Advertisement

ಅಯ್ಯರ್‌ ನಾಟಕ ಮಂಡಳಿ

05:03 PM Aug 31, 2017 | Sharanya Alva |

ಕನ್ನಡ ಚಿತ್ರಂಗಕ್ಕೆ ನಿರ್ದೇಶಕ-ನಿರ್ಮಾಪಕ-ಚಿತ್ರಸಾಹಿತಿ-ನಟ ಜಿ.ವಿ. ಅಯ್ಯರ್‌ ಅವರ ಕೊಡುಗೆ ಅಪಾರ ಎಂದರೆ ತಪ್ಪಿಲ್ಲ. ಕನ್ನಡ ಚಿತ್ರರಂಗಕ್ಕೆ “ಕಣ್ತೆರೆದು ನೋಡು’, “ಭೂದಾನ’, “ಹಂಸಗೀತೆ’ ಸೇರಿದಂತೆ ಹಲವು ಕ್ಲಾಸಿಕ್‌ ಚಿತ್ರಗಳನ್ನು ನೀಡಿದ ಅಯ್ಯರ್‌ ಅವರು ಬದುಕಿರುತ್ತಿದ್ದರೆ ಈ ಸೆಪ್ಟೆಂಬರ್‌ ಮೂರಕ್ಕೆ ನೂರು ವರ್ಷ ತುಂಬುತ್ತಿತ್ತು. ಈ ನೆನಪಲ್ಲಿ ಅವರ ಮಗ ಜಿ.ವಿ. ರಾಘವೇಂದ್ರ
ಹಾಗೂ ಕುಟುಂಬದವರು ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುತ್ತಿರುವುದರ ಜೊತೆಗೆ, ಆ ಸಂಸ್ಥೆಯ ಮೂಲಕ ಹೊಸದೊಂದು ಚಿತ್ರವನ್ನು ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ.

Advertisement

ಹೌದು, ಇದೇ ಸೆಪ್ಟೆಂಬರ್‌ ಮೂರರಂದು ಜಿ.ವಿ. ಅಯ್ಯರ್‌ ಅವರ 100ನೇ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಜಿ.ವಿ.
ಅಯ್ಯರ್‌ ಪ್ರೊಡಕ್ಷನ್ಸ್‌ ಎಂಬ ಸಂಸ್ಥೆ ಪ್ರಾರಂಭವಾಗುವುದರ ಜೊತೆಗೆ, ಆ ಸಂಸ್ಥೆಯಿಂದ “ಭೂ ನಾಟಕ ಮಂಡಳಿ’
ಎಂಬ ಚಿತ್ರವೂ ಪ್ರಾರಂಭವಾಗಲಿದೆ. 

“ಭೂ ನಾಟಕ ಮಂಡಳಿ’ ಚಿತ್ರವು ಮಕ್ಕಳ ಚಿತ್ರವಾಗಿದ್ದು, ಈ ಚಿತ್ರಕ್ಕೆ Unfi nished Sketches ಎಂಬ ಅಡಿಬರಹವೂ ಇದೆ. ಈ ಚಿತ್ರವನ್ನು ತಮ್ಮ ತಂದೆಯವರಿಗೆ ಅರ್ಪಿಸುತ್ತಿರುವ ರಾಘವೇಂದ್ರ ಮುಂಬರುವ ವರ್ಷಗಳಲ್ಲಿ, ಈ ಸಂಸ್ಥೆಯಿಂದ ಇನ್ನಷ್ಟು ಚಿತ್ರಗಳನ್ನು ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. “ಭೂ ನಾಟಕ ಮಂಡಳಿ’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜೊತೆಗೆ, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ರಾಘವೇಂದ್ರ ಅವರೇ ಬರೆದಿದ್ದಾರೆ. 

ಇನ್ನು ಸಾಹಿತ್ಯ ಮತ್ತು ಸಂಭಾಷಣೆ ರಚಿಸುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ ಗುರುರಾಜ್‌ ಮಾರ್ಪಲ್ಲಿ. ಇನ್ನು ರಾಜು ಶಿರಾಳಕೊಪ್ಪ ಮತ್ತು ಎಂ.ಎನ್‌. ಸ್ವಾಮಿ ಅವರ ಸಂಕಲನ ಈ ಚಿತ್ರಕ್ಕಿದೆ. “ಭೂ ನಾಟಕ ಮಂಡಳಿ’ ಚಿತ್ರವು ಇದೇ ಭಾನುವಾರ (ಸೆಪ್ಟೆಂಬರ್‌ 3) ಬೆಳಿಗ್ಗೆ ರಾಮೋಹಳ್ಳಿಯಲ್ಲಿರುವ ಜಿ.ವಿ. ಅಯ್ಯರ್‌ ಸ್ಟುಡಿಯೋದಲ್ಲಿ ಪ್ರಾರಂಭವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next