫಿ ಪಾಯಿಂಟ್‌ಗಳು, ತಬಲಾ, ಪಿಯಾನೋ, ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತನೆಗೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ನೋಡುಗರ ಗಮನ ಸೆಳೆದವು.

ಮತ್ತೊಂದೆಡೆ ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆದಿರುವ ತಾಳೆ, ಸೇವಂತಿಗೆ, ಚೆಂಡು ಹೂವು, ಲಿಂಬೆ, ಹೂಕೋಸು, ಟೊಮ್ಯಾಟೊ, ಹುಣಸೆ, ಪಪ್ಪಾಯಿ, ಕಪ್ಪು ದ್ರಾಕ್ಷಿ, ದ್ರಾಕ್ಷಿ, ಪೇರಳ, ಚಿಕ್ಕು, ಮಾವು, ನುಗ್ಗೆಕಾಯಿ, ಹೀರೇಕಾಯಿ, ಬಾಳೆ, ಯಾಲಕ್ಕಿ ಬಾಳೆ, ಈರುಳ್ಳಿ, ಚಕ್ಕೋತಾ, ಗೋಡಂಬಿ, ವಿಳ್ಯೆದೆಲೆ ಸೇರಿ ವಿವಿಧ ತರಕಾರಿ, ಹಣ್ಣುಗಳು, ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಿದವು. ರಾಮ ಫಲ, ಸೀತಾ ಫಲ, ಸ್ಟಾರ್ ಫ್ರುಟ್ಸ್ ಗಮನ ಸೆಳೆದವು.

ಫಲ-ಪುಷ್ಪ ಪ್ರದರ್ಶನದಲ್ಲಿ ಮೀನುಗಾರಿಕೆ ಇಲಾಖೆಯು ಕೂಡ ವಿವಿಧ ಬಗೆಯ ಮೀನುಗಳನ್ನು ಸಾರ್ವಜನಿಕರಿಗೆ ಪರಿಚಯಿಸಿದವು. ಆಸ್ಕರ್ ಫಿಶ್, ಟೈಗರ್ ಬರ್ಬ್, ಕಲರ್ ವಿಡೋವ್ ಟೆಟ್ರಾ, ಬ್ಲಾಕ್ ಮೋರ್ ಫಿಶ್, ಗಪ್ಪಿ ಫಿಶ್, ಬ್ಲಾಕ್ ಘೋಸ್ಟ್ ಫಿಶ್, ಗೋಲ್ಡ್ ಫಿಶ್, ಟೈಗರ್ ಶಾರ್ಕ್, ಅಂಜಾಲ್, ಫ್ಲಾವರ್ ಹಾರ್ನ್ ಫಿಶ್ ಗಳನ್ನು ನೋಡಿ ಕಣ್ತುಂಬಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next