ಬೆಂಗಳೂರು: ಬಿಎಂಟಿಸಿ ಇದೀಗ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ಮೆಟ್ರೋ ಫೀಡರ್ ಸಾರಿಗೆ ಸೇವೆಯನ್ನು ಪ್ರಾರಂಭಿಸಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಜಾಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ದಾಸರಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಮಾರ್ಗ ಸಂಖ್ಯೆ:ಎಂಎಫ್-25ಎ, ಎಂಎಫ್-29, ಎಂಎಫ್-30, ಎಂಎಫ್-31 ಒಟ್ಟು 4 ಮಾರ್ಗಗಳಲ್ಲಿ 7 ಅನುಸೂಚಿಗಳಿಂದ 104 ಟ್ರಿಪ್ ಓಡಾಟ ನಡೆಸಲಿವೆ.
ಮಾದವಾರದ ಮೈದಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಶಾಸಕ ಎಸ್. ಮುನಿರಾಜು, ಬಿಎಂಟಿಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ, ಕಲಾ ಕೃಷ್ಣಸ್ವಾಮಿ, ಪ್ರಭಾಕರ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರಿನಲ್ಲಿ 73.81 ಕಿ.ಮೀ. ಉದ್ದದ ಮೆಟ್ರೋ ಮಾರ್ಗವಿದ್ದು, ಮೆಟ್ರೋ ಪ್ರಯಾ ಣಿಕರ ಅನುಕೂಲಕ್ಕಾಗಿ ನಗರದ ವಿವಿಧ ಮೆಟ್ರೋ ನಿಲ್ದಾಣಗಳಿಂದ ಪ್ರಸ್ತುತ 38 ಮಾರ್ಗ ಗಳಲ್ಲಿ ಒಟ್ಟು 2264 ಟ್ರಿಪ್ ಬಸ್ ಸಂಚರಿ ಸುತ್ತವೆ. ಇದೀಗ ಮತ್ತಷ್ಟು ಮೆಟ್ರೋ ಫೀಡರ್ ಸೇವೆ ಆರಂಭಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿಕ್ಕಬಾಣಾವರದಿಂದ ದಾಸರಹಳ್ಳಿ 8ನೇ ಮೈಲಿ, ಅಂಧ್ರಹಳ್ಳಿ, ಹೇರೋಹಳ್ಳಿ ಕ್ರಾಸ್, ಸುಂಕದಕಟ್ಟೆ ಮಾರ್ಗವಾಗಿ ಸುಮನಹಳ್ಳಿ ಜಂಕ್ಷನ್‌ಗೆ ಮಾರ್ಗ ಸಂಖ್ಯೆ: ಬಿಸಿ-8 ರಲ್ಲಿ 6 ಅನುಸೂಚಿಗಳಿಂದ 56 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುವುದು. ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸುವ 9 ಮೀ. ಉದ್ದದ ಮಿನಿ ಬಸ್ಸುಗಳನ್ನು ವಿಶೇಷ ರೀತಿಯಲ್ಲಿ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಎನ್-ಸಿಎಪಿ ಯೋಜನೆಯಡಿಯಲ್ಲಿನ 9 ಮೀ. ಉದ್ದದ 120 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕಲ್ ಬಸ್ಸುಗಳನ್ನು ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲಾಗುವುದು. ಏಪ್ರಿಲ್-2024ರ ಅಂತ್ಯದೊಳಗೆ ನಗರದಲ್ಲಿ ಸಂಸ್ಥೆಯಿಂದ ಪ್ರಸ್ತುತ ಆಚರಣೆಗೊಳಿಸುತ್ತಿರುವ 121 ಮೆಟ್ರೋ ಸಾರಿಗೆಗಳ ಜತೆಗೆ 179 ಸಾರಿಗೆಗಳನ್ನು ಹೆಚ್ಚಿಸಿ, ಒಟ್ಟು 300 ಮೆಟ್ರೊ ಫೀಡರ್ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ವಾಯು ವಜ್ರ : ನಗರದ ವಿವಿಧ ಪ್ರಮುಖ ಸ್ಥಳಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಸ್ತುತ 17 ಮಾರ್ಗಗಳಲ್ಲಿ, 132 ಅನುಸೂಚಿಗಳಿಂದ ಒಟ್ಟು 912 ಟ್ರಿಪ್‌ಗ್ಳಲ್ಲಿ ಬಸ್ ಕಾರ್ಯಾಚರಣೆ ನಡೆಸಲಿದೆ. ಜತೆಗೆ ತುಮಕೂರು ರಸ್ತೆ ಕಡೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾದವರ ನೈಸ್ ರಸ್ತೆ ಜಂಕ್ಷನ್ (ಬಿಐಇಸಿ)ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ: ಕೆಐಎ-18 ರಲ್ಲಿ 5 ಅನುಸೂಚಿ ಗಳಿಂದ 27 ಟ್ರಿಪ್‌ಗ್ಳಲ್ಲಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೆಟ್ ವರೆಗೆ ಬಸ್ ವ್ಯವಸ್ಥೆ ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟಾçನಿಕ್ ಸಿಟಿ ವಿಪ್ರೋ ಗೈಟ್‌ಗೆ ಬೆಳಗ್ಗೆ ಮತ್ತು ಸಂಜೆ ಸೇರಿ ಒಟ್ಟು 65 ಟ್ರಿಪ್‌ಗ್ಳಲ್ಲಿ ಬಸ್‌ಗಳು ನೈಸ್ ರಸ್ತೆ ಮಾರ್ಗವಾಗಿ ಸಂಚರಿಸಲಿವೆ. ತುಮ ಕೂರು ರಸ್ತೆ , ಎಲೆಕ್ಟಾçನಿಕ್ ಸಿಟಿ ನೈಸ್ ರಸ್ತೆ ಜಂಕ್ಷನ್‌ನಿಂದ ವಿವಿಧ ಸಾರಿಗೆಗಳ ಮೂಲಕ ಪ್ರಯಾಣಿ ಸುತ್ತಿದ್ದ ಪ್ರಯಾಣಿಕರನ್ನು ಗಮನಿಸಿ, ಈ ಪ್ರಯಾಣಿಕರ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಶನಿವಾರದಿಂದ ಕಾರ್ಯಾಚರಣೆಗೊಳಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಮಾದವಾರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಮಾರ್ಗ ಸಂಖ್ಯೆ: ನೈಸ್-10ರಲ್ಲಿ 21 ಅನುಸೂಚಿಗಳನ್ನು ಪ್ರತಿ 10 ನಿಮಿಷಕ್ಕೊಂದರಂತೆ ಒಟ್ಟು 147 ಟ್ರಿಪ್ ಸಂಚರಿಸಲಿವೆ. ಸದರಿ ಸಾರಿಗೆಗಳಲ್ಲಿ ಮಾಗಡಿ ರಸ್ತೆ ನೈಸ್ ಜಂಕ್ಷನ್, ಮೈಸೂರು ರಸ್ತೆ ನೈಸ್ ಜಂಕ್ಷನ್, ಕನಕಪುರ ರಸ್ತೆ ನೈಸ್ ಜಂಕ್ಷನ್ ಹಾಗೂ ಬನ್ನೇರುಘಟ್ಟ ರಸ್ತೆ ನೈಸ್ ಜಂಕ್ಷನ್ ಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ. ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ದರ 35 ರೂ.ಹಾಗೂ ಟೋಲ್ ಬಳಕೆದಾರರ ಶುಲ್ಕ ರೂ.25 ಸೇರಿ ಒಟ್ಟು 60 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಶಕ್ತಿ ಯೋಜನೆಯ ಫಲಾನು ಭವಿಗಳು ನೈಸ್ ಸಾರಿಗೆ ಸೌಲಭ್ಯವು ಸಂಪೂರ್ಣ ಉಚಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.