ದೇವದುರ್ಗ: ರಾಷ್ಟ್ರೀಯ ಭದ್ರತಾ ಯೋಜನೆಯ ನೂರಾರು ಫಲಾನುಭವಿಗಳಿಗೆ ಮೂರುವರ್ಷದಿಂದ ಅನುದಾನ ವಿಳಂಬವಾಗಿದ್ದು, ಜನ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ.
ಕಳೆದ 2017 ರಿಂದ ರಾಷ್ಟ್ರೀಯ ಭದ್ರತಾ ಯೋಜನೆಯ ಶವ ಸಂಸ್ಕಾರ 5 ಸಾವಿರ ರೂ. ರಾಷ್ಟ್ರೀಯ ಭದ್ರತಾ ಯೋಜನೆ 20 ಸಾವಿರ ರೂ. ಅನುದಾನಕ್ಕೆ ಪಲಾನುಭವಿಗಳು ಕಚೇರಿಗೆ ಅಲೆಯುವುದು ನಿಂತಿಲ್ಲ.
ನೂರಾರು ಫಲಾನುಭವಿಗಳು: ರಾಷ್ಟ್ರೀಯ ಭದ್ರತಾ ಯೋಜನೆ ಅಡಿಯಲ್ಲಿ 20 ಸಾವಿರ ರೂ. ಸಹಾಯಧನ ಸೌಲಭ್ಯ ಪಡೆಯುವ ನೂರಾರು ಕುಟುಂಬದ ಫಲಾನುಭವಿಗಳು ಸೌಲಭ್ಯಕ್ಕಾಗಿ ತಹಶೀಲ್ ಕಚೇರಿಗೆ ಅಲೆದಾಡುವಂತಾಗಿದೆ.ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗದಫಲಾನುಭವಿಗಳು 2017ರಿಂದ 20 ಸಾವಿರ ರೂ. ಸಹಾಯಧನಕ್ಕೆ ಕಚೇರಿಗೆ ತಪ್ಪದ ಅಲೆದಾಟ.2018 ರಿಂದ ಪರಿಶಿಷ್ಟ ಪಂಗಡ ಸಮುದಾಯದ140 ಕುಟುಂಬದ ಫಲಾನುಭವಿಗಳು ದಿನವಿಡೀ ಕಚೇರಿಗೆ ಅಲೆಯುತ್ತಿದ್ದಾರೆ.
2017ರಿಂದ ಪರಿಶಿಷ್ಟ ಜಾತಿ 186, ಸಾಮಾನ್ಯವರ್ಗದ 148 ಫಲಾನುಭವಿಗಳಿಗೆ ಇಲ್ಲಿವರೆಗೆ20ಸಾವಿರ ರೂ. ಅನುದಾನ ಮಂಜೂರಾಗಿಲ್ಲ. ಅದರಂತೆ 140 ಪರಿಶಿಷ್ಟ ಪಂಗಡ ವರ್ಗದ ಸಮುದಾಯ ಕುಟುಂಬದ ಫಲಾನುಭವಿಗಳಿಗೆಸಹಾಯಧನ ಪೂರೈಕೆಯಲ್ಲಿ ವಿಳಂಬವಾಗಿದೆ.
ಶವ ಸಂಸ್ಕಾರ 5 ಸಾವಿರ ರೂ.: ಕುಟುಂಬದಲ್ಲಿ ಮೃತಟ್ಟಿರುವ ವ್ಯಕ್ತಿಗೆ ಶವ ಸಂಸ್ಕಾರ ಮಾಡಲು ರಾಜ್ಯ ಸರಕಾರ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಕಳೆದ ಎರಡ್ಮೂರು ವರ್ಷಗಳಿಂದಮೃತಪಟ್ಟಿರುವ ಕುಟುಂಬದ ಫಲಾನುಭವಿಗಳಿಗೆ 5 ಸಾವಿರ ರೂ. ಪ್ರೋತ್ಸಾಹಧನ ಬಾರದ ಹಿನ್ನೆಲೆ ನಿತ್ಯ ಕಚೇರಿಗೆ ಅಲೆದಾಡುವಂತ ಸ್ಥಿತಿ ಬಂದೊದಗಿದೆ. ರಾಷ್ಟ್ರೀಯ ಭದ್ರತಾ ಯೋಜನೆ ಅಡಿಯಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ 20ಸಾವಿರ ರೂ. ಶವ ಸಂಸ್ಕಾರಕ್ಕೆ 5 ಸಾವಿರ ರೂ. ಸಹಾಯ ಧನ ರಾಜ್ಯ ಸರಕಾರ ನೀಡಲಾಗುತ್ತಿದೆ. ಪಟ್ಟಣ ಸೇರಿ ಜಾಲಹಳ್ಳಿ, ಅರಕೇರಾ, ಗಬ್ಬೂರು ನಾಲ್ಕು ಹೋಬಳಿಯ ನಾಡಕಚೇರಿಯಿಂದ ಅರ್ಜಿ ಸಲ್ಲಿಸಿದ ನೂರಾರು ಫಲಾನುಭವಿಗಳ ಅರ್ಜಿಗಳು ಕಂದಾಯ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಲಾಗಿದೆ.
ರಾಷ್ಟ್ರೀಯ ಭದ್ರತಾ ಯೋಜನೆ 20 ಸಾವಿರ ರೂ. ಶವ ಸಂಸ್ಕಾರ 5 ಸಾವಿರ ರೂ. ಸಹಾಯಧನ ಫಲಾನುಭವಿಗಳಿಗೆ ಆನ್‌ಲೈನ್ ಮೂಲಕವೇ ಜಮೆ ಮಾಡಲಾಗುತ್ತದೆ. ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. –
ಮಧುರಾಜ್ ಯಾಳಗಿ, ತಹಶೀಲ್ದಾರ್.
ರಾಷ್ಟ್ರೀಯ ಭದ್ರತಾ ಯೋಜನೆ 20ಸಾವಿರ ರೂ. ಶವ ಸಂಸ್ಕಾರ 5 ಸಾವಿರ ರೂ. ಸಹಾಯ ಧನ ಸೌಲಭ್ಯ ಪಡೆಯಲುನೂರಾರು ಕುಟುಂಬದ ಫಲಾನುಭವಿಗಳು ನಿತ್ಯ ತಹಶೀಲ್ ಕಚೇರಿಗೆ ಅಲೆದಾಡುವುದುತಪ್ಪುತ್ತಿಲ್ಲ. ಬರುವ ಫಲಾನುಭವಿಗಳುಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿ ವಾಪಸ್ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. –
ರಂಗಪ್ಪ, ಸಾಬಣ್ಣ, ಫಲಾನುಭವಿಗಳು.
-ನಾಗರಾಜ ತೇಲ್ಕರ್