Advertisement
ಮೇ 7ರಂದು(ಮಂಗಳವಾರ) ಲೋಕಸಭಾ ಚುನಾವಣೆ ಮತದಾನವಿರುವುದರಿಂದ ಬಹುತೇಕ ಸಾರಿಗೆ ಬಸ್‌ಗಳು ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಬಸ್‌ಗಳ ಸಂಚಾರ ವಿರಳವಾಗಿತ್ತು. ಹುಬ್ಬಳ್ಳಿ, ಇಲಕಲ್, ಬಾಗಲಕೋಟೆ, ಯಲಬುರ್ಗಾ, ಕೊಪ್ಪಳ ಸೇರಿದಂತೆ ಇತರೆ ಗ್ರಾಮಗಳಿಗೂ ತೆರಳುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದವು. ಮಹಿಳೆಯರು, ಮಕ್ಕಳು, ವಯೋವೃದ್ಧರು ತೀವ್ರ ತೊಂದರೆ ಅನುಭವಿಸಿದರು.
ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುತ್ತಿರುವುದರಿಂದ ದೂರದೂರಿಗೆ ತೆರಳಬೇಕಾದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಬಸ್‌ಗಳಲ್ಲಿ ಸೀಟುಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಕೆಲ ಪ್ರಯಾಣಿಕರು ಕಿಟಕಿಯಲ್ಲಿ ನುಸುಳಿಕೊಂಡು ಸೀಟು ಹಿಡಿದ ದೃಶ್ಯ ಸಮಾನ್ಯವಾಗಿತ್ತು. ಇನ್ನು ಕೆಲವು ಬಸ್‌ಗಳಲ್ಲಿ ಪ್ರಯಾಣಿಕರು ಬಾಗಿಲ ಬಳಿ ನೇತಾಡಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸಿದರು.