Advertisement
ಕಂದಾಯ, ಅರಣ್ಯ, ಗಣಿ ಇಲಾಖೆಯ ರಾಜ್ಯ ಸ್ತರದ ಪ್ರಧಾನ ಕಾರ್ಯದರ್ಶಿಗಳು ಡೀಮ್ಡ್ ಅರಣ್ಯದಿಂದ ಆಂಶಿಕ ಡೀಮ್ಡ್ ಅರಣ್ಯದ ಭಾಗವನ್ನು ಬೇರ್ಪಡಿಸಲು ಒಮ್ಮತದಿಂದ ತಳೆದ ನಿರ್ಣಯವನ್ನೂ ಜಿಲ್ಲೆಯಲ್ಲಿ ಈಡೇರಿಸಲು ಡಿಎಫ್ಒ ಸಿದ್ಧರಿಲ್ಲ. ಹೀಗಾದರೆ ಮರಳು ಸಮಸ್ಯೆ ತಲೆದೋರಿದಂತೆ ಜಲ್ಲಿ ಸಮಸ್ಯೆಯೂ ತಲೆದೋರುತ್ತದೆ. ಅವರು ಜಿ.ಪಂ. ಸಭೆಗೆ ಹಾಜರಾಗಲೂ ಸಿದ್ಧರಿಲ್ಲ. ಇವರ ವಿರುದ್ಧ ನಿರ್ಣಯ ತಳೆದು ರಾಜ್ಯ ಸರಕಾರದ ಗಮನಕ್ಕೆ ತರಬೇಕು ಎಂದು ಸದಸ್ಯರು ಆಗ್ರಹಿಸಿದರು.
ಅರಣ್ಯ ಇಲಾಖೆಯವರು ಅವರ ಭೂಮಿಯಲ್ಲಿ ಕಾಡು ಬೆಳೆಸದೆ ಅಕೇಶಿಯಾ ಕಾಡು ಬೆಳೆಸುತ್ತಾರೆ. ಡೀಮ್ಡ್ ಅರಣ್ಯದ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ಗಳಿಗೆ ವಿನಾ ಕಾರಣ ಅಡ್ಡಿ ಪಡಿಸುತ್ತಾರೆ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದರು. ಪರಿಸರ ಸೂಕ್ಷ್ಮ ವಲಯದಂತೆ ಅಭಯಾ ರಣ್ಯದ ಗಡಿಯಿಂದ ಆದಷ್ಟು ಕಡಿಮೆ ಭೂಮಿಯನ್ನು (100-200 ಮೀ.) ಗುರುತಿಸಬೇಕು. ಈಗ ಒಂದು ಕಿ.ಮೀ. ಎಂದು ನಿರ್ಧರಿಸಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗು ತ್ತದೆ ಎಂದು ನಿರ್ಣಯ ಅಂಗೀಕರಿಸಲಾಯಿತು. ಕಾರ್ಖಾನೆ ಕಾರ್ಮಿಕರಿಗೆ ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ದಾಖಲೆ ಇಲ್ಲದೆ ಆಧಾರ್
ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಿಎಫ್ ಮುಂತಾದ ಸೌಲಭ್ಯ ಪಡೆಯಲಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ 2ನೇ ಶನಿವಾರ ಕೆಲವು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಶಿಬಿರ ಏರ್ಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.
Related Articles
Advertisement
ಸದಸ್ಯರಾದ ಬಾಬು ಶೆಟ್ಟಿ, ಜನಾರ್ದನ ತೋನ್ಸೆ, ಶಿಲ್ಪಾ ಸುವರ್ಣ, ದಿವ್ಯಶ್ರೀ ಅಮೀನ್, ಸುರೇಶ ಬಟವಾಡೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಗೌರಿ ದೇವಾಡಿಗ, ಲಕ್ಷ್ಮೀ ಮಂಜು ಬಿಲ್ಲವ, ಚಂದ್ರಿಕಾ ಕೇಳ್ಕರ್, ಜ್ಯೋತಿ ಹರೀಶ್, ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರಿ, ರೋಹಿತ್‌ಕುಮಾರ್ ಶೆಟ್ಟಿ, ಜ್ಯೋತಿ ಎಂ. ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮಲೋಕಸಭಾ ಚುನಾವಣೆ ವೇಳೆ ಸ್ಥಗಿತಗೊಂಡ ಸರಕಾರಿ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ 57 ನಮೂನೆ ಅರ್ಜಿಯನ್ನು ಮತ್ತೆ ಸ್ವೀಕರಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ರಾ.ಹೆ. ಇಕ್ಕೆಲಗಳಲ್ಲಿ ಅಕ್ರಮ ವಾಗಿ ತಲೆ ಎತ್ತಿದ ರಚನೆಗಳ ಬಗ್ಗೆ ಶೀಘ್ರವೇ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ರಾ.ಹೆ. ಅಧಿಕಾರಿಗಳು ಭರವಸೆ ನೀಡಿದರು. ಕುಡಿಯುವ ನೀರು ಪೂರೈಸಿದವರಿಗೆ ಟೆಂಡರ್‌ನಂತೆ ಮೊತ್ತ ಪಾವತಿಯಾಗುತ್ತಿಲ್ಲ ಎಂದು ಸಭೆಯಲ್ಲಿ ಕೇಳಿಬಂದಾಗ ಇದರ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು. ಸಂಧ್ಯಾಸುರಕ್ಷಾ ದಂತಹ ಸಾಮಾಜಿಕ ಪಿಂಚಣಿ ಯೋಜನೆಗಳು ವರ್ಷವಾದರೂ ಜಾರಿಯಾಗುತ್ತಿಲ್ಲ ಎಂದು ಕಳವಳ ವ್ಯಕ್ತವಾಯಿತು. ಇದಕ್ಕೆ ಕಾರಣವಾದ ಸರ್ವರ್ ಸಮಸ್ಯೆಯನ್ನು ರಾಜ್ಯ ಸರಕಾರದ ಗಮನಕ್ಕೆ ತರುವುದಾಗಿ ಅಧಿಕಾರಿಗಳು ತಿಳಿಸಿದರು. ಪಡಿತರ ವಿಲೇ ಸಮಸ್ಯೆ
ಪಡಿತರ ಚೀಟಿ ವಿಲೇವಾರಿಗೆ ರಾಜ್ಯ ಮಟ್ಟದ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಜಿ.ಪಂ., ಇದರ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿತು.