Advertisement

ಪೌಷ್ಟಿಕ ಆಹಾರ ದಿಂದ ಭವಿಷ್ಯ ಉಜ್ವಲ

11:24 AM Dec 04, 2017 | Team Udayavani |

ಕಲಬುರಗಿ: ಪೌಷ್ಟಿಕ ಆಹಾರ ಸೇವನೆ ಯಿಂದ ಮಕ್ಕಳಲ್ಲಿ ದೈಹಿಕ ಶಕ್ತಿ ಹೆಚ್ಚಿ ಅವರ ಭವಿಷ್ಯ ಉಜ್ವಲವಾಗಿ ಬೆಳೆಯುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಸಮತೋಲನ ಆಹಾರ ನೀಡುವ ನಿಟ್ಟಿನಲ್ಲಿ ಪಾಲಕರು ಎಚ್ಚರಿಕೆವಹಿಸಬೇಕು ಎಂದು ಉಪನ್ಯಾಸಕ ಎಚ್‌.ಬಿ. ಪಾಟೀಲ ಹೇಳಿದರು. ಶನಿವಾರ ಆಳಂದ ರಸ್ತೆಯಲ್ಲಿರುವ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಏರ್ಪಡಿಸಿದ್ದ ಅಪೌಷ್ಟಿಕತೆ ನಿರ್ಮೂಲನೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ.
ಮಗುವಿದ್ದಾಗಲೇ ಸಮತೋಲನ ಆಹಾರ ದೊರೆತರೆ, ಆ ಮಗು ಮುಂದೆ ದೈಹಿಕವಾಗಿ, ಮಾನಸಿಕವಾಗಿ, ಸದೃಢವಾಗಿ ಬೆಳೆಯಲು ಸಾಧ್ಯವಿದೆ. ಅಪೌಷ್ಟಿಕತೆಯಿಂದ ವ್ಯಕ್ತಿಯು ಸದೃಢವಾಗಿ ಬೆಳೆಯಲು ಆಗುತ್ತಿಲ್ಲ. ಆದ್ದರಿಂದ ಇದರ ನಿರ್ಮೂಲನೆ ಮಾಡುವದು ಅವಶ್ಯಕವಾಗಿದೆ ಎಂದರು.

ಅಪೌಷ್ಟಿಕತೆಯೆಂಬುದು ಒಂದು ವರ್ತುಲವಾಗಿದೆ. 2.5 ಕೆ.ಜಿ.ಗಿಂತ ಕಡಿಮೆ ತೂಕದ ಮಗು ಜನಿಸಿದರೆ, ಮುಂದೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರೌಢಾವಸ್ಥೆ ಹಂತ ತಲುಪಿದ ನಂತರವು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಯು ದೊರೆಯುತ್ತಾರೆ. ಅಂತಹ ತಾಯಿಗೆ ಜನಿಸಿದ ಮಗುವು ಸಹಜವಾಗಿಯೇ ಅಪೌಷ್ಟಿಕತೆಯನ್ನು
ಎದುರಿಸುತ್ತದೆ ಎಂದು ಹೇಳಿದರು.

ಮಗುವು ಹುಟ್ಟಿದಾಗ ಬಡಕಲು ದೇಹ ಮತ್ತು ಕಡಿಮೆ ತೂಕ ಹೊಂದಿ ಸಾಮರ್ಥ್ಯ ಇರುವುದಿಲ್ಲ. ಸೂಕ್ತ ಎದೆ ಹಾಲು ದೊರೆಯದೇ ಇರುವುದು ಸೇರಿದಂತೆ ಅನೇಕ ಅಂಶಗಳಿಂದ ಮಗುವು ಕ್ಷೀಣವಾಗಿರುತ್ತದೆ. ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. 

ಆದ್ದರಿಂದ ತಾಯಿಯಾದವಳು ಹೆಚ್ಚು ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು, 18 ವಯಸ್ಸಿನ ಒಳಗಾಗಿ ವಿವಾಹವಾಗುವುದಿರಂದ ತಾಯಿ ಹಾಗೂ ಮಗುವಿಗೂ ತೊಂದರೆಯಾಗುತ್ತದೆ, ಇದರ ಬಗ್ಗೆ ವ್ಯಾಪಕ ಜಾಗೃತಿ ಮೂಡಬೇಕು. ಪೌಷ್ಟಿಕತೆ ನಿರ್ಮೂಲನೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ತಿಳಿಸಿದರು.

Advertisement

ಸಂಸ್ಥೆಯ ಮಲ್ಲಿಕಾರ್ಜುನ ಬಂಗರಗಿ, ಶಂಭುಲಿಂಗ ಬಂಗರಗಿ, ಮುಖ್ಯ ಶಿಕ್ಷಕಿ ನಿಂಗಮ್ಮ ಬಿರಾದಾರ, ಸಹ ಶಿಕ್ಷಕರಾದ
ಚಂಪಕಲಾ ನೆಲ್ಲೂರೆ, ರೇಣುಕಾ ಮಳ್ಳಿ, ಮಹಾನಂದ, ಕ್ಷೇಮಲಿಂಗ ಮಂಗೊಂಡಿ ಸೇರಿದಂತೆ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next