Advertisement

ಅಂಗ ದಾನಿಗಳಿಗೆ ಮತ್ತಷ್ಟು ಅವಕಾಶ

09:30 AM Aug 30, 2017 | Harsha Rao |

ಹೊಸದಿಲ್ಲಿ: ಅಂಗಾಂಗ ದಾನದ ಅರ್ಹತೆಯ ಬಗ್ಗೆ ಇದ್ದ ನಿಯಮವನ್ನು ಕೇಂದ್ರ ಸರಕಾರ ಸಡಿಲಗೊಳಿಸಿದ್ದು “ಸಮೀಪದ ಬಂಧು’ಗಳಿಗೂ ಅವಕಾಶ ಕಲ್ಪಿಸಿದೆ. 

Advertisement

ಈ ಕುರಿತಂತೆ, ಸುತ್ತೋಲೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ್ದು, ಮಾನವ ಅಂಗಾಂಗ ಕಸಿ ಕಾಯ್ದೆ 1994 (2011ರಲ್ಲಿ ತಿದ್ದುಪಡಿಯಾದಂತೆ)ಕ್ಕೆ ತಿದ್ದುಪಡಿ ತರುವುದಾಗಿ ಹೇಳಿದೆ. ತಿದ್ದುಪಡಿ ಕಾಯ್ದೆ ಬಗ್ಗೆ ಸೆ.25ರವರೆಗೆ ಸಾರ್ವಜನಿಕರು ಪ್ರತಿಕ್ರಿಯಿಸಲು ಅವಕಾಶವಿದೆ.

ಈ ಮೊದಲು ಹತ್ತಿರದ ಸಂಬಂಧಿಗಳು ಎಂದರೆ, ಹೆಂಡತಿ, ಪುತ್ರರು, ಪುತ್ರಿಯರು, ಗಂಡ, ತಾಯಿ, ಸಹೋದರರು ಮತ್ತು ಸಹೋದರರಿಯರಿಂದ ಅಂಗಾಂಗ ದಾನ ಪಡೆಯಲು ಅವಕಾಶ ಇತ್ತು. ಇದೀಗ ಈ “ಹತ್ತಿರದ ಸಂಬಂಧಿ’ ಎಂಬ ಪದದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಮಲ ತಂದೆ, ಮಲ ಸಹೋದರ/ಸಹೋದರಿ ಎಂದೂ ಸೇರಿಸಲಾಗಿದೆ. ಇದರಿಂದ ಅಂಗಾಂಗ ದಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮೊದಲು ಹತ್ತಿರದ ಸಂಬಂಧಿಗಳಿಂದ ಅಂಗಾಂಗ ಅಲಭ್ಯತೆ, ರಕ್ತದ ಗುಂಪು ಜೊತೆಯಾಗದೇ ಇರುವ ಸಮಸ್ಯೆಯಿಂದ ಅಂಗಾಂಗ ದಾನಿಗಳು ಸೂಕ್ತವಾಗಿ ಲಭ್ಯವಾಗುತ್ತಿರಲಿಲ್ಲ. ಆದ್ದರಿಂದ ಕಾನೂನು ಅನ್ವಯ ವ್ಯಾಪ್ತಿ ಹೆಚ್ಚಿಸಲಾಗಿದೆ. ಈ ಕುರಿತು ಸಾರ್ವಜನಿಕರು ತಮ್ಮ ಸಲಹೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ amendmentthotairi @gmail.com ಇಮೇಲ್‌ಗೆ ನೀಡುವಂತೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next