Advertisement

ಕೋವಿಡ್ ಸೋಂಕು ತಡೆಯಲು ಸಂಪೂರ್ಣ ಲಾಕ್ ಡೌನ್ ಒಂದೇ ಮಾರ್ಗ : ರಾಹುಲ್ ಗಾಂಧಿ

01:54 PM May 04, 2021 | Team Udayavani |

ನವದೆಹಲಿ :  ಭಾರತದಲ್ಲಿ ಕೋವಿಡ್ ಸೋಂಕನ್ನು ತೊಲಗಿಸಬೇಕು ಅಂದ್ರೆ ದೇಶವನ್ನು ಸಂಫೂರ್ಣ ಲಾಕ್ ಡೌನ್ ಮಾಡಬೇಕು. ಲಾಕ್ ಡೌನ್ ವೇಳೆ ಬಡವರಿಗೆ ನ್ಯಾಯ್ (The Nyuntam Aay Yojana) ಯೋಜನೆ ಅಡಿಯಲ್ಲಿ ಆರ್ಥಿಕ ರಕ್ಷಣೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

Advertisement

ಕೇಂದ್ರ ಸರ್ಕಾರದ ಅದಕ್ಷತೆಯು ಅನೇಕ ಅಮಾಯಕ ಜನರನ್ನು ಕೊಲ್ಲುತ್ತಿದೆ ಎಂದು ರಾಹುಲ್ ಟೀಕೆ ಮಾಡಿದ್ದಾರೆ. 2019ರ ವಯನಾಡು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ನ್ಯಾಯ್ ಯೋಜನೆ ಬಗ್ಗೆ ಪ್ರನಾಳಿಕೆಯಲ್ಲಿ ತಿಳಿಸಿತ್ತು. ಇದರ ಅನ್ವಯ ಕೇಂದ್ರ ಸರ್ಕಾರವು ಬಡವರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸುವುದಾಗಿದೆ. ಅಂದ್ರೆ ತೀರಾ ಬಡ ಕುಟುಂಬಗಳಿಗೆ ವರ್ಷಕ್ಕೆ 72,000 ನೀಡುವ ಖಾತ್ರಿ ಯೋಜನೆಯಾಗಿದೆ.

ಭಾರತದಲ್ಲಿ COVID-19 ಪ್ರಕರಣಗಳು ದಿನಕ್ಕೆ ಮೂರು ಲಕ್ಷ ದಾಟುತ್ತಿವೆ. ಇನ್ನು ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿದ್ದು, ಮೂರು  ಸಾವಿರಕ್ಕೂ ಅಧಿಕ ಮಂದಿ ಒಂದೇ ದಿನದಲ್ಲಿ ಸಾಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next