ಮಂಗಳೂರು: ಶಿಕ್ಷಣ, ಆರೋಗ್ಯ ಕ್ಷೇತ್ರದ ಸೇವಕ ನಾಡೋಜ ಡಾ| ಜಿ. ಶಂಕರ್ ಅವರ 63ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಕಿಡ್ನಿ ಮತ್ತು ಕ್ಯಾನ್ಸರ್ ರೋಗಿಗಳಿಗೆ ನೆರವು ಹಸ್ತಾಂತರ ಕಾರ್ಯಕ್ರಮ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ಜರಗಿತು.
ಡಾ| ಜಿ. ಶಂಕರ್ ಅವರು ನೆರವು ಹಸ್ತಾಂತರಿಸಿ ಮಾತನಾಡಿ, ಬಡ ವರ್ಗದ ಜನರಿಗೆ ಸಹಾಯ ಮಾಡಬೇಕಾ ದುದು ಪ್ರತಿಯೊಬ್ಬರ ಕರ್ತವ್ಯ. ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು ನೀಡುವುದ ರಿಂದ ಸಿಗುವ ತೃಪ್ತಿ ಬೇರೆ ಯಾವ ಕೆಲಸಗಳಿಂದಲೂ ಸಿಗಲಾರದು ಎಂದರು.
ವಿಶೇಷ ಮಕ್ಕಳು, ದುರ್ಬಲರು ಹಾಗೂ ಬಡರೋಗಿಗಳಲ್ಲಿ ಮನಃಸ್ಥೈರ್ಯ ತುಂಬುವ ಕೆಲಸವನ್ನು ಅಗತ್ಯವಾಗಿ ಮಾಡಬೇಕು. ಸಮಾಜದಲ್ಲಿ ಮಾನವೀಯತೆಗೆ ವಿಶೇಷ ಒತ್ತು ನೀಡುವುದರೊಂದಿಗೆ ಬಡವರ ಬಗ್ಗೆ ಕಾಳಜಿಯಿಟ್ಟು ಅವರ ಸೇವೆಗೆ ಮುಂದಾಗ ಬೇಕು ಎಂದು ಅವರು ತಿಳಿಸಿದರು.
ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್ ವೇಣುಗೋಪಾಲ್, ರೇಡಿಯೇಶನ್ ಆಂಕಾಲಜಿ ಸ್ಪೆಶಲಿಸ್ಟ್ ಡಾ| ದಿನೇಶ್ ಪೈ ಕಸ್ತೂರಿ, ಆಸ್ಪತ್ರೆಯ ಪ್ರಾದೇಶಿಕ ಸಿಒಒ ಸಘೀರ್ ಸಿದ್ಧಿಕಿ ಮೊದಲಾದವರು ಉಪಸ್ಥಿತರಿದ್ದರು. ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಶೇಷ ತಜ್ಞ ಡಾ| ಹರ್ಷಪ್ರಸಾದ್ ಸ್ವಾಗತಿಸಿದರು. ಉದಯಶಂಕರ್ ನಿರೂಪಿಸಿದರು.