Advertisement
ಜಗತ್ತಿನ ಅತಿ ದೊಡ್ಡ ಆರ್ಥಿಕತೆ ಹೊಂದಿದ ಜಿ20 ರಾಷ್ಟ್ರಗಳು ಅಂಗೀಕರಿಸಿದ ಹ್ಯಾಂಬರ್ಗ್ ಕಾರ್ಯತಂತ್ರದಲ್ಲಿ ಭಾರತದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಈ ಬಗ್ಗೆ ಅದರಲ್ಲಿ ಹೇಳಲಾಗಿದ್ದು, “ಭಾರತ ಹಣಕಾಸು ವಲಯದಲ್ಲಿ, ಸ್ಥಿತಿಸ್ಥಾಪ ಕತ್ವವನ್ನು ಹೆಚ್ಚಿಸುವ ಸಲುವಾಗಿ, ವಿದ್ಯುನ್ಮಾನ ವ್ಯವಹಾರಗಳೂ ಸೇರಿದಂತೆ ವಿವಿಧ ವೇದಿಕೆ ಗಳನ್ನು ಪ್ರಚುರಪಡಿಸಿದೆ’ ಎನ್ನಲಾಗಿದೆ. ಅಲ್ಲದೇ ಜಿ20 ರಾಷ್ಟ್ರಗಳ ಅಭಿವೃದ್ಧಿ ಮತ್ತು ರಚನಾತ್ಮಕ ಸುಧಾರಣೆ ಅಂಗವಾಗಿ ಭಾರತ ಸ್ಟಾರ್ಟಪ್‌ಗ್ಳಿಗಾಗಿ ಬಾಹ್ಯ ವಾಣಿಜ್ಯ ಸಾಲ ಪಡೆಯಲು ಅನುಕೂಲ ಮಾಡಿಕೊಟ್ಟಿರುವುದು, ಆವಿಷ್ಕಾರ, ಉದ್ದಿಮೆಗಳಿಗೆ ಉತ್ತೇಜನ ನೀಡಿರುವ ಕ್ರಮವನ್ನು ಅಭಿನಂದಿಸಲಾಗಿದೆ. ಇದರೊಂದಿಗೆ ಕಾರ್ಮಿಕ ಮಾರುಕಟ್ಟೆ ಸುಧಾರಣೆ, ಕಾರ್ಮಿ ಕರಿಗೆ ಭದ್ರತೆ, ಮಹಿಳೆಯರ ಪಾಲ್ಗೊಳ್ಳುವಿಕೆ ಯನ್ನು ಹೆಚ್ಚಿಸಿರುವುದು, ಉದ್ದಿಮೆಗಳಲ್ಲಿ ಸ್ಥಾನ ನೀಡಿದ ವಿಚಾರಗಳ ಬಗ್ಗೆ ಹೇಳಲಾಗಿದೆ.
ಭ್ರಷ್ಟಾಚಾರ ನಿರ್ಮೂಲನೆಗೆ ಈ ಬಾರಿಯ ಜಿ20 ಶೃಂಗದಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದೆ. ಈ ಮೂಲಕ ಸರಕಾರಿ ಆಡಳಿತ ದಲ್ಲಿ ಮಾತ್ರವಲ್ಲದೇ, ವಿವಿಧ ಕಂಪನಿಗಳಲ್ಲೂ ನಡೆಯುವ ಭ್ರಷ್ಟಾಚಾರಕ್ಕೆ ವ್ಯಕ್ತಿಗಳನ್ನು ಗುರಿಯಾಗಿಸದೇ ಕಂಪನಿ ಗಳನ್ನೇ ಬಾಧ್ಯಸ್ಥರನ್ನಾಗಿಸಬೇಕೆಂದು ಹೇಳಲಾಗಿದೆ. ಅಲ್ಲದೇ ದಶಕಗಳ ಹಿಂದೆ ಜಿ20 ರಾಷ್ಟ್ರಗಳು ಅಂಗೀಕರಿಸಿರುವ ಭ್ರಷ್ಟಾಚಾರ ವಿರೋಧಿ ಸಭೆಯ ತೀರ್ಮಾನಗಳನ್ನು ಕಾರ್ಯಗತಗೊಳಿಸಬೇಕೆಂದು ತೀರ್ಮಾ ನಿಸಲಾಗಿದೆ. ಈವರೆಗೆ ವಿಶ್ವದಲ್ಲಿ ನಾರ್ವೆ, ದಕ್ಷಿಣ ಕೊರಿಯಾ, ನೆದರ್ಲೆಂಡ್, ಗ್ರೀಸ್ ದೇಶಗಳು ಮಾತ್ರ ಈ ತೀರ್ಮಾನಗಳನ್ನು ಜಾರಿಗೆ ತಂದಿದ್ದು, ಬಹುತೇಕ ದೇಶಗಳು ಈ ಬಗ್ಗೆ ಗಮನ ಹರಿಸಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿ20 ಸಭೆ ಮುಕ್ತಾಯಕ್ಕೆ ಜಂಟಿ ಘೋಷಣೆಯನ್ನು ಹೊರತರಲಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಸಹಕಾರ ನೀಡುವ ಬಗ್ಗೆ ಹೇಳಲಾಗಿದೆ. ಇದನ್ನು 2017- 18ನೇ ಸಾಲಿನ ಜಿ20 ಭ್ರಷ್ಟಾಚಾರ ವಿರೋಧಿ ಕಾರ್ಯತಂತ್ರ ವಾಗಿ ಜಾರಿಗೆ ತರಲಾಗುತ್ತದೆ. ಇದರೊಂದಿಗೆ ಕಳ್ಳಸಾಗಣೆ, ವನ್ಯಜೀವಿ ಉತ್ಪನ್ನಗಳ ಕಳ್ಳ ಮಾರಾಟ ತಡೆಗೂ ನಿಯಂತ್ರಣ ಹೇರುವ ಬಗ್ಗೆ ಹೇಳಲಾಗಿದೆ. ಇದರಿಂದ ಪರಿಸರ, ಜೀವ ಸಂಕುಲಕ್ಕೆ ಹಾನಿಕರ ವಾಗಿದ್ದು, ಆರ್ಥಿಕ ಅಭಿವೃದ್ಧಿಗೂ ಪ್ರತಿಕೂಲವಾಗಿದೆ. ಇದನ್ನು ಜಿ20 ದೇಶಗಳು ಸಹಿಸಿಕೊಳ್ಳುವುದಿಲ್ಲ ಎಂದು ಘೋಷಣೆಯಲ್ಲಿ ಹೇಳಲಾಗಿದೆ.