Advertisement

ಪ್ರಪಂಚದಿಂದಲೇ ದೂರವಾದಂತೆ ಆಗಿತ್ತು: ಕೋವಿಡ್ ಕಣ್ಣೀರ ಕಥೆ ಹೇಳಿದ ಸಂಸದ ಸಿದ್ದೇಶ್ವರ

04:56 PM Apr 14, 2020 | keerthan |

ದಾವಣಗೆರೆ: ಮಗಳಿಗೆ ಕೋವಿಡ್-19 ಸೋಂಕಿನ ಕಾರಣದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಸದ್ಯ ಸುರಕ್ಷಿತವಾಗಿ ಅವಧಿ ಮುಗಿಸಿದ್ದಾರೆ.  ಹೋಮ್ ಕ್ವಾರಂಟೈನ್ ಮುಗಿಸಿದ ಬಳಿಕ ಮೊದಲ ಭಾರಿಗೆ ಸಭೆಯಲ್ಲಿ ಪಾಲ್ಗೊಂಡ ಅವರು ತನ್ನ ಕ್ವಾರಂಟೈನ್ ದಿನಗಳ ಕಥೆ ಬಿಚ್ಚಿಟ್ಟರು.

Advertisement

ನನ್ನ ಮಗಳು ಹಾಗೂ ನನ್ನ ತಮ್ಮನ ಮಗನಿಗೆ ಕೋವಿಡ್-19 ಸೋಂಕು ಪಾಸಿಟಿವ್ ಬಂದಿತ್ತು. ಆದ್ದರಿಂದ ಬಹಳಷ್ಟು ಜನ ಹೆದರಿದ್ದರು. ನಾನೂ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಯಿತು. ನಮ್ಮನ್ನು ನೋಡಿ ನಮ್ಮ ಸಂಬಂಧಿಕರೇ ನನ್ನ ಹತ್ತಿರ ಬರಲು ಹಿಂದೇಟು ಹಾಕುತ್ತಿದ್ದರು. ನಾವು ಪ್ರಪಂಚದಿಂದಲೇ ದೂರವಿದ್ದೇವಾ ಎನ್ನುವಂತೆ ಆಗಿತ್ತು ನಮಗೆ! ಎಂದು ಕ್ವಾರೆಂಟೈನ್ ನಲ್ಲಿ ಅನುಭವಿಸಿದ ನೋವನ್ನು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿಕೊಂಡರು.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋವಿಡ್ 19 ನಿಯಂತ್ರಣ ಕ್ರಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದೀಗ ಜಿಲ್ಲೆಯ ಮೂರು ಜನರಿಗೆ ಸೋಂಕು ನೆಗೆಟಿವ್ ಬಂದಿದ್ದು ಸಂತೋಷ ಮೂಡಿಸಿದೆ. ಕೋವಿಡ್-19 ಸೋಂಕು ಬಂತೆಂದು ಯಾರೂ ಹೆದರುವುದು ಬೇಡ. ಕೊವಿಡ್-19 ಪರೀಕ್ಷೆ ಮಾಡಿಸಲು ಸಾಕಷ್ಟು ಜನರು ಹೆದರುತ್ತಿದ್ದಾರೆ‌. ನಮ್ಮ ತಮ್ಮನೇ ಅವನ ಎರಡನೇ ಮಗನ‌ ಪರೀಕ್ಷೆ ಮಾಡಿಸಿರಲಿಲ್ಲಾ. ನಾವೆಲ್ಲಾ ಪರೀಕ್ಷೆ ಮಾಡಿಸಿದ ಮೇಲೆ ಅವನೂ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next