Advertisement

Belagavi; ಸ್ಮಶಾನ ಇಲ್ಲದ್ದಕ್ಕೆ ಗ್ರಾ.ಪಂ ಎದುರೇ ಅಂತ್ಯಕ್ರಿಯೆ: ಕೊರವ ಸಮಾಜದವರ ಎಚ್ಚರಿಕೆ

12:25 PM Oct 17, 2023 | Team Udayavani |

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ವೃದ್ಧೆ ಮೃತಪಟ್ಟು 15 ತಾಸು ಕಳೆದರೂ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನ ಭೂಮಿ ಇಲ್ಲದೇ ಪರದಾಡುತ್ತಿರುವ ಕೊರವ ಸಮಾಜದ ಜನರು ಗ್ರಾಮ ಪಂಚಾಯತಿ ಎದುರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುಳೇಭಾವಿ ಗ್ರಾಮದಲ್ಲಿ ತಲೆತಲಾಂತರದಿಂದ ಕೊರವ ಸಮಾಜಕ್ಕೆ ಮೀಸಲಿಟ್ಟಿರುವ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಸ್ಮಶಾನ ಜಾಗ ಇದ್ದರೂ ಖಾಸಗಿಯವರು ಈ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ನಮಗೆ ಸೂಕ್ತ ಜಾಗ ಇಲ್ಲದೇ ಮೃತದೇಹ ಅಂತ್ಯಕ್ರಿಯೆ ಮಾಡುವುದಾದರೂ ಎಲ್ಲಿ? ಜಾಗ ಗುರುತಿಸಿ ಕೊಡದಿದ್ದರೆ ಪಂಚಾಯಿತಿ ಎದುರು ಮೃತದೇಹ ಇಟ್ಟು ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮ‌ ಪಂಚಾಯಿತಿ ಕಚೇರಿ ಎದುರು ಜಮಾಯಿಸಿರುವ ಕೊರವ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು, ತಲೆ‌ತಲಾಂತರದಿಂದ ನಮ್ಮ‌ ಸಮಾಜ ಇತರೆ ಸಮುದಾಯಕ್ಕಾಗಿ 10 ಗುಂಟೆ ಸ್ಮಶಾನ‌ ಜಾಗ ಎಂದು ಗುರುತಿಸಲಾಗಿದೆ. ಆದರೆ ಈಗ ಜಾಗವೇ ಅಲ್ಲಿ‌ ಇಲ್ಲ. ಬೇರೆಯವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದಕ್ಕೆ ಕಂದಾಯ ಇಲಾಖೆ‌ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸ್ಥಳಕ್ಕೆ‌ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಆಗಮಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕು.‌ ಇಲ್ಲದಿದ್ದರೆ ಮೃತದೇಹ ತಂದು ಇಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗುವುದುದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next