Advertisement

ಸೂಳೆಕೆರೆ ಅಭಿವೃದ್ಧಿ ಕಾಮಗಾರಿಗೆ ಹಣ ಮಂಜೂರು

01:27 PM Feb 11, 2023 | Team Udayavani |

ಭಾರತೀನಗರ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ದಕ್ಷಿಣ ನಾಲೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಕಲ್ಪಿಸಲು ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು.

Advertisement

ನಂತರ ಮಾತನಾಡಿ, ಕಳೆದ 4-5 ತಿಂಗಳ ಹಿಂದೆ ಸುರಿದ ಮಳೆಯಿಂದ ಸೂಳೆಕೆರೆ ಕೋಡಿ ಮತ್ತು ದಕ್ಷಿಣ ನಾಲೆ ಕೊಚ್ಚಿಹೋಗಿ ಕೆರೆ ಅಪಾಯ ಮಟ್ಟದಲ್ಲಿತ್ತು. ಕೆರೆ ಉಳಿಸುವ ದೃಷ್ಟಿಯಿಂದ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ, ಸೂಳೆಕೆರೆ ಅಭಿವೃದ್ಧಿಗೆ 98 ಲಕ್ಷ ಹಣ ಮಂಜೂರು ಮಾಡಿಸಿ, ದಕ್ಷಿಣ ನಾಲೆಯ ಅಕ್ವಡಕ್ಟ್ ಕಾಮಗಾರಿಗೆ 48 ಲಕ್ಷ ಸೂಳೆಕೆರೆ ಕೋಡಿ ಅಭಿವೃದ್ಧಿಗೆ 50 ಲಕ್ಷ ನೀಡುಯುವಂತೆ ಮಾಡಲಾಯಿತು ಎಂದರು.

ಈ ದಕ್ಷಿಣನಾಲೆ ಅಭಿವೃದ್ಧಿಯಿಂದ ಸುಮಾರು 3725 ಎಕರೆ ಅಚ್ಚುಕಟ್ಟು ಪ್ರದೇಶದ ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಕಾರ್ಕಹಳ್ಳಿ, ದೇವರಹಳ್ಳಿ, ಆಲಭುಜನಹಳ್ಳಿ, ಅಣ್ಣೂರು, ಕುರಿಕೆಂಪನದೊಡ್ಡಿ ಗ್ರಾಮಗಳಿಗೆ ನಿರೋದಗಿಸಿ, ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಸರ್ಕಾರದಿಂದ ಮಲತಾಯಿ ಧೋರಣೆ: ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿದ್ದಾರೆ ಹೊರತು, ಹಳೆ ಮೈಸೂರು ಭಾಗಕ್ಕೆ ಅನುದಾನ ಬಿಡುಗಡೆಗೊಳಿಸದೆ ರೈತರನ್ನು ವಂಚಿಸುತ್ತಿದ್ದಾರೆ. ವಿಶಾಲ ಕರ್ನಾಟಕ ಮನೊಭಾವನೆಯನ್ನು ತೋರದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಕ್ಯಾಬಿನೆಟ್‌ನಲ್ಲಿ ಒಂದೇ ಭಾರಿ 6 ಸಾವಿರ ಕೋಟಿಯನ್ನು ನೀರಾವರಿಗೆ ಮಂಜೂರು ಮಾಡಿದರು.

ಆದರೆ, ಮದ್ದೂರು ಕೆರೆ, ಸೂಳೆಕೆರೆಗೆ 550 ಕೋಟಿ ಬಿಡುಗಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಸಿಎಂ ಬಸವರಾಜು ಬೊಮ್ಮಾಯಿ ಅವರು ಹಣ ಬಿಡುಗಡೆಗೊಳಿಸುತ್ತಾರೆಂಬ ನಂಬಿಕೆ ಇತ್ತು. ಆದರೆ, ಆರ್ಥಿಕ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಹಣಬಿಡುಗಡೆ ಗೊಳಿಸಿಲ್ಲ. ಹಳೆ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಭಿವೃದ್ಧಿಗಾಗಿ ಹೋರಾಟ: ಸರ್ಕಾರ ರೈತರನ್ನು ಉಳಿಸಬೇಕಾದರೆ ನೀರಾವರಿಗೆ ಆದ್ಯತೆ ನೀಡಬೇಕು. ಮದ್ದೂರು ಕೆಮ್ಮಣ್ಣು ಕೆರೆ ಮತ್ತು ಸೂಳೆಕೆರೆ ಈ ಎರಡು ಕೆರೆಗಳು ಈ ಭಾಗದ ರೈತರಿಗೆ ಮಿನಿ ಅಣೆಕಟ್ಟೆ ಇದ್ದಂತೆ. ಕೆಆರ್‌ಎಸ್‌ ಅಣೆಕಟ್ಟೆ ಬಿಟ್ಟರೆ ಇದು ರೈತರಿಗೆ ಎರಡನೇ ಅಣೆಕಟ್ಟೆ ಇದಾಗಿದೆ. ಹೀಗಾಗಿ, ಈ ಎರಡು ಕೆರೆ ಮತ್ತು ನಾಲೆ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್‌, ಎಇಇ ಪ್ರಶಾಂತ್‌, ಎಇ ಅವಿನಾಶ್‌, ಶೀಲ, ಮುಖಂಡರಾದ ಎಂ.ಕೆ. ವೀರಯ್ಯ, ಎಂ.ಕೆ.ಚಂದ್ರಶೇಖರ್‌, ಎಂ.ಸಿ.ವೀರಯ್ಯ, ಎಂ.ಸಿ.ಚಂದ್ರಶೇಖರ್‌, ಯತೀಶ, ಎಂ.ಡಿ.ನಾಗರಾಜು, ಪ್ರಶಾಂತ್‌, ಯಜಮಾನ್‌ ಪುಟ್ಟಸ್ವಾಮಿ, ಶಿವಲಿಂಗ, ರವಿ. ಶಿವಕುಮಾರ್‌, ಕಿಶೋರ್‌, ಪುಟ್ಟಸ್ವಾಮಿ, ಸಣ್ಣೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next