Advertisement

ಫ‌ುಲ್‌ ಟೈಟ್‌ ಕ್ಯಾತೆ!

07:17 PM Jul 18, 2019 | mahesh |

ಕಳೆದ ವಾರ ಕನ್ನಡದಲ್ಲಿ “ಫ‌ುಲ್‌ ಟೈಟ್‌ ಪ್ಯಾತೆ’ ಎನ್ನುವ ವಿಚಿತ್ರ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದಿದ್ದು, ನಿಮಗೆ ನೆನಪಿರಬಹುದು. “ಫ‌ುಲ್‌ ಟೈಟ್‌ ಪ್ಯಾತೆ’ ಕೆಲ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ತಿಥಿ’ ಶೈಲಿಯ ಮತ್ತೂಂದು ಚಿತ್ರ. ಮಂಡ್ಯದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧಾರಿತ ಚಿತ್ರ. ಪಕ್ಕಾ ಮಂಡ್ಯ ಭಾಷೆಯ ಸೊಗಡು ಚಿತ್ರದಲ್ಲಿದೆ. ಅಂತೆಲ್ಲಾ ಹತ್ತಾರು ವಿಶೇಷಣಗಳನ್ನ ಹೇಳಿ, ಚಿತ್ರತಂಡ ಭರ್ಜರಿಯಾಗಿಯೇ ಪ್ರಮೋಶನ್‌ ಮಾಡಿ ಚಿತ್ರವನ್ನು ತೆರೆಗೆ ತಂದಿತ್ತು.

Advertisement

ಆದರೆ ಚಿತ್ರ ಮಾತ್ರ ಬಿಡುಗಡೆಯಾದ ನಂತರ ಮಂಡ್ಯ ಸುತ್ತಮುತ್ತಲಿನ ಬೆರಳೆಣಿಕೆಯಷ್ಟು ಕೇಂದ್ರಗಳನ್ನು ಹೊರತುಪಡಿಸಿದರೆ, ಎಲ್ಲೂ ಕೂಡ ಥಿಯೇಟರ್‌ಗಳಲ್ಲಿ ಉಳಿಯಲಿಲ್ಲ. ಹೀಗಿರುವಾಗ ಚಿತ್ರತಂಡ ಥಿಯೇಟರ್‌ಗಳಲ್ಲಿ ತಮ್ಮ ಚಿತ್ರವನ್ನು ಉಳಿಸಿಕೊಳ್ಳಲು ಪ್ರಚಾರ ತಂತ್ರಗಳನ್ನು ಅನುಸರಿಸಿ, ಬೇರೆ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುವ ಬದಲು, ಚಿತ್ರದ ನಾಯಕಿ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪ ಮಾಡುವುದಕ್ಕಾಗಿಯೇ ಪತ್ರಿಕಾಗೋಷ್ಠಿ ಸಮಯವನ್ನು ಮೀಸಲಿಟ್ಟಿತು.

ಇನ್ನು ಚಿತ್ರತಂಡ ಮಾಡಿರುವ ಆರೋಪಗಳ ವಿಷಯಕ್ಕೆ ಬಂದರೆ, “ಫ‌ುಲ್‌ ಟೈಟ್‌ ಪ್ಯಾತೆ’ ಚಿತ್ರ ಮಂಡ್ಯ, ಮಳವಳ್ಳಿ, ಮದ್ದೂರು ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆಯಂತೆ. ಆದರೆ ಚಿತ್ರದ ನಾಯಕಿ ಮಾನಸ ಗೌಡ ಮಾತ್ರ ಎಲ್ಲೂ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲವಂತೆ. ಈ ವಿಷಯದ ಬಗ್ಗೆ ಖುದ್ದು ಮಾತಿಗಿಳಿದ ಚಿತ್ರದ ನಾಯಕ, ನಿರ್ಮಾಪಕ ಕಂ ನಿರ್ದೇಶಕ ಎಸ್‌ಎಲ್‌ಜಿ ಪುಟ್ಟಣ್ಣ, “ಇಲ್ಲಿಯವರೆಗೆ ಚಿತ್ರದ ಮೂರು ಪ್ರಸ್‌ ಮೀಟ್‌ಗಳಿಗೆ ನಾಯಕಿ ಮಾನಸ ಅವರನ್ನು ಆಹ್ವಾನಿಸಲಾಗಿತ್ತು. ಆದ್ರೆ, ಅವರು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಒಬ್ಬ ಕಲಾವಿದೆಗೆ ಕಲೆ ಬಗ್ಗೆ ಗೌರವ ಇರಬೇಕು. ದುರಾಂಹಕಾರದ ಗುಣದ್ದರೆ ನಾವೇನು ಮಾಡಲಾಗುವುದಿಲ್ಲ’ ಎಂದು ನಾಯಕಿಯ ಮೇಲಿನ ಕೋಪವನ್ನು ಪತ್ರಿಕಾಗೋಷ್ಟಿಯಲ್ಲೇ ಹೊರಹಾಕಿದರು.

ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಚಿತ್ರತಂಡ, “ಹೊಸಬರು, ಹಳಬರು ಅಂತ ನೋಡದೆ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ನಮ್ಮಗಳ ಪ್ರತಿಭೆ ತೋರಿಸಲು ಸಣ್ಣ ಬಜೆಟ್‌ ಚಿತ್ರ ಮಾಡಲಾಗಿತ್ತು. ಇದರಿಂದ ಒಳ್ಳೆ ಪ್ರತಿಕ್ರಿಯೆ ಬಂದಿರುವ ಕಾರಣ ಮುಂದೆ ದೊಡ್ಡ ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕ್ಲೈ ಮಾಕ್ಸ್‌ ಭಾಗವನ್ನು ಇಷ್ಟಪಟ್ಟಿದ್ದಾರೆ. ಮಲ್ಟಿಪ್ಲೆಕ್ಸ್‌ ಗಳಲ್ಲಿ ನಾಲ್ಕು ದಿನಗಳಿಂದ ಗಳಿಕೆ ಬರುತ್ತಿದೆ. ಮೊದಲ ಪ್ರಯತ್ನ ಲಾಭ-ನಷ್ಟವಾಗಿಲ್ಲ’ ಎಂದು ವಿಶ್ವಾಸದ ಮಾತುಗಳನ್ನಾಡಿದೆ. ಚಿತ್ರತಂಡದ ಸದಸ್ಯರಾದ ನಟ ಬಿರಾದಾರ್‌, ಶಿವು ರಾಮನಗರ, ಅಜಯ್‌ ಕೃಷ್ಣಪ್ಪ, ಸೂರ್ಯತೇಜ್‌ ಮತ್ತಿತರರು ಚಿತ್ರದ ಬಗ್ಗೆ ಮಾತನಾಡಿದರು. ಅದೇನೆ ಇರಲಿ, ಚಿತ್ರರಂಗದಲ್ಲಿ ಹೊಸತನಕ್ಕೆ, ಹೊಸ ಪ್ರಯೋಗದ ಚಿತ್ರಗಳಿಗೆ ಮುನ್ನುಡಿ ಬರೆಯಬೇಕಾದ ಹೊಸಬರು, ತಮ್ಮ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಸುವರ್ಣ ಅವಕಾಶವನ್ನು ಆರೋಪ-ಪ್ರತ್ಯಾರೋಪಗಳಿಗೆ ಬಳಸಿಕೊಂಡರೆ ಅದರ ಪರಿಣಾಮ ಬೀರುವುದು ಇಡೀ ಚಿತ್ರದ ಮೇಲೆ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next