Advertisement

ಎಸ್‌ಟಿ ವರ್ಗಕ್ಕೆ ಶೇ.7.5 ಮೀಸಲು ಕಲ್ಪಿಸಿ

12:09 PM Oct 21, 2021 | Team Udayavani |

ಮೈಸೂರು: ಪರಿಶಿಷ್ಟ ಪಂಗಡಕ್ಕೆ ಪರಿವಾರ ಜನಾಂಗವನ್ನು ಸೇರಿಸಲಾಗಿದ್ದು, ಫ‌ಲಾನುಭವಿಗಳಿಗೆ ಜಾತಿ ಪ್ರಮಾಣ ನೀಡಲು ಅಧಿಕಾರಿಗಳು ಸತಾಯಿಸಬಾರದು. ಯಾವುದೇ ತೊಂದರೆ ನೀಡದೇ ಸಿಂಧುತ್ವ ಮಾಡಿಕೊಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗದ ಸಂಘಗಳ ಸಹಯೋಗದಲ್ಲಿ ಬುಧವಾರ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

Advertisement

ತಳವಾರ-ಪರಿಹಾರ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂದು 1988-89ರಲ್ಲಿ ನಿಯೋಗ ಹೋಗಿದ್ದೆವು. ಆಗ ಕೆಲವು ಸಂಗತಿಗಳು ಬಿಟ್ಟು ಹೋದ ಕಾರಣ ಸಮಸ್ಯೆಯಾಯಿತು. ಸದ್ಯಕ್ಕೆ ಈಗ ಪರಿಶಿಷ್ಟ ಪಂಗಡಕ್ಕೆ ಪರಿವಾರ ಜನಾಂಗವನ್ನು ಸೇರಿಸಲಾಗಿದೆ. ಆದರೆ, ಫ‌ಲಾನುಭವಿಗಳಿಗೆ ಜಾತಿ ಪ್ರಮಾಣ ನೀಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ.

ಅಧಿಕಾರಿಗಳು ಯಾವುದೇ ತೊಂದರೆ ನೀಡದೇ ಸಿಂಧುತ್ವ ಮಾಡಿಕೊಡಬೇಕು. ಜತೆಗೆ ಈ ಹಿಂದೆ ಎಸ್‌ಟಿ ಪ್ರಮಾಣ ಪತ್ರ ಪಡೆದಿರುವವರ ಮೇಲೆ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಬೇಕು. ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗುವುದು. 30ರ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಇದನ್ನೂ ಓದಿ;- ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಕಲ್ಯಾಣಪ್ಪ ಮಳಖೇಡ

 ನಿರ್ಣಯ: ತೀರ ಹಿಂದುಳಿದುವರು ಹಾಗೂ ದುಡಿಯುವ ವರ್ಗ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲು ನೀಡಬೇಕೆಂದು ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆದಿದೆ. ಇದಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ಕೂಡಲೇ ಈ ಬಗ್ಗೆ ನಿರ್ಣಯ ತೆಗದುಕೊಳ್ಳಬೇಕು. ಸಂಸದ ಪ್ರತಾಪ್‌ಸಿಂಹ ಸಹ ಕೇಂದ್ರದಲ್ಲಿ ಈ ಬಗ್ಗೆ ದನಿ ಎತ್ತಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

ಈ ವೇಳೆ ಮೇಯರ್‌ ಸುನಂದ ಪಾಲನೇತ್ರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಎಸ್ಪಿ ಆರ್‌. ಚೇತನ್‌, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರ್ಥಿಕ ಸಲಹೆಗಾರ ಕೆ.ಮಹದೇವನಾಯಕ, ಸಮುದಾಯ ಮುಖಂಡ ಕೆಂಪನಾಯಕ, ವಾಲ್ಮೀಕಿ ಅಭಿವೃದ್ಧಿ ಮಂಡಳಿ ಜಿಲ್ಲಾ ಅಧಿಕಾರಿ ಕೆ.ಎಂ.ಮಲ್ಲೇಶ್‌, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಭ ಅರಸ್‌, ಸುಧಾಮಣಿ ಇತರರಿದ್ದರು.

ಮಂಥರೆ ಪಾತ್ರ ಬಗ್ಗೆ ಎಚ್ಚರವಹಿಸಿ: ಜಿಟಿಡಿ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯ ಮೌಲ್ಯಯುತ, ಮಾನವೀಯ ಬದುಕನ್ನು ಕಲಿಸುತ್ತದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಮಂಥರೆ ಪಾತ್ರ ಪ್ರತಿ ಮನೆಯಲ್ಲೂ ಇರುತ್ತಾರೆ. ಈ ಬಗ್ಗೆ ಎಚ್ಚರವಹಿಸಬೇಕೆಂದು ಶಾಸಕ ಜಿ.ಟಿ.ದೇವೇಗೌಡ ಕಿವಿಮಾತು ಹೇಳಿದರು.

 ವಿಶ್ವಕ್ಕೆ ದಾರಿದೀವಿಗೆ: ಕೌಟಿಲ್ಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಅಧ್ಯಕ್ಷ ಆರ್‌.ಕೌಟಿಲ್ಯ ಮಾತನಾಡಿ, ಶ್ರೇಷ್ಠ ಕೃತಿ ರಾಮಾಯಣ ವಿಶ್ವಕ್ಕೆ ದಾರಿದೀವಿಗೆಯಾಗಿದೆ. ಮಾನವೀಯತೆ, ಸಮಯ ಮತ್ತು ಬದ್ಧತೆಯ ಪಾಠ ಹೇಳುತ್ತದೆ. ಒಂದು ಕೂಡು ಕುಟುಂಬ ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ರಾಮಾಯಣವನ್ನು ಅನುಸರಿಸಿ ನಡೆಯಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next