Advertisement

ಜಿ.ಪಂ., ತಾ.ಪಂ., ಮನಪಾ ಚುನಾವಣೆ ಗೆಲುವಿಗೆ ಶ್ರಮಿಸೋಣ: ಐವನ್‌ ಸೂಚನೆ

11:10 PM Jun 09, 2024 | Team Udayavani |

ಮಂಗಳೂರು: ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿ ಮುಂಬರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳಿಯಾಡಳಿತ ಚುನಾವಣೆಯ ಗೆಲುವಿಗೆ ನಾವೆಲ್ಲಾ ಕಟಿಬದ್ಧರಾಗಬೇಕಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆಯನ್ನು ಆರಂಭಿಸುವ ಮೂಲಕ ಶ್ರಮಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು.

Advertisement

ಪರಿಷತ್‌ ಸದಸ್ಯರಾಗಿ 2ನೇ ಬಾರಿ ಆಯ್ಕೆಯಾದ ಅವರು ಶನಿವಾರ ಮಂಗಳೂರಿನ ಪಕ್ಷದ ಕಚೇರಿಗೆ ಆಗಮಿಸಿದ ಸಂದರ್ಭ ಪಕ್ಷದ ವತಿಯಿಂದ ನೀಡಲಾದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಪಕ್ಷದ ಕಾರ್ಯಕರ್ತರು ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಬರಬಹುದು. ಅದನ್ನು ಪಕ್ಷದೊಳಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಪರಿಷತ್‌ ಸದಸ್ಯನಾಗಿ ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್‌, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ಸಹಿತ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ, ಕಾರ್ಮಿಕ ನೇತಾರ ಕಾರ್ಯಕರ್ತರ ವಿಶ್ವಾಸಾರ್ಹ ನಾಯಕರಾಗಿರುವ ಐವನ್‌ ಡಿ’ಸೋಜಾ ಪಕ್ಷಕ್ಕಾಗಿ ನಿರಂತರ ಸೇವೆ, ಸಂಘಟನೆಗೆ ಶ್ರಮಿಸಿದ್ದರ ಪ್ರತಿಫಲವಾಗಿ ಶಾಸಕ ಸ್ಥಾನ ಲಭಿಸಿದೆ. ಮುಂದಿನ ದಿನಗಳಲ್ಲಿ ಸಚಿವನಾಗಿ ಜನತೆಯ ಸೇವೆ ಮಾಡುವ ಮತ್ತಷ್ಟು ಒದಗಿ ಬರಲಿ ಎಂದು ಹಾರೈಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಐವನ್‌ ಅವರು ಕಾರ್ಮಿಕ ನಾಯಕನಾಗಿ, ಕಾರ್ಯಕರ್ತರ ಬೇಕು ಬೇಡಗಳಿಗೆ ಸ್ಪಂದಿಸುವ ಮೂಲಕ ಅವರ ಮನ ಗೆದ್ದಿದ್ದಾರೆ. ಅರ್ಹವಾಗಿ ಶಾಸಕ ಸ್ಥಾನ ದೊರೆತಿದೆ ಎಂದರು.

Advertisement

ಮಾಜಿ ಶಾಸಕ ಜೆ.ಆರ್‌. ಲೋಬೋ, ಕಾಂಗ್ರೆಸ್‌ ಮುಖಂಡರಾದ ಮೋಹನ್‌ ಪಿ., ಇಬ್ರಾಹಿಂ ಕೋಡಿಜಾಲ್‌, ಮಮತಾ ಗಟ್ಟಿ, ಶಾಲೆಟ್‌ ಪಿಂಟೋ, ಮಿಥುನ್‌ ರೈ, ಪ್ರವೀಣ್‌ಚಂದ್ರ ಆಳ್ವ, ಶಶಿಧರ ಹೆಗ್ಡೆ, ಕೆ. ಅಶ್ರಫ್‌, ಕವಿತಾ ಡಿ’ಸೋಜಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next