Advertisement

ಎಪಿಎಂಸಿಗಳಿಗೆ “ಸಮಯ’ವೇ ಸಂಕೋಲೆ

05:38 PM May 01, 2021 | Team Udayavani |

ವರದಿ: ವೀರೇಂದ್ರ ನಾಗಲದಿನ್ನಿ

Advertisement

ಗದಗ: ಕೋವಿಡ್‌ 2ನೇ ಅಲೆಯ ಹಿನ್ನೆಲೆಯಲ್ಲಿ ಸರಕಾರ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಸಡಿಲಿಕೆ ನೀಡಿರುವುದು ಜಿಲ್ಲೆಯ ಎಪಿಎಂಸಿ ಬಾಗಿಲು ಮುಚ್ಚಲು ಕಾರಣವಾಗಿದೆ. ಸಮಯದ ಅಭಾವದಿಂದ ಖರೀದಿದಾರರು ಕೃಷಿ ಉತ್ಪನ್ನಗಳ ಖರೀದಿಗೆ ಮುಂದಾಗದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯ 7 ಎಪಿಎಂಸಿ ಮಾರುಕಟ್ಟೆಗಳ ಪೈಕಿ ಮುಂಡರಗಿ, ಗಜೇಂದ್ರಗಡ ಮತ್ತು ನರಗುಂದ ಎಪಿಎಂಸಿಗಳು ನೆಪ ಮಾತ್ರಕ್ಕೆ ಎಂಬಂತೆ ವಹಿವಾಟು ನಡೆಸುತ್ತಿದ್ದು, ಇನ್ನುಳಿದಂತೆ ಗದಗ, ಲಕ್ಷೆ¾àಶ್ವರ, ರೋಣ ಮತ್ತು ಹೊಳೆಆಲೂರು ಎಪಿಎಂಸಿಗಳಲ್ಲಿ ಕಳೆದ ಏ.27 ರಿಂದ ಬಹುತೇಕ ವಹಿವಾಟು ಸ್ಥಗಿತಗೊಂಡಿದೆ. ಬೆಳಗ್ಗೆ 10 ಗಂಟೆ ಒಳಗಾಗಿ ವಹಿವಾಟು ನಡೆಸಬೇಕೆಂದು ಸರಕಾರ ಷರತ್ತು ವಿ ಧಿಸಿದೆ. ಆದರೆ, ಅತೀ ಕಡಿಮೆ ಅವ ಧಿಯಲ್ಲಿ ವಹಿವಾಟು ನಡೆಸಲಾಗದು.

ಒಂದೆರಡು ಗಂಟೆಗಳಲ್ಲಿ ಟೆಂಡರ್‌ ಕರೆದರೂ ಉತ್ಪನ್ನವನ್ನು ಚೀಲಗಳಿಗೆ ತುಂಬುವುದು, ಲೋಡಿಂಗ್‌ಗೆ ಸಮಯ ಬೇಕಾಗುತ್ತದೆ. ಹೀಗಾಗಿ, ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಗದಗ ಎಪಿಎಂಸಿ ಕಾರ್ಯದರ್ಶಿಗಳ ಮೂಲಕ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂಬುದು ಸ್ಥಳೀಯ ವರ್ತಕರ ವಾದ.

ಮುಂಗಾರು ಬಿತ್ತನೆ ಸಿದ್ಧತೆಗೆ ಅಡ್ಡಿ: ಈಗಾಗಲೇ ಬಹುತೇಕ ಫಸಲು ಕಟಾವು ಮಾಡಿರುವ ರೈತರು ಇನ್ನಷ್ಟೇ ಮಾರುಕಟ್ಟೆಗೆ ಸಾಗಿಸಲಿದ್ದಾರೆ. ಹಿಂಗಾರು ಜೋಳ, ನೀರಾವರಿ ಪ್ರದೇಶದಲ್ಲಿ ಬೆಳೆಯುವ ಗೆಜ್ಜೆ ಶೇಂಗಾ, ಕಡಲೆ ಹಾಗೂ ಮುಂಗಾರಿನಲ್ಲಿ ಬೆಳೆದ ಹೆಸರು ಮತ್ತಿತರೆ ಬೆಳೆಗಳಲ್ಲಿ ಶೇ.20 ರಷ್ಟು ರೈತರ ಬಳಿಯಿದ್ದು, ಮೇ ತಿಂಗಳಲ್ಲಿ ಅದನ್ನು ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಇದರಿಂದ ಬರುವ 8-10 ಸಾವಿರ ರೂ. ಆದಾಯ ಬಿತ್ತನೆ ಕಾರ್ಯಕ್ಕೆ ನೆರವಾಗುತ್ತದೆ ಎನ್ನುತ್ತಾರೆ ರೈತರು. ಇದೀಗ ಎಪಿಎಂಸಿ ವಹಿವಾಟಿಗೂ ಕೊರೊನಾ ಕಫೂÂì ಕರಿನೆರಳು ಬಿದ್ದಿದೆ. ಕಳೆದ ಮೂರು ದಿನಗಳಿಂದ ಎಪಿಎಂಸಿ ಬಾಗಿಲು ಮುಚ್ಚಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಪರದಾಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next