Advertisement

ಜೆಡಿಎಸ್‌ ಉಚ್ಚಾಟಿತ ಶಾಸಕರ ಕೈ ಸೇರ್ಪಡೆಗೆ ಮತ್ತಷ್ಟು ಪುಷ್ಟಿ

06:59 AM Mar 31, 2017 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದ ಮೇಲೆ ಜೆಡಿಎಸ್‌ನಿಂದ ಆಮಾನತುಗೊಂಡಿರುವ ಏಳು ಶಾಸಕರ ಕಾಂಗ್ರೆಸ್‌ ಪ್ರವೇಶ ಮತ್ತಷ್ಟು ಖಚಿತವಾಗಿದ್ದು, ಏಳು ಶಾಸಕರ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಏಳು ಶಾಸಕರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. ನಾವು ಈ ವಿಚಾರವನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು. ಹೈಕಮಾಂಡ್‌ ಜೊತೆ ಶಾಸಕರ ಪಕ್ಷ ಸೇರ್ಪಡೆ ಕುರಿತು ನಾನು ಹಾಗೂ ಮುಖ್ಯಮಂತ್ರಿ 
ಚರ್ಚೆ ನಡೆಸುತ್ತೇವೆ. ಅಂತಿಮವಾಗಿ ಹೈಕಮಾಂಡ್‌ ಆದೇಶ ನೀಡಿದ ಬಳಿಕ ಪಕ್ಷ ಸೇರ್ಪಡೆಯ ಪ್ರಕ್ರಿಯೆಗಳು ನಡೆಯಲಿವೆ
ಎಂದರು. ಚುನಾವಣೆಗಳು ಸಮೀಪಿಸುವಾಗ ಪಕ್ಷಾಂತರ ಪರ್ವ ನಡೆಯುವುದು ಸಾಮಾನ್ಯ. ಈಗ ಜೆಡಿಎಸ್‌ ಪಕ್ಷದಿಂದ ನಮ್ಮ ಪಕ್ಷಕ್ಕೆ
ಸೇರ್ಪಡೆಯಾಗುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟî… ನೀಡುವುದು ಹಾಗೂ ಕಳೆದ ಚುನಾವಣೆಯಲ್ಲಿ ಆ ಕ್ಷೇತ್ರಗಳಲ್ಲಿ
ನಮ್ಮ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದವರಿಗೆ ಯಾವ ರೀತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಎಲ್ಲ ವಿಚಾರಗಳನ್ನು ಸಮಾಲೋಚಿಸಿ
ತೀರ್ಮಾನ ಕೈಗೊಳ್ಳುತ್ತೇವೆ.

ಆ ಕ್ಷೇತ್ರಗಳಲ್ಲಿ ಕಳೆದ ಬಾರಿ ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡಿದವರ ಜತೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ಎರಡು ಕ್ಷೇತ್ರಗಳ ಉಪ ಚುನಾವಣಾ ಪ್ರಚಾರಕ್ಕೆ ಸಚಿವರ ತಂಡವನ್ನು ನೇಮಿಸಿಧಿ ರುವುದನ್ನು ಸಮರ್ಥಿಸಿಕೊಂಡ ಪರಮೇಶ್ವರ್‌,
ಸಚಿವರು ಪಕ್ಷದ ಕೆಲಸ ಮಾಡುವುದು ತಪ್ಪೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ 21 ಉಪ ಚುನಾವಣೆಗಳು ನಡೆದಿವೆ. ಆಗ ಎಷ್ಟು ಮಂದಿ ಸಚಿವರು ಯಾವ ಯಾವ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿದ್ದಾರೆ ಎಂಬುದನ್ನು ಒಮ್ಮೆ ಬಿಜೆಪಿ ಮುಖಂಡರು ಸ್ಮರಿಸಿಕೊಳ್ಳಲಿ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನವರು ಒಂದು ಮತಕ್ಕೆ ನಾಲ್ಕು ಸಾವಿರ ರೂ. ಹಂಚುತ್ತಿದ್ದಾರೆ ಎಂಬ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.
ಈಶ್ವರಪ್ಪ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌, ಈಶ್ವರಪ್ಪ ತಮ್ಮ ಅನುಭವವನ್ನು ಹಂಚಿಕೊಂಡಿರುಬೇಕು ಎಂದು ಲೇವಡಿ ಮಾಡಿದರು. 

ತೀರ್ಮಾನ ಪುನರ್‌ ಪರಿಶೀಲನೆ  ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಜಂಟಿ ಸದನ ಸಮಿತಿ 
ರಚನೆ ಮಾಡುವ ತೀರ್ಮಾನ ಕೈಗೊಂಡು ವಿಧಾನಪರಿಷತ್ತಿಗೆ ಕಳುಹಿಸಿಕೊಡಲಾಗಿದೆ. ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರ
ಎರಡು ಜನರನ್ನು ಪ್ರತಿನಿಧಿಸುವಂತದ್ದು. ಆದುದರಿಂದ, ಎರಡು ಕ್ಷೇತ್ರದವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್‌ ಹೇಳಿದರು. ಜಂಟಿ ಸದನ ಸಮಿತಿ ರಚನೆಗೆ ಸಂಬಂಧಿಸಿದಂತೆ ಸ್ಪೀಕರ್‌ ಕೈಗೊಂಡಿರುವ ತೀರ್ಮಾನವನ್ನು ಪುನರ್‌ ಪರಿಶೀಲನೆಗೊಳಪಡಿಸುವ ಬಗ್ಗೆ ಸರ್ಕಾರ ಗಮನಹರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next