Advertisement
ಧರ್ಮಸ್ಥಳದಲ್ಲಿ ಸೋಮವಾರ ಅನ್ನಪೂರ್ಣಾ ಛತ್ರ ಹಾಗೂ ಕಾರ್ ಮ್ಯೂಸಿಂಗೆ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡಿದ 37 ಕೆವಿ ಸೌರಶಕ್ತಿ ಬಳಕೆಗೆ ಚಾಲನೆ ನೀಡಿ ಶುಭ ಹಾರೈಸಿದರು.
Related Articles
Advertisement
ಅನ್ನಪೂರ್ಣಾ ಛತ್ರಕ್ಕೆ 32 ಕೆ.ವಿ. ಸಾಮರ್ಥ್ಯದ ಘಟಕ ಹಾಗೂ ಕಾರ್ ಮ್ಯೂಸಿಯಂಗೆ 5 ಕಿಲೋವಾಟ್ ಸಾಮರ್ಥ್ಯದ ಘಟಕ ಸಹಿತ ಒಟ್ಟು 37 ಕಿಲೋವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಅಳವಡಿಸಿ ಸೌರಶಕ್ತಿ ಬಳಕೆಯೊಂದಿಗೆ ವಿದ್ಯುತ್ ದೀಪ ಮತ್ತು ಫ್ಯಾನ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ.
ಹೇಮಾವತಿ ವೀ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೆಲ್ಕೋದ ಡಿ.ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಅನ್ನಪೂರ್ಣಾದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ನವೀನ್ ವಂದಿಸಿದರು.
ಅನ್ನದಾನಕ್ಕೂ ಇನ್ಮುಂದೆ ಸೋಲಾರ್ ಶಕ್ತಿಧರ್ಮಸ್ಥಳದಿಂದ ಆರಂಭಿಸಿದ ಯೋಜನೆಗಳು ಮಾಡೆಲ್‌ಗಳಾಗಿವೆ. ಸದ್ಯದಲ್ಲೇ ಧರ್ಮಸ್ಥಳದಿಂದ ಕೆಲವು ಹಿರಿಯ ನೌಕರರು ಶಿರಡಿಗೆ ತೆರಳಿ ಸೌರಶಕ್ತಿಯ ಸ್ಟೀಮ್ ಮೂಲಕ ಅನ್ನ ಬೇಯುವ ವಿಧಾನವನ್ನು ಅಧ್ಯಯನ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುವರು. ಮುಂದೆ ಇಲ್ಲಿನ ಎಲ್ಲ ವಸತಿಛತ್ರಗಳು ಹಾಗೂ ಕಚೇರಿಗಳಲ್ಲಿಯೂ ಸೌರಶಕ್ತಿಯ ಸದುಪಯೋಗ ಮಾಡಲಾಗುವುದು ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.