ಸರಕಾರಿ ಶಾಲೆಯ 1ರಿಂದ 5ನೇ ತರಗತಿ ಮಕ್ಕಳಿಗೆ “ನಲಿ ಯುತ್ತಾ ಕಲಿಯೋಣ’ ಎಂಬ ರೇಡಿಯೋ ಪಾಠ ಹೊರತುಪಡಿಸಿ ಬೇರೆ ಯಾವುದೇ ಬೋಧನೆ ಆಗುತ್ತಿಲ್ಲ. ಖಾಸಗಿ ಶಾಲೆಗಳು ಆನ್‌ಲೈನ್ ತರಗತಿ, ಪೂರ್ವ ಮುದ್ರಿತ ವೀಡಿಯೋ ತರಗತಿ ಇತ್ಯಾದಿ ಗಳನ್ನು ಮಾಡು ತ್ತಿವೆ. ಸರಕಾರಿ ಶಾಲಾ ಮಕ್ಕಳ ಶೈಕ್ಷ ಣಿಕ ಅಭಿ ವೃದ್ಧಿಗಾಗಿ ಮೌಲ್ಯಮಾಪನ ಮತ್ತು ಪರೀಕ್ಷೆ ಗಳನ್ನು ನಿಯಮಿತ ವಾಗಿ ನಡೆಸಬೇಕಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಅವಕಾಶ ಕಲ್ಪಿಸು ವಂತೆ ಸರಕಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ರ ಬರೆದಿದೆ.
Advertisement
ಮೌಲ್ಯಮಾಪನ, ಪರೀಕ್ಷೆಗೆ ಅನುಕೂಲಕಳೆದ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಿಂದ 1ರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಉತ್ತೀರ್ಣಗೊಳಿಸಲಾಗಿದೆ. ಆದರೆ ಈ ವರ್ಷ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಸಲು ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರ್ಯಾಯ ಪಠ್ಯ ಬೋಧನೆ, ಮೌಲ್ಯ ಮಾಪನ ಹಾಗೂ ಘಟಕ ಪರೀಕ್ಷೆ ನಡೆಯುತ್ತಿದೆ. 1ರಿಂದ 5ನೇ ತರಗತಿಗೂ ಘಟಕ ಪರೀಕ್ಷೆ, ಮೌಲ್ಯಮಾಪನ ನಡೆಸಲು ಅನುಕೂಲ ಆಗುವಂತೆ ಶಾಲೆ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಪತ್ರದ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ.
-ವಿ. ಅನ್ಬುಕುಮಾರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