Advertisement

ಭೂದೇವಿ ಮಡಿಲಿಗೆ ಮನಗೂಳಿ ಮುತ್ಯಾ

04:57 PM Jan 30, 2021 | Nagendra Trasi |

ವಿಜಯಪುರ: ಗುರುವಾರ ನಿಧನರಾದ ಮಾಜಿ ಸಚಿವ ಹಾಗೂ ಸಿಂದಗಿ ಜೆಡಿಎಸ್‌ ಶಾಸಕ ಎಂ.ಸಿ. ಮನಗೂಳಿ ಅಂತ್ಯ ಸಂಸ್ಕಾರ ಶುಕ್ರವಾರ ನೆರವೇರಿತು.
ಸಿಂದಗಿ ಪಟ್ಟಣದಲ್ಲಿನ ತಮ್ಮದೇ ಅಧ್ಯಕ್ಷತೆಯಲ್ಲಿದ್ದ ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಆವರಣದಲ್ಲಿ ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಧಾರ್ಮಿಕ ಸಂಸ್ಕಾರದಂತೆ ಅಂತ್ಯ ಸಂಸ್ಕಾರದ ವಿಧಿವಿಧಾನ ನೆರವೇರಿಸಲಾಯಿತು.

Advertisement

ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ, ಕಡಕೋಳ ಮಡಿವಾಳ ಶ್ರೀ, ಸಿದ್ದಬಸವ ಕಬೀರ ಶ್ರೀ, ಬಂಥನಾಳ-ಯರನಾಳದ ಸಂಗನಬಸವ ಶ್ರೀ,
ಸಿಂದಗಿ ಸಾರಂಗಮಠದ ಸಾರಂಗ ಶ್ರೀ, ಬಬಲೇಶ್ವರ ಡಾ| ಮಹಾದೇವ ಶ್ರೀ, ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಸಂಸದ ರಮೇಶ ಜಿಗಜಿಣಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಚ್‌.ಡಿ.ರೇವಣ್ಣ, ಎಚ್‌.ಕೆ. ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎ.ಎಸ್‌. ಪಾಟೀಲ ನಡಹಳ್ಳಿ, ಡಾ| ಅಜಯಸಿಂಗ್‌, ಎಂ.ವೈ. ಪಾಟೀಲ, ದೇವಾನಂದ ಚವ್ಹಾಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಮಾಜಿ ಶಾಸಕರಾದ ಅಪ್ಪು ಪಟ್ಟಣಶೆಟ್ಟಿ, ಡಾ| ಪಿ.ಎಂ. ನಾಡಗೌಡ, ರಮೇಶ ಭೂಸನೂರ, ಶರಣಪ್ಪ ಸುಣಗಾರ, ರಾಜು ಅಲಗೂರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಬಾಗಲಕೋಟೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಶಾಸಕ ಮನಗೂಳಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಸರ್ಕಾರದ ಪರವಾಗಿ ಕುಶಾಲ ತೋಪು ಸಿಡಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಸ್ಥಳದಲ್ಲಿದ್ದ ಮನಗೂಳಿ ಅವರ ಕುಟುಂಬ ಸದಸ್ಯರಾದ ಪತ್ನಿ ಸಿದ್ದಮ್ಮ, ಮಕ್ಕಳಾದ ಅರವಿಂದ, ಅಶೋಕ, ಡಾ| ಚನ್ನವೀರ, ಪುತ್ರಿ ಅನಿತಾ ಸೇರಿದಂತೆ ಕುಟುಂಬದವರಿಗೆ ಮಠಾಧೀಶರು, ಗಣ್ಯರು, ಸಾಂತ್ವನ ಹೇಳಿದರು. ಮನಗೂಳಿ ಮುತ್ಯಾನ ಅಂತಿಮ ದರ್ಶನ ಪಡೆಯಲು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಹತ್ತಾರು ಸಾವಿರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next