Advertisement

ಗದಗ: ಫಕೀರ ದಿಂಗಾಲೇಶ್ವರ ಶ್ರೀ ಪ್ರತಿಭಟನೆ ನಿಷೇಧಿಸಿ

05:33 PM Feb 21, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಕನ್ನಡದ ಕುಲಗುರುಗಳು, ಭಾವೈಕ್ಯತೆ ಹರಿಕಾರರೆನಿಸಿದ ಲಿಂ. ಡಾ| ತೋಂಟದ ಸಿದ್ಧಲಿಂಗ ಶ್ರೀಗಳ 75ನೇ ಜಯಂತಿ ಫೆ.21 ರಂದು ಭಾವೈಕ್ಯತಾ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮ ಆಕ್ಷೇಪಿಸಿ ನಡೆಸುವ ಫಕೀರ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ ನಿಷೇಧಿ ಸಬೇಕು ಎಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಭಿಮಾನಿಗಳು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಫೆ.21ರಂದು ಬೆಳಗ್ಗೆ 8:30ಕ್ಕೆ ನಗರದ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿಯಿಂದ ಜ| ತೋಂಟದಾರ್ಯ ಮಠದವರೆಗೆ ಭಕ್ತರು
ಭಾವೈಕ್ಯತಾ ಯಾತ್ರೆ ನಡೆಸಲಿದ್ದು, ಯಾತ್ರೆ ಭೀಷ್ಮಕೆರೆಯಿಂದ, ಪುಟ್ಟರಾಜರ ಸರ್ಕಲ್‌,  ಕೆ.ಎಚ್‌. ಪಾಟೀಲ ವೃತ್ತ, ಬಸವೇಶ್ವರ
ವೃತ್ತ(ಹತ್ತಿಕಾಳ ಕೂಟ), ಹುಯಿಲಗೋಳ ನಾರಾಯಣರಾವ್‌ ವೃತ್ತ, ಮಹೇಂದ್ರಕರ್‌ ಸರ್ಕಲ್‌ ಮಾರ್ಗವಾಗಿ ಶ್ರೀಮಠ ತಲುಪುವುದು. ಇದಾದ ಬಳಿಕ ಶ್ರೀಮಠದಲ್ಲಿ ಪ್ರತಿ ವರ್ಷದಂತೆ ವೇದಿಕೆ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ನೀಡಿ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಕೊಳ್ಳುವಂತೆ ಶ್ರೀಮಠದ ಭಕ್ತರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಅವರಿಗೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ತೋಂಟದಾರ್ಯ ಮಠದ ಹಿರಿಯ ಭಕ್ತರಾದ ಎಸ್‌.ಎಸ್‌. ಕಳಸಾಪೂರ ಶೆಟ್ಟರ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೋಮುಸೌಹಾರ್ದತಾ, ದೇಶದ ಏಕತಾ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಬಸವ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಲಿಂ. ಡಾ| ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ
ಹೆಸರುವಾಸಿಯಾಗಿದ್ದರು. ಇಂಥ ಮಹಾತ್ಮರ ಜಯಂತಿ 2019ರಿಂದಲೇ ಶ್ರೀಮಠದಿಂದ ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತ
ಬರಲಾಗುತ್ತಿದೆ. ದಿಂಗಾಲೇಶ್ವರ ಶ್ರೀಗಳಿಗೆ ಈ ಕಾರ್ಯಕ್ರಮ ಧಿ ಕ್ಕರಿಸುವ ಯಾವುದೇ ಅರ್ಹತೆ ಇಲ್ಲ ಎಂದರು.

ಅಂಜುಮನ್‌ ಕಮೀಟಿ ಮುಖ್ಯಸ್ಥರು, ಶ್ರೀಮಠದ ಭಕ್ತರಾದ ಶೇಖ್‌ ಎಂ.ಜಿ. ಮಾತನಾಡಿ, ಶ್ರೀಮಠದ ಬಾಗಿಲನ್ನು ಸರ್ವ ಜನಾಂಗದವರಿಗೆ ಮುಕ್ತವಾಗಿ ತೆರೆದಿಟ್ಟಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಮಸೀದಿಗಳ ನಿರ್ಮಾಣಕ್ಕೆ ತಮ್ಮ ಮಠದ ಜಮೀನುಗಳನ್ನು ದಾನ ನೀಡುವ ಮೂಲಕ ಭಾವೈಕ್ಯತೆ ಎತ್ತಿ ಹಿಡಿದಿದ್ದಾರೆ. ಶಿವಾನುಭವ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೆçಸ್ತ, ಬೌದ್ಧ-ಜೈನ ಹೀಗೆ ಸಕಲ ಧರ್ಮಗಳ ಮುಖ್ಯಸ್ಥರನ್ನು ಕರೆಸಿ ಅವರಿಂದ ಆಯಾ ಧರ್ಮದ ಉದಾತ್ತ ಚಿಂತನೆಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದಾರೆ. ಲಿಂ| ಗುರುಗಳ ಭಾವೈಕ್ಯ ನಿಲುವು ಪ್ರಶ್ನಾತೀತವಾಗಿದ್ದು, ದಿಂಗಾಲೇಶ್ವರ ಶ್ರೀ ಪೂರ್ವಾಗ್ರಹ ಪೀಡಿತರಾಗಿ ಇಂಥ ನಡೆ ಕೈಕೊಂಡಿರುವುದನ್ನು ನಾವು ಧಿಕ್ಕರಿಸುತ್ತೇವೆ ಎಂದರು.

