ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನುಇಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಜಮೀರ್ ನಮ್ಮ ಪಕ್ಷದ ಪ್ರಮುಖ ನಾಯಕರು. ಅವರ ಮನೆ ಮೇಲೆ ಐಟಿ, ಇಡಿ ದಾಳಿಗಳು ನಡೆದಿತ್ತು. ಹಾಗಾಗಿ ಇಂದು ಅವರನ್ನು ಮಾತನಾಡಿಸುವ ಎಂದು ಬಂದಿದ್ದೆ. ಭೇಟಿ ಮಾಡಿ ಇಬ್ಬರು ಮಾತುಕತೆ ಮಾಡಿದ್ದೇವೆ. ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದರು.
ಐಟಿ, ಇಡಿ ದಾಳಿ ಯಾವ ಕಾರಣಕ್ಕೆ ಅಗಿದೆಯೋ ಗೊತ್ತಿಲ್ಲ. ಅವರು ಯಾವ ಕಾರಣಕ್ಕೆ ದಾಳಿಯಾಗಿದೆ ಎಂದು ಹೇಳಲಿಲ್ಲ. ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಕೊಟ್ಟರೆ ವಿಚಾರಣೆಗೆ ಹೋಗಬೇಕು ಅದು ಸ್ವಾಭಾವಿಕ ಎಂದು ಹೇಳಿದರು.
ಇದನ್ನೂ ಓದಿ:ವಾಜಪೇಯಿ ನೇತೃತ್ವದ ಭಾರತವನ್ನು ಎಂದೂ ಮರೆಯಲು ಸಾಧ್ಯವಿಲ್ಲ : ಸದಾನಂದ ತಾನಾವಡೆ
ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಇವೆಲ್ಲವೂ ಕೂಡ ರಾಜಕೀಯ ಪ್ರೇರಿತ ದಾಳಿಗಳು. ಇದೇನು ಹೊಸತಲ್ಲ. ಮುಂಚಿನಿಂದಲು ನಡೆಯುತ್ತಿದೆ. ಬಂಗಲೆ ವಿಚಾರದಲ್ಲಿ ಇಡಿ ದಾಳಿ ಆಗಿರಲಿಕ್ಕಿಲ್ಲ ಅನಿಸುತ್ತದೆ. ಪಂಚನಾಮೆಯಲ್ಲಿ ಬಂಗಲೆ ವಿಚಾರದಲ್ಲಿ ದಾಳಿ ಆಗಿದೆಯೆಂದು ಎಲ್ಲೂ ಇಲ್ಲಾ ಅನಿಸುತ್ತದೆ ಎಂದರು.