Advertisement

ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ

04:34 PM Jan 07, 2020 | Suhan S |

ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ 60 ಗ್ರಾಮಗಳಿದ್ದು ಇದರಲ್ಲಿ 37 ಗ್ರಾಮಗಳಲ್ಲಿ ಇಂದಿಗೂ ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಜಗಳವಾಡಬೇಕಾದ ಪರಿಸ್ಥಿತಿ ಇದೆ. ತಾಲೂಕು ವ್ಯಾಪ್ತಿಯಲ್ಲಿರುವ ಸ್ಮಶಾನಗಳು ಒತ್ತುವರಿಯಾಗಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ.

Advertisement

ಇನ್ನು ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಮರಳಿ ಮತ್ತೆ ಮುಳ್ಳಿನ ಗಿಡಗಳು ಬೆಳೆದಿವೆ. ಇದಕ್ಕಿಂತ ಆಂತಕಕಾರಿ ಸಂಗತಿ ಎಂದರೆ ತಾಲೂಕಿನ ವ್ಯಾಪ್ತಿ  ಯಲ್ಲಿರುವ ಸ್ಮಶಾನಗಳಿಗೆ ಸರಿಯಾಗಿ ದಾರಿಯೇ ಇಲ್ಲದಂತಾಗಿದೆ.

ಪಟ್ಟಣದಲ್ಲಿರುವ ವಿವಿಧ ಸಮುದಾಯದ ಸ್ಮಶಾನಗಳನ್ನು ಪಪಂ ಅನುದಾನದಡಿ ಹೆಸರಿಗೆ ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಅಭಿವೃದ್ಧಿ ಮಾಡಿದರು ಕೂಡ ಮತ್ತೆ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ತಾಲೂಕಿನ ವ್ಯಾಪ್ತಿಯಲ್ಲಿರುವ ಸ್ಮಶಾನಗಳನ್ನು ಸಂಬಂಧಿ ಸಿ ಅ ಧಿಕಾರಿಗಳು ಅಭಿವೃದ್ಧಿ ಪಡೆಸಲು ಮುಂದಾಗಬೇಕಿದೆ.

ತಾಲೂಕಿನ ಹಿರೇಖೇಡಾ, ಚಿಕ್ಕಖೇಡಾ, ನೀರಲೂಟಿ, ಮಲ್ಲಿಗೆವಾಡ, ಹಿರೇಮಾದಿನಾಳ, ಜ್ಯಾಲಿಹುಡ, ರಾಮದುರ್ಗಾ, ರಾಂಪೂರ, ಬೊಮ್ಮಸಾಗರ, ಕರಡಿಗುಡ್ಡ, ತಿಪ್ಪನಾಳ, ಬಂಕಾಪೂರ, ಕೆ. ಕಾಟಾಪುರ, ಬೆನಕನಾಳ, ಲಾಯದುಣಿಸಿ, ವರ್ಣಖೇಡಾ, ಹೊಸಗುಡ್ಡ, ದೇವಲಾಪೂರ, ಶಿರವಾರ, ಹನುಮನಾಳ, ಸೋಮಸಾಗರ, ಬಸರಿಹಾಳ, ಬೈಲಕ್ಕಂಪೂರ, ಅಡವಿಬಾವಿ, ಇಂಗಳದಾಳ, ಗುಡದೂರು, ಚಿಕ್ಕವಡ್ರಕಲ್‌, ನವಲಿ, ಸಂಕನಾಳ, ಕ್ಯಾರಿಹಾಳ, ಜೀರಾಳ ಕಲ್ಗುಡಿ, ಯತ್ನಟ್ಟಿ, ವಡಕಿ, ಆಕಳಕುಂಪಿ, ಜೀರಾಳ, ಚಿರ್ಚನಗುಡ್ಡ ಸೇರಿ 37 ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಆದ್ದರಿಂದ ಖಾಸಗಿ ಜಮೀನು ಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.

ಆದರೆ ಶವಸಂಸ್ಕಾರಕ್ಕೆ ತನ್  ಹೊಲದಲ್ಲಿ ಅವಕಾಶ ನೀಡಿದರೆ, ಆ ಹೊಲಕ್ಕೆ ತಲುಪಲು ದಾರಿಯೇ ಇರುವುದಿಲ್ಲ. ಮಧ್ಯದ ಹೊಲಗಳ ರೈತರು ತಮ್ಮ ಹೊಲದಲ್ಲಿ ತೆರಳಬೇಡಿ ಎಂದು ತಕರಾರು ಮಾಡುತ್ತಿದ್ದಾರೆ. ರುದ್ರಭೂಮಿ ಸ್ಥಾಪನೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರಿ ಭೂಮಿ ಗುರುತಿಸಿದ್ದು, ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ವರದಿ ತಯಾರಿಸಿದ್ದಾರೆ. ಆದರೆ ಕೆಲಸ ಮಾತ್ರ ಶೀಘ್ರಗತಿಯಲ್ಲಿ ಸಾಗುತ್ತಿಲ್ಲ.

Advertisement

ತಾಲೂಕು ವ್ಯಾಪ್ತಿಯ 37 ಗ್ರಾಮಗಳಲ್ಲಿ ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ರುದ್ರಭೂಮಿಗಾಗಿ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಈಗಾಗಲೇ ವರದಿ ತಯಾರಿಸಲಾಗಿದೆ. ಕೂಡಲೇ ಜಿಲ್ಲಾ ಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. –ರವಿ ಅಂಗಡಿ, ಕನಕಗಿರಿ ತಹಶೀಲ್ದಾರ್‌

 

-ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next