Advertisement

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

06:49 PM Aug 01, 2021 | Team Udayavani |

ಗುಡಿಬಂಡೆ: ಕೋವಿಡ್ 3ನೇ ಅಲೆಯ ಆತಂಕದ ನಡುವೆಯೂ ವಾರಾಂತ್ಯದಲ್ಲಿ ಸುರಸದ್ಮಗಿರಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಸಂಖ್ಯೆ  ಕಡಿಮೆಯಾಗಿಲ್ಲ.

Advertisement

ಬೆಂಗಳೂರಿಗೆ ಕೂಗಳತೆಯ ದೂರದಲ್ಲಿರುವ ನಂದಿ ಬೆಟ್ಟ ನಂತರದ ಪ್ರವಾಸಿ ತಾಣಗಳಾದ ಗುಡಿಬಂಡೆ ಅಮಾನಿ ಭೈರಸಾಗರ ಮತ್ತು ವಾಟದ ಹೊಸಹಳ್ಳಿ ಕೆರೆ, ಹಾಗೂ ಸುರಸದ್ಮಗಿರಿ ಬೆಟ್ಟ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳಗಳಾಗಿದ್ದು ಶನಿವಾರ ಮತ್ತು ಭಾನುವಾರದಂದು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಕೋವಿಡ್ 3ನೇ ಅಲೆ ಭೀತಿಯಿದ್ದರು ಪ್ರವಾಸಿಗರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಮಾನಿಭೈರಸಾಗರ ಕೆರೆ ಮತ್ತು ಸುರಸದ್ಮಗಿರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಕೋವಿಡ್ ಮುಕ್ತ ವಾಗಿರುವ ಗುಡಿಬಂಡೆ ತಾಲ್ಲೂಕಿನಲ್ಲಿ ಪುನಃ ಪ್ರಕರಣಗಳು ಹೆಚ್ಚಾಗುವ ಭಯ ಸ್ಥಳೀಯರಲ್ಲಿ ಆವರಿಸಿದೆ.

ಸ್ವಚ್ಛತೆ ಕಾಪಾಡುವಲ್ಲಿ ವಿಫಲ: ವಾರಾಂತ್ಯದಲ್ಲಿ ಸುರಸದ್ಮಗಿರಿ ಬೆಟ್ಟಕ್ಕೆ ಮತ್ತು ಅಮಾನಿಭೈರಸಾಗರ ಕೆರೆಗೆ ಭೇಟಿ ನೀಡುವ ಪ್ರವಾಸಿಗರು ಬಿಸಾಡುವ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ಗಳನ್ನು ಸ್ವಚ್ಛಗೊಳಿಸಲು ಪಟ್ಟಣ ಪಂಚಾಯಿತಿ ಮುಂದಾಗಿಲ್ಲ.

ಪ್ರವಾಸೋದ್ಯಮ ತಾಣ ಮಾಡಲು ಮನವಿ: ಬೆಂಗಳೂರಿಗೆ ಕೂಗಳತೆಯ ದೂರದಲ್ಲಿರುವ ಸುರಸದ್ಮಗಿರಿ ಬೆಟ್ಟ ಮತ್ತು ಅಮಾನಿಭೈರಸಾಗರ ಕೆರೆಯ ಸೌಂದರ್ಯ ಸವಿಯಲು ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿ ಮಾಡುವಂತೆ ಸ್ಥಳೀಯರ ಒತ್ತಾಯವಾಗಿದೆ.

Advertisement

ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಸುರಸದ್ಮ ಗಿರಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ನೂರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರ್‌ಗಳಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಪರದಾಡುವಂತಾಗಿದೆ.

ಮೂಲ ಸೌಕರ್ಯಗಳ ಕೊರತೆ: ಇಲ್ಲಿಗೆ ಬರುವ ಪ್ರವಾಸಿಗರಿಗೆ ಪಟ್ಟಣದಲ್ಲಿ ಸರಿಯಾದ ಶೌಚಾಲಯಲದ ವ್ಯವಸ್ಥೆ ಇಲ್ಲದೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ: ಶಾಸಕರು ಅಮಾನಿಬೈರಸಾಗರ ಕೆರೆ ಮತ್ತು ಸುರಸದ್ಮಗಿರಿ ಬೆಟ್ಟ ಅಭಿವೃದ್ದಿಗಾಗಿ ಸುಮಾರು 1.5 ಕೋಟಿ ಅನುದಾನ ಬಿಡುಗಡೆ ಮಾಡಿಸಿ ವರ್ಷಗಳೇ ಕಳೆಯುತ್ತಿದ್ದರು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರಿ, ಸ್ಥಳಗಳನ್ನು ಅಭಿವೃದ್ದಿಯಿಂದ ಕುಂಟಿತ ಗೊಳಿಸಿದ್ದಾರೆ.

ಅಮಾನಿಭೈರಸಾಗರ ಕೆರೆ ಮತ್ತು ಸುರಸದ್ಮಗಿರಿ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆ ಮಾಡಿಕೊಂಡು ಅಭಿವೃದ್ಧಿ ಪಡಿಸಲು ಸರ್ಕಾರ ಸೂಚಿಸುತ್ತಿದ್ದರು, ಅಧಿಕಾರಿಗಳು ವಿಳಂಭ ದೋರಣೆ ಅನುಸರಿಸುತ್ತಿದ್ದಾರೆ ಎಂದು ಪದ್ಮಾವತಿ, ಬಿ.ಜೆ.ಪಿ  ಮುಂಖಡೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next