Advertisement

ಮೂರು ವರ್ಷದ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತೆ ಆಗ ಆ ಪಕ್ಷಕ್ಕೆ ಸೇರುತ್ತೇನೆ: ಜಿಟಿಡಿ

10:22 AM Dec 15, 2019 | keerthan |

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಬಿಜೆಪಿ ಸರ್ಕಾರ ಉಳಿಸುವ ಬಗ್ಗೆ ನಮ್ಮ ನಾಯಕರೇ ಹೇಳುತ್ತಿದ್ದರು.  ಜನರೂ ಅದರ ಪ್ರಕಾರವೇ ಮತ ಹಾಕಿದ್ದಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

Advertisement

ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿರುವ ಮಾಜಿ ಮುಖ್ಯಮಂತ್ರಿ, ರಾಜಕೀಯ ಎದುರಾಳಿ ಸಿದ್ದರಾಮಯ್ಯ ಅವರನ್ನು ಜಿ ಟಿ ದೇವೇಗೌಡರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರುವರೆ ವರ್ಷ ಆಡಳಿತ ಪಕ್ಷಕ್ಕೆ ಬೆಂಬಲ ಕೊಡಬೇಕಿದೆ.  ಯಡಿಯೂರಪ್ಪ ಅಭಿವೃದ್ಧಿ ಅಭಿವೃದ್ದಿ ಅಂತಾರೆ. ಅದು ಈಡೇರಬೇಕಾದರೆ ಆಡಳಿತ ಮತ್ತು ವಿರೋಧ ಪಕ್ಷ ಒಟ್ಟಾಗಿ ಕೆಲಸ ಮಾಡ್ಬೇಕು ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ನವರು ತಮಿಳು ನಾಡಿನಲ್ಲಿ ಅಭ್ಯರ್ಥಿ ಹಾಕಿದ್ದರಾ ಎಂದು ಪ್ರಶ್ನಿಸಿದ ಜಿಟಿಡಿ, ಅಭ್ಯರ್ಥಿ ಹಾಕುವ ಅಗತ್ಯ ಇರಲಿಲ್ಲ. ಹೋಗುವವರು ಹೋಗ್ತಾರೆ. ಅರಾಮಾಗಿ ಇರ್ಬೇಕಿತ್ತು. ಏನಾಗ್ತಿರ್ಲಿಲ್ಲ ಎಂದರು.

ಕರ್ನಾಟಕದಲ್ಲಿ ಜನ ಬುದ್ದಿವಂತರು ಇದ್ದಾರೆ. ಸುಭದ್ರ ಸರ್ಕಾರ ಬೇಕು ಎನ್ನುತ್ತಿದ್ದಾರೆ. ಯಡಿಯೂರಪ್ಪ ಕೆಲಸ ಮಾಡ್ತಾರೆ. ಹೀಗಾಗಿ ಅವರೇ ಮುಂದಿನ ಮೂರುವರೆ ವರ್ಷ ಅಧಿಕಾರ ನಡೆಸಲಿ ಎಂದು ಜೆಡಿಎಸ್ ಶಾಸಕ ಆಶಿಸಿದರು.

Advertisement

ಹುಣಸೂರು ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಜಿಟಿಡಿ, ನನ್ನ ಮಗ ಹರೀಶ್ ಯಾವ ಪಕ್ಷಕ್ಕೂ ಸೇರಿದವರೂ ಅಲ್. ಯೋಗೆಶ್ ಅವರು ಏಕವಚನದಲ್ಲಿ ಮಾತಾಡಿದ್ದಾರೆ. ಒಕ್ಕಲಿಗರು ಹೆಚ್ಚಾಗಿರುವ ಊರಿಗೆ ಹೋಗಿ ಯಾರವನು ಜಿಟಿಡಿ, ದೇವೇಗೌಡ ಯಾರು ಅಂತ ಮಾತಾಡಿದ್ದಾರೆ. ಅಲ್ಲಿಯ ಜನ ಅವರು ಕೊಟ್ಟ ಸೀರೆ ಬೀದಿಗೆ ಎಸೆದು ಸಿಡಿದೆದ್ದಿದ್ದಾರೆ ಎಂದರು.

ಜಿಟಿ ದೇವೇಗೌಡ ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ವರ್ಷದ ನಂತರ ಮುಂದಿನ ಚುನಾವಣೆಯಲ್ಲಿ ರಾಜಕೀಯ ಧ್ರುವವೀಕರಣ ನಡೆಯಲಿದೆ. ಮುಂದಿನ ಮೂರು ವರ್ಷದ ನಂತರ ಯಾರು ಯಾವ ಪಕ್ಷದಲ್ಲಿ ಇರ್ತಾರೆ ಹೋಗ್ತಾರಾ ಅನ್ನೋದು ಗೊತ್ತಾಗುತ್ತೆ. ಈಗ ಜೆಡಿಎಸ್ ಪಕ್ಷದಲ್ಲಿ ಇದ್ದೀನಿ ಮೂರು ವರ್ಷದ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತೆ ಆಗ ನಿರ್ಧಾರ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next