ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ವಿದ್ಯುತ್ ಅವಘಡ ಬೆನ್ನಲ್ಲೇ ಮತ್ತೋರ್ವ ಅಭಿಮಾನಿಯೊಬ್ಬ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಲೂಕಿನ ಬಿಂಕದಕಟ್ಟಿ ನಿವಾಸಿ ನಿಖಿಲಗೌಡ ಭೀಮನಗೌಡ್ರ ಗೌಡರ(22) ಗಂಭಿರವಾಗಿ ಗಾಯಗೊಂಡಿದ್ದು, ಜಿಮ್ಸ್ ನಲ್ಲಿ ದಾಖಲಿಸಲಾಗಿದೆ. ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:Birthday ಅಂದರೆ ಭಯ ಬರುತ್ತದೆ…ಅಸಹ್ಯ ಆಗಿ ಬಿಟ್ಟಿದೆ: ಯಶ್ ನೋವಿನ ನುಡಿ
ಸೂರಣಗಿಯಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಭೇಟಿ ಮಾಡಲು ನಟ ಯಶ್ ನಗರದ ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ನಂತರ ಹುಬ್ಬಳ್ಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ನಟ ಯಶ್ ಅವರನ್ನು ನೋಡುವ ಆತುರದಲ್ಲಿ ಬೈಕನಲ್ಲಿದ್ದ ನಿಖಿಲಗೌಡ ಡಿಎಆರ್ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾನೆ.ರಸ್ತೆಯಲ್ಲಿ ತೀವ್ರ ರಕ್ತ ಸೋರಿಕೆಯಾಗಿತ್ತು.
ಸೂರಣಗಿ ಭೇಟಿ ವೇಳೆ ನಟ ಯಶ್ ಅವರು, ನನ್ನನ್ನು ನೋಡಲು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬರಬೇಡಿ ಎಂದು ಅಭಿಮಾನಿಗಳಿಗೆ ಬುದ್ದಿವಾದ ಹೇಳಿದ್ದರೂ, ಘಟನೆ ನಡೆದಿದೆ.