Advertisement

ಮಾದರಿ ಶಾಲೆಯಾಗಿಸಲು ಹಣ ವಿನಿಯೋಗ

07:25 AM May 28, 2020 | Lakshmi GovindaRaj |

ಮಾಗಡಿ: ತಾಲೂಕಿನಲ್ಲಿ ಯಾವುದಾರೂ ಒಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯನ್ನು ಮಾದರಿಯನ್ನಾಗಿಸಲು 15ನೇ ಹಣಕಾಸಿನಲ್ಲಿ ಹಣ ವಿನಿಯೋಗಿಲಾಗುವುದು ಎಂದು ತಾಪಂ ಅಧ್ಯಕ್ಷ ನಾರಾಯಣಪ್ಪ ತಿಳಿಸಿದರು.  ತಾಪಂ ಸಭಾಂಗಣದಲ್ಲಿ 15ನೇ ಹಣಕಾಸಿನ ಯೋಜನೆಯಡಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪಂಚಾಯ್ತಿ ವ್ಯಾಪ್ತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗೆ ಶುದ್ಧ ಕುಡಿಯುವ  ನೀರು, ಗುಣಮಟ್ಟದ ಹೈಟೆಕ್‌ ಶೌಚಾಲಯ, ಮಳೆ ನೀರು ಕೊಯ್ಲು, ಸಿನ್‌ಟೆಕ್ಸ್‌ ಟ್ಯಾಂಕ್‌ ಅಳವಡಿಕೆ ಸೇರಿದಂತೆ ಹಲವು ಸೌಲಭ್ಯ ಒದಗಿಸಲಾಗುವುದು. ತಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಒಳಚರಂಡಿಯಿಲ್ಲ. ಮನೆಗಳಲ್ಲಿರುವ  ಪಿಟ್‌ಗುಂಡಿಗಳಲ್ಲಿ ತ್ಯಾಜ್ಯ ಹೊರತೆಗೆಯಲು ಒಂದು ಸಕ್ಕಿಂಗ್‌ ಮಿಷನ್‌ ಅಗತ್ಯವಿದ್ದು, ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಂಚಾಯ್ತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪಶು ಚಿಕಿತ್ಸಾ ಆಸ್ಪತ್ರೆಗಳಲ್ಲಿ ಮಳೆ ನೀರು  ಕೊಯ್ಲು ಮಾಡಲಾಗುವುದು, ಕುಡಿಯುವ ನೀರಿನ ಘಟಕಗಳು, ಬೋರ್‌ವೆಲ್‌ಗ‌ಳ ಪುನಶ್ಚೇತನ, ನೀರು ಸಂಸ್ಕರಣ ಹೊಂಡದ ನಿರ್ವಹಣೆ, ಸೋಲರ್‌ ಘಟಕ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಗ್ರಾಮಾಭಿವೃದ್ಧಿ  ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ, ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಎಂ.ಎಚ್‌. ಸುರೇಶ್‌, ಹನುಮಂತರಾಯಪ್ಪ, ಕೆ.ಎಚ್‌. ಶಿವರಾಜು, ದಿವ್ಯಾರಾಣಿ, ಎಲ್‌. ಸುಧಾ,  ಗಂಗಮ್ಮ, ಗೀತಾ ಗಂಗರಂಗಯ್ಯ, ಶಿವಮ್ಮ, ಸುಗುಣ ಕಾಮರಾಜ್‌ ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಪ್ರದೀಪ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next