Advertisement

92.7 ಬಿಗ್ FMನಲ್ಲಿ “ಫುಲ್ ಟೈಮ್ ಪಾಸ್” ಹೊಸ ಕಾರ್ಯಕ್ರಮ ಶುರು!

04:44 AM Feb 12, 2019 | Sharanya Alva |

ಬೆಂಗಳೂರು: ಭಾರತದ ಅತಿದೊಡ್ಡ ರೇಡಿಯೊ ಜಾಲವಾದ ಬಿಗ್ ಎಫ್ಎಂ ಸಂಪೂರ್ಣ ಪರಿಷ್ಕರಣೆ ಮತ್ತು ಧನಾತ್ಮಕ ಬದಲಾವಣೆಯನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ನಿರ್ಧರಿಸಿದೆ. ಬಿಗ್ ಎಫ್ಎಂನ ಹೊಸ ಬದಲಾವಣೆಯ ಮೂಲಭೂತ ಅಂಶವೆಂದರೆ  ‘ಯೋಚನೆ ಯಾಕೆ, ಚೇಂಜ್ ಓಕೆ’. ಇದರ ಭಾಗವಾಗಿ ಎಫ್ ಎಂನಲ್ಲಿ ‘ಫುಲ್ ಟೈಮ್ ಪಾಸ್ ’ ಹೆಸರಿನ ಹೊಸ ಕಾರ್ಯಕ್ರಮ ಪ್ರಾರಂಭಿಸಿದೆ. ಇದರ ಮೂಲಕ ಬೆಂಗಳೂರಿನ ರೇಡಿಯೊ ಉದ್ಯಮದ ನೀಲಿ ಕಣ್ಣಿನ ಹುಡುಗ, ಆರ್.ಜೆ. ಪ್ರದೀಪ್ ಎಫ್ ಎಂಗೆ ಮರಳುತ್ತಿದ್ದಾರೆ. ಸಂಗೀತ ಪ್ರೇಮಿಗಳ ಹೃದಯವನ್ನು ಮುಟ್ಟುವ ಹಾಡುಗಳೊಂದಿಗೆ, ಹಾಸ್ಯಭರಿತ ಸಂಭಾಷಣೆಗಳು ಈ ಕಾರ್ಯಕ್ರಮದಲ್ಲಿರಲಿವೆ. ಹಾಸ್ಯದ ಸಂಗತಿಗಳ ಹಂಚಿಕೆಯೊಂದಿಗೆ ಹಿತವಾದ ಮತ್ತು ಸಂಗೀತದೊಂದಿಗೆ ಆರ್.ಜೆ.  ಪ್ರದೀಪ್ ಸಂಜೆ 5 ರಿಂದ 9ರವರೆಗಿನ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.

Advertisement

 ರೇಡಿಯೋದಿಂದಲೇ ತನ್ನ ವೃತ್ತಿ ಜೀವನ ಆರಂಭಿಸಿದ್ದ ಕನ್ನಡದ ಪ್ರಸಿದ್ಧ ನಟ ರಮೇಶ್ ಅರವಿಂದ್ ಅವರು ಬಿಗ್ ಎಫ್ ಎಂ ನಲ್ಲಿ ಆರ್.ಜೆ ಆಗಿ ಬೆಳಗಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಟಿ ಪಾರುಲ್ ಯಾದವ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು. ನಟ –ನಿರ್ಮಾಪಕರ ತಂಡವು ಬಿಗ್ ಎಫ್ ಎಂ ಸ್ಟುಡಿಯೋಗೆ ಭೇಟಿ ನೀಡಿ ಹೊಸ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.

ರೇಡಿಯೊಗೆ ಪುನರಾಗಮನದ ಬಗ್ಗೆ ಮಾತನಾಡಿದ ಆರ್ ಜೆ ಪ್ರದೀಪ್, “ನಾನು ಸಂಪೂರ್ಣವಾಗಿ ಭರವಸೆ ಹೊಂದಿದ ಬಿಗ್ ಎಫ್ಎಂಗೆ ಮರಳಲು ನನಗೆ ಬಹಳ ಸಂತೋಷವಿದೆ. “ಫುಲ್ ಟೈಮ್ ಪಾಸ್” ಎಂಬುದು ಆಸಕ್ತಿದಾಯಕ ಪರಿಕಲ್ಪನೆಯಾಗಿದೆ. ಮುದ ನೀಡುವ ಸಂಗೀತದೊಂದಿಗೆ ವಿನೋದದ ಸಂಭಾಷಣೆಗಳು , ಕೇಳುಗರ ಒತ್ತಡ ನಿವಾರಿಸಲಿವೆ ಎಂದರು.

 ನಟ ಚಲನಚಿತ್ರ ನಿರ್ಮಾಪಕ ರಮೇಶ್ ಅರವಿಂದ್, “ಬಿಗ್ ಎಫ್ಎಂ ಅದ್ಭುತವಾದ ಮತ್ತು ಶಕ್ತಿಯುತ ವೇದಿಕೆಯಾಗಿದೆ. ನನ್ನ ಹೃದಯದಲ್ಲಿ ಬಿಗ್ ಎಫ್.ಎಂಗೆ ವಿಶೇಷವಾದ ಸ್ಥಾನವಿದೆ. ಸೆಲೆಬ್ರಿಟಿ ಹೋಸ್ಟ್ ಆಗಿ ಇಂದು ಬೆಳಗ್ಗಿನ ಕಾರ್ಯಕ್ರಮದಲ್ಲಿ ನಮ್ಮ ಮುಂಬರುವ ಸಿನಿಮಾ ಬಟರ್ ಫ್ಲೈಯ ಕುರಿತಾದಂತೆ ಕೆಲವು ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಸಂತೋಷವಿದೆ ಎಂದರು.

Advertisement

ಬಿಗ್ ಎಫ್ ಎಂ ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ದಿನದ 24 ಗಂಟೆಯೂ ಕನ್ನಡದ ಕಾರ್ಯಕ್ರಮಗಳು ಬಿತ್ತರಗೊಳ್ಳಬೇಕು ಎಂಬ ಧ್ಯೇಯದೊಂದಿಗೆ ‘ಪ್ರತಿದಿನ ಕನ್ನಡ ಪ್ರತಿಕ್ಷಣ ಕನ್ನಡ’ ಎಂಬ ಯೋಜನೆ ರೂಪಿಸಿದೆ. ಈ ಮೂಲಕ ಕನ್ನಡದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ವಿಭಿನ್ನ ಕಾರ್ಯಕ್ರಮಗಳಿಂದ ಚಾನೆಲ್ ಹೊಸ ಸ್ಥಾನಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next