Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು, ಸಮಿತಿ ಮಧ್ಯಂತರ ವರದಿಯಲ್ಲಿ ಕೆಲವು ಅಂಶಗಳನ್ನು ಉಲ್ಲೇಖೀಸಿ ಒತ್ತುವರಿ ಸಮೀಕ್ಷೆಗೆ ಸರ್ವೆಯರ್ ನೀಡುವಂತೆ ಕೋರಿದೆ. ಸಂಪೂರ್ಣ ಸಮೀಕ್ಷೆ ನಡೆಸಿ ಎರಡು ವಾರದೊಳಗೆ ಸಮಗ್ರ ವರದಿ ಸಲ್ಲಿಸುವುದಾಗಿ ತಿಳಿಸಿದೆ. ಒತ್ತುವರಿ ಗಮನಕ್ಕೆ ಬಂದಿರುವ ಪ್ರದೇಶ ಗಳಲ್ಲಿ ಮನಪಾ ಅಧಿಕಾರಿಗಳು ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದರು.
ಕೆಲವು ಪ್ರದೇಶಗಳಲ್ಲಿ ಮಳೆ ನೀರಿನ ತೋಡುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ಈ ಬಾರಿ 400 ಮಿ.ಮೀ.ನಷ್ಟು ದಾಖಲೆಯ ಮಳೆಯಾಗಿದೆ. ಇದನ್ನು ಗಮನ ದಲ್ಲಿಟ್ಟು ಕೊಂಡು ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಸಂಬಂಧ ಪಟ್ಟಂತೆ ನಮ್ಮ ಯೋಜನೆಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ನೆರೆ ಪರಿಸ್ಥಿತಿ ಸೃಷ್ಟಿಯಾಗಲು ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಳೆ ಹಾನಿ: ಇಂದು ಸಮಗ್ರ ವರದಿ
ನಗರದಲ್ಲಿ ಮೇ 29ರಂದು ಸುರಿದ ಭಾರೀ ಮಳೆ ಯಿಂದ ಸಂಭವಿಸಿರುವ ಹಾನಿಯ ಕುರಿತು ಸಮಗ್ರ ವರದಿ ಯನ್ನು ಜೂ. 6ರಂದು ಸರಕಾರಕ್ಕೆ ಸಲ್ಲಿಸ ಲಾಗುವುದು. ಮಳೆಯಿಂದ ಸುಮಾರು 20 ಕೋ. ರೂ. ನಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಯಾಗಿದೆ. ಇದಲ್ಲದೆ ಕೈಗಾರಿಕಾ ಪ್ರದೇಶ ಗಳಲ್ಲಿ ಸಮಾರು 10 ಕೋ. ರೂ. ಹಾನಿ ಸಂಭವಿಸಿರುವುದಾಗಿ ಮಾಹಿತಿ ಬಂದಿವೆ. ಜಿಲ್ಲಾಡಳಿತ ವತಿಯಿಂದ ಮಳೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಈಗಾಗಲೇ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.