Advertisement

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

04:15 PM May 16, 2024 | Team Udayavani |

ಗದಗ: ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕೆ ಬಳಸುತ್ತಿದ್ದಾರೆ. ಚುನಾವಣೆ ಬಳಿಕ ಎಲ್ಲಾ ಕ್ಷೇತ್ರದಲ್ಲಿ ವಿಪಕ್ಷ ಕಾರ್ಯಕರ್ತರ ಮೇಲೆ ಕೇಸ್ ಹಾಕುವುದರಲ್ಲಿ ಪೊಲೀಸರು ನಿರತರಾಗಿದ್ದಾರೆ. ಅಟ್ರಾಸಿಟಿ ಇನ್ನಿತರ ಕೇಸ್ ಹಾಕುವುದರಲ್ಲಿ ನಿರತರಾಗಿದ್ದಾರೆ. ಇಸ್ಪಿಟ್, ಮಟ್ಕ, ಕ್ಲಬ್‌ಗಳು, ಮರಳು ದಂಧೆಯಲ್ಲಿ ಸಂಪೂರ್ಣ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ದೊಡ್ಡ ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ‌ ಮುಳುಗಿ ಹೋಗಿದೆ. ನಿರ್ಭೀತಿಯಿಂದ ಗೂಂಡಾಗಳು ಓಡಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ‌ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯವಾಗಿದೆ. ಕೊಲೆಗಾರ ನೇಹಾ ರೀತಿಯಲ್ಲೇ ಕೊಲೆ ಮಾಡುತ್ತೇನೆ ಎಂದಿದ್ದಾನೆ. ಪೊಲೀಸರಿಗೆ ದೂರು ನೀಡಿದರೂ ಸಾಧ್ಯವಿಲ್ಲವೆಂದು ಉದಾಸೀನ ಮಾಡಿದ್ದಾರೆ ಎಂದು ಹೇಳಿದರು.

ಅದೇ ಊರಲ್ಲಿ ಇಷ್ಟು ದೊಡ್ಡ ಪ್ರಕರಣ ನಡೆದರೂ ಪೊಲೀಸರು ಅರೆಸ್ಟ್ ಮಾಡಿದ್ದರೆ ಈ ಕೊಲೆ ತಪ್ಪಿಸಬಹುದಿತ್ತು. ಅಂಜಲಿ ಕೊಲೆಯಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಪೊಲೀಸರು ಕೊಲೆ ತಡೆಯದೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಕಿಡಿಕಾರಿದರು.

ಗದಗನಲ್ಲಿ ಒಂದು ಗಂಟೆಯಲ್ಲಿ ನಾಲ್ಕು ಜನ ಕೊಲೆ ಮಾಡಿ ಹೋಗುತ್ತಾರೆಂದರೆ ಎಷ್ಟು ಧೈರ್ಯ ಇರಬೇಕು, ಹಂತಕರಿಗೆ ಯಾರ ಭಯವೂ‌ ಇಲ್ಲದಂತಾಗಿದೆ. ರಾಜ್ಯದಲ್ಲಿ ಯಾರ ಪ್ರಾಣವೂ ಸುರಕ್ಷಿತವಾಗಿಲ್ಲ. ಯಾವ ಸಂದರ್ಭದಲ್ಲ ಎಲ್ಲಿ ಏನಬೇಕಾದರು ಗಲಾಟೆ, ದಾಂಧಲೆಯಾಗಿ ಕೊಲೆಗಳಾಗಿ ಮಾರ್ಪಡುತ್ತಾವೆ.  ಸಂಪೂರ್ಣ ಭಯದ ವಾತಾವರಣ, ಗೂಂಡಾ ಸರ್ಕಾರ ಈ ರಾಜ್ಯದಲ್ಲಿದೆ ಎಂದರು.

ನೇಹಾ ಹಿರೇಮಠ ಕೇಸ್ ನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದರು. ಹಾಡಹಗಲೇ ಕಾಲೇಜ್ ಕ್ಯಾಂಪಸ್ ನಲ್ಲಿ ಕೊಲೆಯಾದರೆ ಸಾರ್ವಜನಿಕರು ಪ್ರತಿಭಟನೆ ಮಾಡಿದರು, ಜನರು ರಾಜಕೀಯ ಮಾಡುತ್ತಾರಾ? ಭಯಾನಕ ಕೊಲೆಯಾದರೆ ವಿಪಕ್ಷಗಳು ಸುಮ್ಮನೆ ಇರಬೇಕೆ ಎಂದು ಪ್ರಶ್ನಿಸಿದರು.

Advertisement

ಕಾಲೇಜ್ ಆವರಣ, ಮನೆ ಹೊಕ್ಕು ಕೊಲೆ ಮಾಡುತ್ತಾರೆಂದರೆ ಇದು ಗೂಂಡಾ ರಾಜ್ಯ ಅಲ್ದೇ ಯಾವ ರಾಜ್ಯ ಎಂದು ಕರೆಯಬೇಕು. ಇಷ್ಟೆಲ್ಲಾ ಆದರೂ ಕೂಡ ಗೃಹ ಸಚಿವರು, ಮುಖ್ಯಮಂತ್ರಿಗಳು ಏನೂ ಆಗದ ರೀತಿಯಲ್ಲಿ ಇದ್ದಾರೆ. ಕೊಲೆ ಬಗ್ಗೆ ಸಣ್ಣ ಪರಿಶೀಲನೆ ಕೂಡ ಮಾಡುತ್ತಿಲ್ಲ. ಪರಮೇಶ್ವರ್ ಅವರು ನೇಹಾ ಕೊಲೆಯಾದಾಗ ಬರ್ಲಿಲ್ಲ. ಸಾಂತ್ವನ ಬಿಡಿ ತನಿಖೆ ಚುರುಕುಗೊಳಿಸಲಿಲ್ಲ. ಪೊಲೀಸರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಿಲ್ಲ. ಈಗ ಅಂಜಲಿ ಕೊಲೆಯಾಗಿದೆ. ಈಗಲೂ ಉದಾಸೀನ ಮಾಡುತ್ತಿದ್ದೀರಾ ಎಂದು ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next