ದಲಿತ ಸಂಘದ ಮುಖ್ಯಸ್ಥ ಮೋಹನ ಆಲಮೇಲಕರ ಮಾತನಾಡಿ, ಭಾವೈಕ್ಯತೆ ಎಂಬುದು ಯಾರೊಬ್ಬರ ಖಾಸಗಿ ಸೊತ್ತಲ್ಲ.
ಬದಲಿಗೆ ಅದು ಈ ದೇಶದ ಉಸಿರಾಗಿದ್ದು, ಇಂದಿನ ದಿನಗಳಲ್ಲಿ ಭಾವೈಕ್ಯತೆ ಅತೀ ಹೆಚ್ಚು ಪ್ರಚುರ ಪಡಿಸಬೇಕಿದೆ. ಈ ಕಾರ್ಯವನ್ನು ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದರು. ಅವರು ಪೀಠಕ್ಕೆ ಬರುವ ಪೂರ್ವದಲ್ಲಿ ಶ್ರೀಮಠದ ಮುಂದೆ ಇದ್ದ ಲಿಂಗಾಯತರಿಗೆ ಮಾತ್ರ ಪ್ರವೇಶ ಎಂಬ ಬೋರ್ಡ್‌ ಕಿತ್ತೆಸೆದು ಶ್ರೀಮಠವನ್ನು ಎಲ್ಲ
ಸಮುದಾಯಗಳ ಕೇಂದ್ರಸ್ಥಾನವನ್ನಾಗಿಸಿದರು.

Advertisement

ಶ್ರೀಮಠದ ಜಾತ್ರೆಗಳಿಗೆ ಮುಸ್ಲಿಂ ಸೇರಿ ವಿವಿಧ ಸಮುದಾಯಗಳ ಭಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಭಾವೈಕ್ಯತೆಗೆ ಹೊಸ ವ್ಯಾಖ್ಯಾನ ಬರೆದರು. ದಿಂಗಾಲೇಶ್ವರ ಶ್ರೀಗಳು ಇತಿಹಾಸ ತಿಳಿಯುವ ಅನಿವಾರ್ಯತೆ ಇದ್ದು, ಪ್ರತಿಭಟನೆಯ ಬೆದರಿಕೆ ಒಡ್ಡುವುದು ಸ್ವಾಮೀಜಿಗಳಾದವರ ಘನತೆಗೆ ಶೋಭೆ ತರಲ್ಲ  ಎಂದರು.

ಶ್ರೀಮಠದ ಭಕ್ತರಾದ ಡಾ| ನೂರಾಣಿ, ಚನ್ನಯ್ಯ ಹಿರೇಮಠ, ಶೇಖಣ್ಣ ಕಳಸಾಪೂರಶೆಟ್ಟರ, ಎಸ್‌.ಬಿ. ಶೆಟ್ಟರ, ಬಾಲಚಂದ್ರ ಭರಮಗೌಡರ, ಎಸ್‌.ಎನ್‌. ಬಳ್ಳಾರಿ, ಲೋಕೇಶ್‌, ಐ.ಬಿ.ಬೆನಕೊಪ್ಪ, ಕೆ.ಎಚ್‌.ಬೇಲೂರ, ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ರಾಮು ಬಳ್ಳಾರಿ, ಮಂಜುನಾಥ ಕೋಟ್ನಿಕಲ್‌, ಪ್ರಕಾಶ ಅಸುಂಡಿ, ನಾರಾಯಣಸ್ವಾಮಿ, ಅಮರೇಶ ಅಂಗಡಿ, ಅ.ಓಂ. ಪಾಟೀಲ, ಶೇಖಣ್ಣ ಕವಳಿಕಾಯಿ, ಆರ್‌.ಎಸ್‌. ಗುಜಮಾಗಡಿ, ದಾನಯ್ಯ ಗಣಾಚಾರಿ, ಎಸ್‌.ಎಸ್‌. ಭಜಂತ್ರಿ, ವೈ.ಎನ್‌. ಗೌಡರ, ನಾಗರಾಜ ತಳವಾರ, ಮುರುಘೇಶ ಬಡ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next