ಗದಗ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆ, ಬಿಇಒ ಎಸ್.ಎನ್ ಹಳ್ಳಿಗುಡಿಗೆ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಆರೋಪಿತ ಬಿಇಒ ಗೆ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.
ಆರೋಪಿ ಶಂಕ್ರಪ್ಪ ಹಳ್ಳಿಗುಡಿ ಪ್ರಸ್ತುತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳು ಜೈಲುವಾಸ ಶಿಕ್ಷೆ ವಿಧಿಸಿದೆ.
ಆರೋಪಿ ಬಿಇಒ ಎಸ್.ಎನ್ ಹಳ್ಳಿಗುಡಿ ಇವರು ಈ ಮೊದಲು ಮುಂಡರಗಿ ಬಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪರೀಕ್ಷೆ ಸಂದರ್ಭದಲ್ಲಿ ಗ್ರಾಮವೊಂದರ ಬಾಲಕಿ ಮನೆಗೆ ಭೇಟಿ ನೀಡಿದ್ದರು. ಮೂತ್ರ ವಿಸರ್ಜನೆ ಮಾಡಬೇಕು ಶೌಚಾಲಯ ತೋರಿಸುಬಾ ಅಂದಿದ್ದಾರೆ. ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ, ಸ್ನಾನದ ಕೋಣೆ ತೋರಿಸಿದ್ದಾಳೆ. ನಂತರ ಬಂದು ನೀನು ಚನ್ನಾಗಿ ಓದು ಅಂತೆಲ್ಲಾ ಹೇಳಿ ಬೆನ್ನು ತಟ್ಟಿ ತೊಡೆ ಮೇಲೆ ಕೂಡಿಸಿಕೊಂಡಿದ್ದಾರೆ. ಶಿಕ್ಷಕರು ತಂದೆ ಸಮಾನ ಅಂತ ತೊಡೆ ಮೇಲೆ ಕೂತಿದ್ದಾಳೆ. ಆಗ ನೀನು ನನಗೆ ತುಂಬ ಇಷ್ಟ ಆಗಿದ್ದಿಯ. ತುಂಬ ದಿನದಿಂದ ನಿನ್ನ ಮಾತನಾಡಿಸಬೇಕು ಅಂದು ಕೊಡ್ಡಿದ್ದೆ. ನೀನು ಯಾರನ್ನಾದರು ಮದುವೆಯಾಗು. ಆದ್ರೆ ನನ್ನುನ್ನು ಪ್ರೀತಿಸು ಎಂದಿದ್ದಾನೆ. ಅಪ್ರಾಪ್ತ ಬಾಲಕಿಗೆ ಕಿರುಕುಳ ಕೊಟ್ಟು, ಎದೆಯ ಮೇಲೆ ಹಾರ್ಟ್ ಚಿತ್ರ ಬಿಡಿಸಿ ನಾನೂ ಯಾವಗಲೂ ಇಲ್ಲೇ ಇರುತ್ತೇನೆಂದು ಹೇಳಿದ್ದ.
ನಂತರ ಬಾಲಕಿ ಅಳುವುದನ್ನು ಗಮನಿಸಿದ ಪಾಲಕರು, ಬಿಇಒನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ 21 ಮಾರ್ಚ್ 2020 ರಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 3 ವರ್ಷ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ, ಸಾಕ್ಷಿ ರುಜುವಾತಾಗಿದೆ. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಶೆಟ್ಟಿ ಶಿಕ್ಷೆ ಆದೇಶ ಪ್ರಕಟಿಸಿದ್ದಾರೆ.