Advertisement
ಪರೀಕ್ಷೆಯಲ್ಲಿ ಸಿಹಿಯೋ, ಕಹಿಯೋ ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಉತ್ತೀರ್ಣನಾದರೆ ಖುಷಿಪಟ್ಟು, ಒಂದುವೇಳೆ ಪರೀಕ್ಷೆಯಲ್ಲಿ ಫೇಲ್ ಆದರೆ, ಕುಗ್ಗದೆ, ಛಲದಿಂದ ಮುನ್ನಡೆಯಬೇಕು. ಪರೀಕ್ಷೆಗೆ ಮಿಗಿಲಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಬೇಕು. ಶೈಕ್ಷಣಿಕ ಪರೀಕ್ಷೆಯಲ್ಲಿ ಪಾಸ್ ಆಗದ ಅನೇಕ ಮಂದಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬರಬಾರದು.
Related Articles
ಮಕ್ಕಳು ಉತ್ತಮ ಅಂಕ ಗಳಿಸಿ ಎತ್ತರದ ಸ್ಥಾನ ಏರಬೇಕು ಎಂಬ ಕನಸು ಸಾಮಾನ್ಯವಾಗಿ ಎಲ್ಲ ಹೆತ್ತವಲ್ಲಿಯೂ ಇರುತ್ತದೆ. ಹಾಗೆಂದು ಮಕ್ಕಳು ಫೇಲ್ ಆಗಿದ್ದಾರೆ ಎಂದು ನಿರಾಶೆಗೊಳ್ಳದೆ, ತನ್ನ ಆಕೋಶ್ರವನ್ನು ಮಕ್ಕಳ ಎದುರು ಹೊರಹಾಕಬಾರದು. ಮಕ್ಕಳಿಗೆ ಸಾಂತ್ವನ ಹೇಳಲು ಮುಂದಾಗಬೇಕು. ಮುಂದೆ ತಿದ್ದಿಕೋ ಎಂದು ಮಕ್ಕಳಿಗೆ ಆಧಾರವಾಗಿ ನಿಲ್ಲಬೇಕು. ಅವರಿವರ ಜತೆ ಹೋಲಿಕೆ ಮಾಡಿ ಹೀಯಾಳಿಸುವುದು ಸರಿಯಲ್ಲ.
Advertisement
ಅಲ್ಪಾವಧಿ ಕೋರ್ಸ್ ಸೇರಿಉದಾಹರಣೆಗೆ ಪಿಯುಸಿಯಲ್ಲಿ ಫೇಲ್ ಆದರೆ, ಸುಮ್ಮನೆ ಕೂರದೆ, ಒಂದು ವರ್ಷ ಕಾಲ ಕಂಪ್ಯೂಟರ್ ಕೋರ್ಸ್, ಮೊಬೈಲ್ ಟೆಕ್ನೀಶಿಯನ್, ಎ.ಸಿ. ರಿಪೇರಿ ಕೋರ್ಸ್ ಸಹಿತ ಮತ್ತಿತರ ಅಲ್ಪಾವಧಿಯ ಕೋರ್ಸ್‌ಗಳಿವೆ. ಇವುಗಳಿಗೆ ಸೇರಿ, ಮುಂದಿನ ವರ್ಷ ಪರೀಕ್ಷೆ ಬರೆಯಲು ಅವಕಾಶವಿದೆ. ಇನ್ನು, ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ, ಟ್ಯುಟೋರಿಯಲ್ ಮುಖೇನ ಕಲಿತು ಪಾಸ್ ಆಗಬಹುದು.
ಪ್ರಥಮ ಪಿಯುಸಿಯಲ್ಲಿ ಫೇಲ್ ಆದರೂ ಐಟಿಐ ಕೋರ್ಸ್ ಮಾಡಬಹುದು. ಇದರ ಮುಖೇನ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ಐಟಿಐ ಕಲಿತುಕೊಂಡೇ ಪರೀಕ್ಷೆ ಬರೆದು ಪಾಸ್ ಆಗಿರುವವ ಅನೇಕ ಉದಾಹರಣೆಗಳಿವೆ. ಇನ್ನು, ಸಣ್ಣ ಮಟ್ಟಿನ ಉದ್ಯಮದತ್ತಲೂ ಮುಖ ಮಾಡಲು ಅವಕಾಶವಿದೆ. ಬಿಲ್‌ಗೇಟ್ಸ್ ಕೂಡ ಫೇಲ್ ಆಗಿದ್ದ
ಪರೀಕ್ಷೆಯಲ್ಲಿ ಫೇಲ್ ಆದವರು ಬಿಲ್‌ಗೇಟ್ಸ್ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಬಿಲ್‌ಗೇಟ್ಸ್ ಅವರು ಕೂಡ ಪರೀಕ್ಷೆಯಲ್ಲಿ ಸಾಲು ಸಾಲು ಫೇಲ್ ಆಗಿದ್ದರು. ಅವರ ಜತೆಗಿದ್ದ ಸ್ನೇಹಿತರು ಉತ್ತೀರ್ಣರಾಗಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಆದರೆ ಬಿಲ್‌ಗೇಟ್ಸ್ ಸುಮ್ಮನೆ ಕೂರದೆ ಸಾಫ್ಟ್ವೇರ್ ಕಂಪೆನಿ ಕಟ್ಟಿದರು. ಸಾಫ್ಟ್ವೇರ್ ಎಂಜಿನಿಯರ್‌ಗಳು ಬಿಲ್‌ಗೇಟ್ಸ್ ಅವರ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುವಂತಾಯಿತು. ನವೀನ್ ಭಟ್, ಇಳಂತಿಲ