ಉಡುಪಿ: ಜೈವಿಕ ಗಡಿಯಾರದಂತೆ ನಮ್ಮ ದೈನಂದಿನ ಕ್ರಮವನ್ನು ಪರಿಪಾಲಿಸಿದ್ದಲ್ಲಿ ಶತಾಯುಷಿಗಳಾಗಿ ಬದುಕಬಹುದು, ನಮ್ಮ ಜಿವನವನ್ನು ಕ್ಷಣಿಕ ಸುಖಕ್ಕಾಗಿ ಮೀಸಲಿಡದೆ ಮುಂದಾಲೋಚನೆಯಿಂದ ಆರೋಗ್ಯಯುತ ಜೀವನ ನಡೆಸಬೇಕು. ಆರೋಗ್ಯದ ಸುಧಾರಣೆಗೆ ಚಟುವಟಿಕೆಯ ಜೀವನ, ವಿಷಪೂರಿತ ಆಹಾರ ತಿನ್ನದಿರುವಿಕೆ, ಸರಿಯಾದ ಸಮಯಕ್ಕೆ ಆಹಾರ ಪದಾರ್ಥಗಳ ಸೇವನೆ ಇದೇ ಮೊದಲಾದ ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವೈದ್ಯರ ಮೊರೆ ಹೋಗುವುದು ಕಡಿಮೆಯಾಗುವುದು. ಸದಾ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸದೃಢವಾಗಲು ಸಾಧ್ಯ ಎಂದು ಜಪಾನ್ ಆಯುರ್ವೇದ ಸ್ಕೂಲ್‌ನ ನಿರ್ದೇಶಕ ಡಾ| ಕೃಷ್ಣ ಯು.ಕೆ. ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜ. 16ರಂದು ನಡೆದ ‘ ಬ್ಯುಸಿನೆಸ್ ಆ್ಯಂಡ್ ಹೆಲ್ತ್ ಮ್ಯಾನೇಜ್‌ಮೆಂಟ್’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು, ಉಪಪ್ರಾಂಶುಪಾಲೆ ಆಶಾ ಹೆಗ್ಡೆ, ಉಪನ್ಯಾಸಕ ಚಂದ್ರಶೇಖರ್, ಜಾವೆದ್, ಜಾವೇದ್, ರಾಘವೇಂದ್ರ ಜಿ.ಜಿ. ಉಪಸ್ಥಿತರಿದ್ದರು, ವಿದ್ಯಾರ್ಥಿನಿ ಶ್ರೀರûಾ ಕಾರ್ಯಕ್ರಮ ನಿರೂಪಿಸಿದರು.