ಗದಗ: ಕ್ರಿ.ಶ. 8ನೇ ಶತಮಾನದಿಂದ 17ನೇ ಶತಮಾನದವರೆಗಿನ ಗದಗ, ಬಾಗಲಕೋಟೆ ಸೇರಿದಂತೆ ವಿಜಯಪುರದಲ್ಲಿನ 400ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಹೊಂದಿರುವ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ ಒದಗಿಸಲಾಗುತ್ತಿದ್ದು, 6.97 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯದ ಒಳಾಂಗಣ ವಿನ್ಯಾಸ ಕಾಮಗಾರಿ ಭೂಮಿಪೂಜೆ, ಶಿಲಾನ್ಯಾಸ
ನೆರವೇರಿಸಲಾಗಿದೆ.
Advertisement
ರಾಜ್ಯ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೊಳಪಡುವ ವಸ್ತು ಸಂಗ್ರಹಾಲಯಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಕುರಿತು ಸೂಕ್ತ ನಿರ್ವಹಣೆ, ಮಾಹಿತಿ ಫಲಕಗಳಿಲ್ಲದೆ, ಪ್ರಚಾರ ಕೊರತೆಯಿಂದ ಪ್ರವಾಸಿಗರು, ಇತಿಹಾಸಕಾರರಿಂದ ದೂರ ಉಳಿದಂತಾಗಿತ್ತು. ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಸಕ್ತಿ ವಹಿಸಿ ಪುರಾತನ ಶಿಲ್ಪಕಲೆಗಳಿಗೆ ಮರುಜೀವ ನೀಡುವ ಸಲುವಾಗಿ ವಿಶೇಷ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.
Related Articles
ಕಲ್ಯಾಣ ಚಾಲುಕ್ಯರ ಕಾಲದ ವೀರಭದ್ರ, ಉಮಾಮಹೇಶ್ವರ, ಮಹಿಷಾಸುರ ಮರ್ದಿನಿ, ಕುಬೇರ, ಗರುಡನ ಮೇಲೆ ಕುಳಿತಿರುವ
ಲಕೀÒ$¾ನಾರಾಯಣ ಮೂರ್ತಿಯ ಶಿಲ್ಪಗಳಿವೆ. ಬೆಟಗೇರಿಯಲ್ಲಿ ದೊರೆತ ಧ್ಯಾನಮುದ್ರೆಯಲ್ಲಿ ಕುಳಿತ ಭಂಗಿಯಲ್ಲಿರುವ ಸಪ್ತ ಮಾತೃಕೆಯರ ಶಿಲ್ಪಗಳಿವೆ. ದಾನಚಿಂತಾಮಣಿ ಅತ್ತಿಮಬ್ಬೆ ಜೈನ ಬಸದಿ ಕಟ್ಟಿಸಲು ನೀಡಿದ ಶಾಸನ, ಡಂಬಳದಲ್ಲಿ ದೊರೆತ ಪಾರ್ಶ್ವನಾಥ ಶಿಲ್ಪ ಇದರ ಪಾದ ಪೀಠದ ಮೇಲೆ ಬಸದಿ ನಿರ್ಮಾಣ ತಿಳಿಸುವ 10ನೇ ಶತಮಾನದ ಕನ್ನಡ ಶಾಸನವನ್ನು ಸಂಗ್ರಹಾಲಯ ಹೊಂದಿದೆ.
Advertisement
ಕ್ರಿ.ಶ 17ನೇ ಶತಮಾನದಲ್ಲಿ ಮರದಿಂದ ಕೆತ್ತಲ್ಪಟ್ಟ ಗೋವರ್ಧನ, ಲಕ್ಷ್ಮೀ ಮೂರ್ತಿಗಳು, ಲಕ್ಕುಂಡಿ ಗ್ರಾಮ ಉತ್ಖನನದಲ್ಲಿ ದೊರೆತ ನೂತನ ಶಿಲಾಯುಗದ ಆಯುಧಗಳು, ಬೃಹತ್ ಶಿಲಾಯುಗದ ಮಣ್ಣಿನ ಪಾತ್ರೆಗಳು, ಶಾತವಾಹನರ ಕಾಲದ ಮಣ್ಣಿನ ಪಾತ್ರೆಗಳು, ವಿವಿಧ ಆಕಾರ-ಬಣ್ಣದ ಮಣಿಗಳ ರಕ್ಷಣೆಗೆ ಹಾಗೂ ವೀಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ.
ರಾಜ್ಯ ಸರ್ಕಾರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೊಳಪಡುವ ವಸ್ತು ಸಂಗ್ರಹಾಲಯದಲ್ಲಿ ಒಳವಿನ್ಯಾಸದ ನವೀಕರಣ, ಶೋಕೇಸ್, ಹೊರಗಡೆ ಇರುವ ಶಿಲ್ಪಕಲೆ, ಶಾಸನಗಳನ್ನು ಕಟ್ಟಡದೊಳಗೆ ತರುವ ಮೂಲಕ ಅವುಗಳನ್ನು ಗ್ಯಾಲರಿಯೊಳಗೆ ಪ್ರದರ್ಶಿಸಲಾಗುತ್ತದೆ. ಇದರಿಂದ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಬಿ.ಸಿ.ರಾಜಾರಾಮ್, ಕ್ಯೂರೇಟರ್, ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯ, ಗದಗ
*ಅರುಣಕುಮಾರ ಹಿರೇಮಠ