Advertisement

ನರೇಗಾ ಫ‌ಲಾನುಭವಿಗಳ ಖಾತೆಗೆ ಹಣ ನೀಡಿ

10:06 PM Oct 02, 2019 | Lakshmi GovindaRaju |

ಚಿಕ್ಕಬಳ್ಳಾಪುರ: ನರೇಗಾ ಯೋಜನೆಯಲ್ಲಿ ಜಂಟಿ ಖಾತೆಗಳನ್ನು ರದ್ದುಗೊಳಿಸಿ ಕೂಲಿ ಕಾರ್ಮಿಕರ ವೈಯಕ್ತಿಕ ಖಾತೆಗಳನ್ನು ತೆರೆದು ಸರ್ಕಾರದಿಂದ ಬಿಡುಗಡೆಯಾಗುವ ಕೂಲಿ ಮೊತ್ತವು ಸುಲಭ ರೀತಿಯಲ್ಲಿ ಫ‌ಲಾನುಭವಿಗಳ ಖಾತೆಗೆ ಜಮೆ ಮಾಡಲು ಕ್ರಮ ವಹಿಸಬೇಕೆಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌ ಜಿಲ್ಲೆಯ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ನಬಾರ್ಡ್‌, ಆರ್‌ಬಿಐ, ಕೆನರಾ ಬ್ಯಾಂಕ್‌, ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಎಫ್ಎಲ್‌ಸಿ, ಇತರೆ ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲೆದಾಡಿಸಬೇಡಿ: ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಫ‌ಲಾನುಭವಿಗಳಿಗೆ ನೀಡುವ ಸಾಲ ಸೌಲಭ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಫ‌ಲಾನುಭವಿಗಳು ಬ್ಯಾಂಕುಗಳಿಗೆ ಸುತ್ತಾಡದಂತೆ ಕ್ರಮ ವಹಿಸಬೇಕೆಂದರು. ಬ್ಯಾಂಕುಗಳ ಸಕಾಲಕ್ಕೆ ಸಾಲ ಅಥವಾ ಸಬ್ಸಿಡಿ ಕೊಟ್ಟರೆ ಫ‌ಲಾನುಭವಿಗಳಿಗೆ ಅನುಕೂಲವಾಗುತ್ತದೆ ಎಂದರು.

ಸದ್ಯ ಬಾಕಿ ಇರುವ ಎಲ್ಲಾ ಫ‌ಲಾನುಭವಿಗಳ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಸಾಲ ಅಥವಾ ಸಬ್ಸಿಡಿ ಹಣವನ್ನು ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಸಿಡಿ ಅನುಪಾತ ಶೇ.60 ಕ್ಕಿಂತ ಕಡಿಮೆ ಇರುವ ಬ್ಯಾಂಕ್‌ಗಳು ಉತ್ತಮ ಪ್ರಗತಿ ಸಾಧಿಸಲು ಸೂಚಿಸಿದರು.

8 ಕೇಂದ್ರಗಳಲ್ಲಿ ಆಧಾರ್‌ ನೋಂದಣಿ: ಸಭೆಯಲ್ಲಿ ಹಾಜರಿದ್ದ ಆರ್‌ಬಿಐ, ಪ್ರತಿನಿಧಿ ಶ್ರೀನಿವಾಸ್‌ ಮಾತನಾಡಿ, ಜಿಲ್ಲಾದ್ಯಂತ ವಿವಿಧ ಬ್ಯಾಂಕ್‌ಗಳಲ್ಲಿ ತೆರೆಯಲಾಗಿರುವ ಆಧಾರ್‌ ನೋಂದಣಿ ಕೇಂದ್ರಗಳ ಪೈಕಿ 8 ಕೇಂದ್ರಗಳು ಕಾರ್ಯ ಸ್ಥಗಿತಗೊಂಡಿದ್ದು, ಇದರ ಬಗ್ಗೆ ವಿವರವಾಗಿ ವರದಿ ನೀಡಲು ಎಲ್‌.ಡಿ.ಎಂಗೆ ಸೂಚಿಸಲಾಗಿದೆ.

Advertisement

ಶೀಘ್ರವೇ ವಿವಿಧ ಬ್ಯಾಂಕುಗಳಲ್ಲಿ ಆಧಾರ್‌ ನೋಂದಣಿ ಕಾರ್ಯ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಜಿಲ್ಲೆಯಲ್ಲಿರುವ ಕೋಟಕ್‌ ಮಹೇಂದ್ರ ಬ್ಯಾಂಕ್‌ ಶಾಖೆಗಳು ಉಳಿತಾಯ ಖಾತೆಗಳನ್ನು ತೆರೆಯಲು ನಿರಾಕರಿಸುತ್ತಿರುವ ಮತ್ತು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಗಳಲ್ಲಿ ಭಾಗವಹಿಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸದರಿ ವಿಷಯದ ಬಗ್ಗೆ ಎಸ್‌ಎಲ್‌ಬಿಸಿಗೆ ಪತ್ರ ಬರೆಯಲು ಸೂಚಿಸಲಾಯಿತು.

ಚಲಾವಣೆಗೆ 10 ರೂ. ನಾಣ್ಯ ಅರ್ಹ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ 10 ರೂ. ಮುಖ ಬೆಲೆಯ ನಾಣ್ಯಗಳ ಚಲಾವಣೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಸಾಕಷ್ಟು ಗೊಂದಲದ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಆರ್‌ಬಿಐ ಪ್ರತಿನಿಧಿ ಶ್ರೀನಿವಾಸ್‌, ಸದರಿ ನಾಣ್ಯಗಳು ಆರ್‌ಬಿಐ ವತಿಯಿಂದ ಯಾವುದೇ ರೀತಿಯಲ್ಲಿ ಅಮಾನ್ಯ ಆಗಿಲ್ಲ. ಸದರಿ ನಾಣ್ಯಗಳು ಚಲಾವಣೆಗೆ ಅರ್ಹತೆ ಇರುವುದಾಗಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next