Advertisement
ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಮಾರುಕಟ್ಟೆಯ ವ್ಯಾಪ್ತಿ, ಬೇಡಿಕೆ, ಜನಪ್ರಿಯತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿರುವ ಮಾರುತಿ ಸುಜುಕಿ, ಇದೀಗ ನೂತನ ವಿನ್ಯಾಸಕ್ಕೆ ಹೆಚ್ಚಿನ ಒಲವು ತೋರಿಸುತ್ತಿರುವುದು ಗಮನಾರ್ಹ. ಸಾಮಾನ್ಯವಾಗಿ, ನವ್ಯ ವಿನ್ಯಾಸಕ್ಕೆ ಹೆಚ್ಚೇನೂ ಮಹತ್ವ ಕೊಡದೇ ಮಾರುಕಟ್ಟೆಯಲ್ಲಿ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ, ಈಗ ಗ್ರಾಹಕನ ಉಳಿದ ಬೇಡಿಕೆಗಳ ಬಗ್ಗೆಯೂ ಮಹತ್ವ ನೀಡಿ ಬದಲಾವಣೆಗೆ ಮುಂದಾಗಿದೆ.
Related Articles
Advertisement
ಫ್ರಂಟ್ ಲುಕ್ ಅನ್ನು ತಕ್ಷಣಕ್ಕೆ ಹಳೆಯ ಅಂಬಾಸಿಡರ್ ಕಾರನ್ನು, ಅಕ್ಕ-ಪಕ್ಕದಿಂದ ನೋಡಿದಾಗ ಸ್ವಿಫ್ಟ್ ಕಾರಿನ ಲುಕ್ ನೆನಪಿಸಬಹುದು. ಆದರೆ ಈ ಎರಡೂ ಕಾರುಗಳು ಮಿಶ್ರಣದಂತಿದೆ ಎಂದಾಗಲಿ, ಅವುಗಳ ತದ್ರೂಪಿನಂತಿದೆ ಎಂದಾಗಲಿ ಹೇಳುವಂತಿಲ್ಲ. ಸದ್ಯಕ್ಕಿರುವ ಮಾತಿಯಂತೆ ಕಾರಿನ ಒಳ ವಿನ್ಯಾಸ ಇತ್ತೀಚಿಗಿನ ಕಾರುಗಳಿಗೆ ಸ್ಪರ್ಧೆಯೊಡ್ಡುವಂತಿದೆ. ಚಾಲಕ ಸ್ನೇಹಿಯಾದ ತಂತ್ರಜ್ಞಾನ ಅಳವಡಿಕೆಯಲ್ಲೂ ಒಂದು ಹೆಜ್ಜೆ ಮುಂದುವರಿದೇ ವಿನ್ಯಾಸಗೊಳಿಸಿದೆ. ಇವೆಲ್ಲದರ ಜತೆಗೆ ಅಲಾಯ್ ವೀಲ್‌ಗಳು ಈ ಕಾರ್ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಎಂಜಿನ್ ಸಾಮರ್ಥ್ಯವೇನು?: ಫ್ಯೂಚರ್-ಎಸ್ ಕಾರು ಗಾತ್ರದಲ್ಲಿ ಚಿಕ್ಕದೆನಿಸಿದರೂ, ಸಾಮರ್ಥ್ಯದ ಎಂಜಿನ್ ಒದಗಿಸುವುದರಲ್ಲಿ ಮಾರುತಿ ಸುಜುಕಿ ತನ್ನ ಎಂದಿನ ಸ್ಟ್ಯಾಂಡರ್ಡ್‌ನಲ್ಲಿ ರಾಜಿ ಮಾಡಿಕೊಂಡಿಲ್ಲ. 1.2ಲೀಟರ್ ಜತೆ 1200ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಅಷ್ಟೇ ಅಲ್ಲ, ಗ್ರಾಹಕರ ಅಪೇಕ್ಷೆಯ ಮೇರೆಗೆ ಮುಂಬರುವ ದಿನಗಳಲ್ಲಿ ಬ್ಯಾಟರಿ ಚಾಲಿತ ವ್ಯವಸ್ಥೆಯ ವೇರಿಯಂಟ್ ಕೂಡ ಪರಿಚಯಿಸುವುದಾಗಿ ಕಂಪನಿ ಹೇಳಿಕೊಂಡಿದೆ.
2019ರಲ್ಲಿ ಬಿಡುಗಡೆ?: ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ ಫ್ಯೂಚರ್ ಎಸ್ ಕಾರನ್ನು 2019ರಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ ಬಳಿಕ ಸಿಕ್ಕಿರುವ ಫೀಡ್‌ಬ್ಯಾಕ್ ಪ್ರಕಾರ ಒಂದಿಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.
ಎಕ್ಸ್ ಶೋ ರೂಂ ಬೆಲೆ: ಮಾರುಕಟ್ಟೆಯಲ್ಲಿ ಸದ್ಯಕ್ಕೆ ಚರ್ಚೆಯಾಗುತ್ತಿರುವ ಮಾಹಿತಿಯ ಪ್ರಕಾರ ಈ ಕಾರಿನ ಆರಂಭಿಕ ಬೆಲೆ 4.50 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
* ಗಣಪತಿ ಅಗ್ನಿಹೋತ್ರಿ