Advertisement
ಹೌದು, ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೆ ಮಯೂರ ಕ್ಯಾಂಟೀನ್‌ನಲ್ಲಿ ಇನ್ಮೆàಲೆ ಪ್ರವಾಸಿಗರಿಗೆ ಅತಿ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯದ ಪ್ರವಾ ಸೋ ದ್ಯಮ ಅಭಿವೃದ್ಧಿ ನಿಗಮ ಊಟ, ತಿಂಡಿ ಸಿಗುವಂತೆ ಮಾಡುವ ಮೂಲಕ ನಂದಿಬೆಟ್ಟ ಬಡವರ ಪರ ಎಂಬುದನ್ನು ಸಾಬೀತು ಗೊಳಿಸುವ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದೆ.
Related Articles
Advertisement
ಕೆಎಸ್‌ಟಿಡಿಸಿ ಎಂಡಿ ಜನಪರ ಕಾಳಜಿಗೆ ಪ್ರವಾಸಿಗರ ಮೆಚ್ಚುಗೆ:
ನಂದಿಬೆಟ್ಟಕ್ಕೆ ಪ್ರತಿ ವಾರ ಹಾಗೂ ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಭಾಗದಿಂದಲೂ ಕೂಡ ಜನ ಸಾಮಾನ್ಯರು ಗಿರಿಧಾಮದ ಪ್ರಾಕೃತಿಕ ಸೌಂದರ್ಯ ಸವಿಯಲು ನಂದಿಬೆಟ್ಟಕ್ಕೆ ಆಗಮಿಸುತ್ತಾರೆ. ಆದರೆ, ಬೆಟ್ಟದ ಮೇಲೆ ಮಯೂರ ಹೋಟೆಲ್‌ಗಳಲ್ಲಿ ಊಟ, ತಿಂಡಿ ತುಸು ದುಬಾರಿ ಎನ್ನುವ ಕಾರಣಕ್ಕೆ ಗಿರಿಧಾಮಕ್ಕೆ ಬರುವ ಆಟೋ, ಕಾರು, ಬಸ್, ಟ್ಯಾಕ್ಸಿ ಚಾಲಕರಿಗೆ, ನಿರ್ವಾಹಕರಿಗೆ ವಿಶೇಷವಾಗಿ ಜನ ಸಾಮಾನ್ಯರಿಗೆ ಹೆಚ್ಚು ಹೊರೆ ಆಗದ ರೀತಿಯಲ್ಲಿ ನಗರ, ಪಟ್ಟಣಗಳಲ್ಲಿ ಸಿಗುವ ದರಕ್ಕಿಂತ ಕಡಿಮೆ ಬೆಲೆಗೆ ಗುಣಮಟ್ಟದ ಊಟ, ತಿಂಡಿ ಸಿಗುವಂತೆ ಮಾಡಬೇಕೆಂಬ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್ ಜನಪರ ಕಾಳಜಿಯಿಂದಲೇ ನಂದಿಬೆಟ್ಟದಲ್ಲಿ ಇತಂಹದೊಂದು ಜನಸ್ನೇಹಿ ಕ್ಯಾಂಟೀನ್ ಆರಂಭಕ್ಕೆ ಕಾರಣ ಎಂದು ಕ್ಯಾಂಟೀನ್ ಬಳಸುತ್ತಿರುವ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿ ಕೆಎಸ್‌ಟಿಡಿಸಿ ಎಂಡಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಉದಯವಾಣಿಯಲ್ಲಿ ವರದಿ:
ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಲಗುವಂತೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅತಿ ಅಗ್ಗದ ದರದಲ್ಲಿ ಕ್ಯಾಂಟೀನ್ ತೆರೆಯುವ ಕುರಿತು ಆ. 13 ರಂದೇ ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಪ್ರವಾಸಿಗರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ, ನಂದಿಬೆಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿ ಮಯೂರ ಕ್ಯಾಂಟೀನ್ ಸ್ಥಾಪನೆಗೆ ನಿರ್ಧಾರ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಕ್ಯಾಂಟೀನ್‌ಲ್ಲಿ ಏನೇನು ಸಿಗುತ್ತೆ?:
ನಂದಿಬೆಟ್ಟಕ್ಕೆ ಆಗಮಿಸುವ ಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಮಯೂರ ಕ್ಯಾಂಟೀನ್‌ನಲ್ಲಿ ಬಿಸಿ ಬಿಸಿ ಟೀ, ರೈಸ್‌ಬಾತ್, ಬಿಸಿ ಬೇಳೆ ಬಾತ್, ಉಪ್ಪಿಟ್ಟು ಮೊರಸನ್ನ, ಕೇಸರಿ ಬಾತ್ ಹಾಗೂ ಅನ್ನ ಸಾಂಬರ್ ಸಿಗಲಿದೆ.
ನಂದಿಬೆಟ್ಟದಲ್ಲಿ ಮಯೂರ ಕ್ಯಾಂಟೀನ್‌ನಲ್ಲಿ 10 ರು, ಟೀ, ಕಾಫಿ ಹಾಗೂ 20 ರೂಗೆ ಊಟ, ತಿಂಡಿ ಸಿಗಲಿದೆ. ಇದು ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೊಸ ಕೊಡುಗೆ.– ಜಿ.ಜಗದೀಶ್, ಎಂಡಿ ಕೆಎಸ್‌ಟಿಡಿಸಿ, ಬೆಂಗಳೂರು.
-ಕಾಗತಿ ನಾಗರಾಜಪ್ಪ