Advertisement
ಅದಕ್ಕಾಗಿ ಎನ್‌ಇಪಿ-2020 ತಿರಸ್ಕರಿಸಿ ನಮ್ಮದೇ ಆದ ನೀತಿ ಜಾರಿಗೊಳಿಸುತ್ತೇವೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ವಿಚಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಪಠ್ಯಪುಸ್ತಕ ಪರಿಷ್ಕರಣೆಗೆ ನಿರ್ಧ ರಿಸಿದ್ದೆವು. ಕಾಲಾವಕಾಶವಿಲ್ಲದ ಕಾರಣ ಸಮಗ್ರ ಬದಲಾವಣೆ ಸಾಧ್ಯವಾಗಲಿಲ್ಲ. ಕೆಲವು ಅಗತ್ಯ ಬದಲಾವಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಠ್ಯ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು. ರಾಜ್ಯದ ಮತ್ತು ಎಲ್ಲ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಮಾತನಾಡಿ, ಸಾಕಷ್ಟು ತಯಾರಿ ಮಾಡಿಕೊಂಡು ಹೊಸ ಶಿಕ್ಷಣ ನೀತಿ ಮಾಡುತ್ತೇವೆ. ಸಾಕಷ್ಟು ಬದಲಾವಣೆಯನ್ನು ನಾವು ಶಿಕ್ಷಣ ರಂಗದಲ್ಲಿ ತರಬೇಕಿದೆ ಮತ್ತು ತರುತ್ತೇವೆ. ಎನ್‌ಇಪಿ- 2020ನ್ನು ಅವರು ಹೇರಿದ್ದಾರೆ. ನಾವು ಅವರಂತೆ ಗಡಿಬಿಡಿಯಲ್ಲಿ ಮಾಡುವುದಿಲ್ಲ. ಇತಿಹಾಸವನ್ನು ಪುನಃ ಬರೆಯಲಾಗುವುದಿಲ್ಲ. ಆದರೆ ಅದಕ್ಕೂ ಹಿಂದಿನ ಸರಕಾರ ಕೈ ಹಾಕಿತ್ತು. ಅದನ್ನು ತಿರುಚಲು ಬಿಡೆವು ಎಂದರು. ಹೊಸ ಶಿಕ್ಷಣ ನೀತಿಗೆ ಸಲಹೆ ನೀಡಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಮನುವಾದಿಗಳ ಮತ್ತು ಅಧುನಿಕ ಚಿಂತನೆಗಳ ವಿರೋಧಿಗಳ ನೀತಿಯಾಗಿದೆ. ಎಲ್ಲ ರನ್ನೂ ಒಳಗೊಂಡ, ಬಹುತ್ವವನ್ನು ರಕ್ಷಿಸುವ, ಶಿಕ್ಷಣ ನೀತಿಗಳನ್ನು ಜಾರಿಗೊಳಿಸಬೇಕಿದೆ. ಅಂತಹ ಶ್ರೇಷ್ಠ ಶಿಕ್ಷಣ ನೀತಿ ಮತ್ತು ವೈಜ್ಞಾನಿಕ ಧೋರಣೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆ ಎತ್ತಲು ಸಾಧ್ಯವಿದೆ. ಕೇಸರೀಕರಣ, ಕೋಮುವಾದೀಕರಣ ಶಿಕ್ಷಣದಲ್ಲಿ ತೂರದಿರಲಿ, ಶಿಕ್ಷಣ, ಸಮಾನತೆ, ಭ್ರಾತೃತ್ವದಡಿ ಯಲ್ಲಿ ಹೊಸ ಶಿಕ್ಷಣ ನೀತಿ ಮೂಡಿಬರಬೇಕು ಎಂದರು.
Related Articles
Advertisement