Advertisement

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲರಾದ ಶಾಸಕ ಜಿ.ಪರಮೇಶ್ವರ್

08:36 PM Jan 11, 2022 | Team Udayavani |

ಕೊರಟಗೆರೆ: ಶಾಸಕ ಡಾ.ಜಿ.ಪರಮೇಶ್ವರ ಕೆಡಿಪಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳ ಮೇಲೆ ಕೆಂಡಾ ಮಂಡಲವಾಗಿ, ಅವರ ಕರ್ತವ್ಯ ಲೋಪವನ್ನು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಾರ್ಯನಿರ್ವಣಾಧಿಕಾರಿ ದೊಡ್ಡಸಿದ್ದಯ್ಯರಿಗೆ ಆದೇಶಿಸಿದರು.

Advertisement

ಮಂಗಳವಾರ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಕೊರೊನಾ ಮತ್ತು ಒಮಿಕ್ರಾನ್ ಸಾಂಕ್ರಾಮಿಕ ರೋಗಗಳಿಗೆ ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳದ ಬಗ್ಗೆ ಮತ್ತು ಸರ್ಕಾರದಿಂದ ಇಲಾಖೆಗಳಿಗೆ ,ಈ ರೋಗವನ್ನು ತಡೆಗಟ್ಟಲು ಇಲ್ಲಿಯವರೆಗೆ ಯಾವುದೇ ಮಾರ್ಗಸೂಚಿ ಬಾರದೆ ಇರುವುದನ್ನು ಕೇಳಿ ಅಸಮಾಧಾನಗೊಂಡರು.

ತಾಲ್ಲೂಕಿನ ಶಾಲಾ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಲಸಿಕೆ ಪಡೆಯದ ಮಕ್ಕಳಿದ್ದಾರೆ. ಅವರಿಗೆ ಹಾಗೂ ಸಾಮಾನ್ಯ ವರ್ಗದ ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರವಾಗಲಿ ಇಲ್ಲ. ಕೊರಟಗೆರೆ ಪಟ್ಟಣದಲ್ಲಿಯೇ ಹೆಚ್ಚಾಗಿದೆ ಎಂದು ಹೇಳುತ್ತಿದ್ದಿರಿ. ಪಟ್ಟಣ ಪಂಚಾಯತಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮೊದಲು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಸೂಕ್ತ ಅಂಕಿ ಅಂಶ ಇಲ್ಲದ ಮೇಲೆ ಸಭೆಗೆ ಯಾಕ್ರಿ ಬರ್ತಿರಾ ಎಂದು ಅದಿಕಾರಿ ಡಾ.ವಿಜಯ್ ಕುಮಾರ್ ಮೇಲೆ ಹರಿಹಾಯ್ದರು.

ಇದನ್ನೂ ಓದಿ : ಕೌಟುಂಬಿಕ ಕಲಹ : ಒಂದೂವರೆ ವರ್ಷದ ಮಗುವನ್ನು ಕೊಂದು, ನೇಣಿಗೆ ಶರಣಾದ ದಂಪತಿ

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಇಲಾಖೆಯ ಪ್ರಭಾರ ಅಧಿಕಾರಿಗೆ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಮಕ್ಕಳ ಪಟ್ಟಿಯಾಗಲಿ, ಸಂಖ್ಯೆಯಾಗಲಿ,ಮಾಹಿತಿ ಇರಲಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನದ ಅರಿವೆ ಇಲ್ಲದನ್ನು ಕಂಡು ಸಿಟ್ಟಿನಿಂದ ಶಾಸಕರು ನಿಮ್ಮಂತವರು ಇಲಾಖೆಯಲ್ಲಿ ಏಕಪ್ಪ ಇದ್ದೀರಾ. ತುಳಿತಕ್ಕೆ ಒಳಗಾದ ಸಮಾಜದ ವಿದ್ಯಾರ್ಥಿಗಳ ವೇತನ ಬಗ್ಗೆ ಅರಿವೆ ಇಲ್ಲದ ನೀವು ಇಲಾಖೆಗೆ ಬೇಕಾ, ಇವರ ವಿರುದ್ದ ಇಲಾಖೆ ಕ್ರಮಕ್ಕೆ ವರದಿ ನೀಡಿ ಎಂದರು. ಅದೇ ರೀತಿ ಗ್ರಾಮೀಣ ನೀರು ಸರಬರಾಜು ಇಲಾಖಾ ಅಧಿಕಾರಿಯ ವರದಿ ಮಾಹಿತಿಯೂ ಸಹ ಅಪೂರ್ಣವಾಗಿದ್ದು ದುರಸ್ತಿಯಾಗಬೇಕಾದ ಕುಡಿಯುವ ನೀರಿನ ಘಟಕದ ಬಗ್ಗೆ ಮಾಹಿತಿ ನೀಡದೆ ಇದ್ದು ಗ್ರಾಮಗಳ ಕುಡಿಯುವ ನೀರಿನ ಸಮಗ್ರ ಮಾಹಿತಿ ಕೊರತೆ ಕಂಡು ಅವರ ವಿರುದ್ದ ಕ್ರಮ ವಹಿಸುವಂತೆ ಸೂಚಿಸಿದರು.

Advertisement

ತೋಟಗಾರಿಕೆ, ಭೂ ಸೇನಾ ನಿಗಮ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು. ಪ್ರತಿ ವರ್ಷ ಕೆರೆಗಳ ಸ್ವಚ್ಚತೆಗೆ ಯೋಜನೆ ರೂಪಿಸಿ ಸಲ್ಲಿಸುವಂತೆ ಕಿರು ನೀರು ಸರಬರಾಜು ಅಧಿಕಾರಿಗೆ ತಿಳಿಸಿದರು. ಇತರೆ ಇಲಾಖೆಗಳ ವಿವರ ಪಡೆದ ಶಾಸಕರು ಸರ್ಕಾರಿ ಸೇವೆಯಲ್ಲಿ ಜನರ ಕೆಲಸಗಳ ವಿಳಂಬ ಮತ್ತು ಕರ್ತವ್ಯ ನಿರ್ಲಕ್ಷ ಸಹಿಸುವುದಿಲ್ಲ.ಅಧಿಕಾರಿಗಳು ನನ್ನ ಸೌಮ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಸೇವೆಯಲ್ಲಿ ಲೋಪವೆಸಗಿದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರುಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಮತ್ತು ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಹಾಗೂ ಬದ್ದತೆ ಅದಿಕಾರಿಗಳ ಮೇಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next