ಸ್ಕ್ಯಾನ್ ಅಥವಾ ಮೂಗಿನ ಮಾದರಿ ವಿನ್ಯಾಸ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
Advertisement
ಮನುಷ್ಯನ ಬೆರಳಚ್ಚಿನ ರೀತಿಯಲ್ಲೇ ಜಾನುವಾರುಗಳ ಮೂಗಿನ ವಿನ್ಯಾಸವೂ ವಿಶಿಷ್ಟವಾಗಿದ್ದು, ಒಂದರಂತೆ ಇನ್ನೊಂದಿರುವುದಿಲ್ಲ. ಹಾಗಾಗಿ ಅದನ್ನು ಪಶುಆಧಾರ್ ಯೋಜನೆಗೆ ಬಳಸಿಕೊಳ್ಳಲಾಗುವುದು.
Related Articles
2016-17ರಲ್ಲಿ ದೇಶಾದ್ಯಂತ ಜಾನುವಾರುಗಳಿಗೆ ವಿಶಿಷ್ಟ ಗುರುತುಸಂಖ್ಯೆ ನೀಡುವ ಜಾನುವಾರು ಉತ್ಪಾದಕತೆ ಮತ್ತು ಆರೋಗ್ಯಕ್ಕಾಗಿ ಮಾಹಿತಿ ಜಾಲ (ಐಎನ್‌ಎಪಿಎಚ್) ಅಭಿವೃದ್ಧಿಪಡಿಸಲಾಯಿತು. ಇದರಂತೆ ಪ್ರತೀ ಪಶುವಿಗೂ ವಿಶಿಷ್ಟವಾದ ಆಧಾರ್ ರೀತಿಯ 12 ಅಂಕಿಗಳ ಗುರುತುಸಂಖ್ಯೆ ನೀಡಲಾಗುತ್ತದೆ.
Advertisement
ಕರುವಿಗೆ 4 ತಿಂಗಳಾಗುತ್ತಿದ್ದಂತೆಯೇ ಇಲಾಖೆಯವರು ಸ್ಥಳಕ್ಕೆ ತೆರಳಿ ಅದಕ್ಕೆ ಈ ವಿಶಿಷ್ಟ ಸಂಖ್ಯೆ ನೀಡುತ್ತಾರೆ. ಸಂಖ್ಯೆಯನ್ನು 8 ಗ್ರಾಂ ತೂಕದ ಹಳದಿಯ ಟ್ಯಾಗ್‌ನಲ್ಲಿ ಮುದ್ರಿಸಿ ದನ/ಕರುಗಳ ಕಿವಿಗೆ ಅಳವಡಿಸಲಾಗುತ್ತದೆ. ದನಗಳನ್ನು ಈ ಸಂಖ್ಯೆಯಿಂದ ಗುರುತಿಸುವುದು ಸಾಧ್ಯ. ಅಲ್ಲದೆ ಅವುಗಳ ವಿವರ, ಮಾಲಕರ ವಿವರ, ನೀಡಿರುವ ಲಸಿಕೆ, ತಳಿ ಇತ್ಯಾದಿಗಳನ್ನು ಐಎನ್‌ಎಪಿಎಚ್ ಡಾಟಾಬೇಸ್‌ನಲ್ಲಿ ಹುಡುಕಬಹುದಾಗಿದೆ. ಬೀಡಾಡಿ ದನಗಳಿಗೆ ಸದ್ಯ ಇಂತಹ ಯಾವುದೇ ದಾಖಲೀಕರಣ ವ್ಯವಸ್ಥೆ ಇರುವುದಿಲ್ಲ.
ಆದರೆ ಈ ಟ್ಯಾಗ್ ಜಾನುವಾರುಗಳಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಟ್ಯಾಗ್‌ನಲ್ಲಿರುವ ಸಂಖ್ಯೆ ಬೇಗನೆ ಮಸುಕಾಗುವುದು, ಟ್ಯಾಗ್ ಪೊದೆಗಳಿಗೆ ಸಿಲುಕಿ ಅಥವಾ ಇನ್ಯಾವುದೋ ಕಾರಣಕ್ಕೆ ಸೆಳೆಯಲ್ಪಟ್ಟು ದನಗಳ ಕಿವಿ ಹರಿದು ಹೋಗುವುದು, ಟ್ಯಾಗ್‌ನಿಂದಾಗಿ ಕಿವಿಯಲ್ಲಿ ವ್ರಣ ಆಗುವುದೂ ಪ್ರಮುಖ ಸಮಸ್ಯೆಗಳು. ಇನ್ನು ದೇಸೀ ಕೆಲವು ತಳಿಯ ಹಸುಗಳು ಕಿವಿಗೆ ಟ್ಯಾಗ್ ಅಳವಡಿಸಲು ಬಿಡುವುದಿಲ್ಲ. ಮನೆಯಲ್ಲಿ ಪುರುಷರು ಇಲ್ಲದಿರುವಾಗ ಅವುಗಳನ್ನು ನಿಯಂತ್ರಿಸಿ ಟ್ಯಾಗ್ ಹಾಕುವುದು ಸಿಬಂದಿಗೆ ಸವಾಲು.
ಜಾನುವಾರುಗಳ ಮೂಗಿನ ವಿನ್ಯಾಸದ ದತ್ತಾಂಶ ಸಂಗ್ರಹಕ್ಕೆ ಬೇಕಾಗುವ ಮಾನವ ಸಂಪನ್ಮೂಲದ ಪಟ್ಟಿ ನೀಡುವಂತೆ ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಈಗಾಗಲೇ ಸಲ್ಲಿಸಲಾಗಿದೆ. ಪ್ರಾಯೋಗಿಕವಾಗಿ ಇದು ಅನುಷ್ಠಾನವಾಗಲಿದ್ದು, ಟ್ಯಾಗ್ ಬದಲಿಗೆ ಹೆಚ್ಚು ಉಪಯುಕ್ತವಾಗಲಿದೆ.– ಡಾ| ಅರುಣ ಕುಮಾರ್ ಶೆಟ್ಟಿ, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಮಂಗಳೂರು ದ.ಕ. ಜಿಲ್ಲೆಯಲ್ಲಿರುವ ಜಾನುವಾರು (2019ರ ಪಶುಗಣತಿಯಂತೆ)
ಸ್ಥಳೀಯ: 65,997
ಮಿಶ್ರ ತಳಿ: 1,84,572
ಒಟ್ಟು: 2,50,569
ಉಡುಪಿಯಲ್ಲಿ ಒಟ್ಟು 2,54,776
ಚರ್ಮಗಂಟು ರೋಗದಲ್ಲಿ ಸಾವನ್ನಪ್ಪಿದ ಜಾನುವಾರುಗಳು: 456
ಪರಿಹಾರ: 352 ಜಾನುವಾರುಗಳಿಗೆ 65.05 ಲ.ರೂ. (ಉಳಿದವುಗಳಿಗೆ ಇನ್ನಷ್ಟೇ ಪರಿಹಾರ ನೀಡಬೇಕಿದೆ.) – ವೇಣುವಿನೋದ್ ಕೆ.ಎಸ್.