Advertisement
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಪ್ರಕಟಿಸಿರುವ ದತ್ತಾಂಶಗಳ ಪ್ರಕಾರ, ಈ ವರ್ಷ ಮಾರ್ಚ್‌ನಲ್ಲಿ 18.8 ದಶ ಲಕ್ಷ ಟನ್‌ನಷ್ಟು ಏರಿಕೆ ಕಂಡಿದೆ. ಇದರಲ್ಲಿ ಪೆಟ್ರೋಲ್‌ನ ಬಳಕೆ ಶೇ. 11.4ರಷ್ಟು (2.74 ಮಿಲಿಯನ್ ಟನ್) ಹೆಚ್ಚಿದೆ. ಇನ್ನು, ದೇಶದ ಆರ್ಥಿಕತೆಯ ಕೈಗನ್ನಡಿ ಎಂದೇ ಪರಿಗಣಿಸಲ್ಪಡುವ ಡೀಸೆಲ್ ಬಳಕೆಯ ಪ್ರಮಾಣ ಶೇ. 10ರಷ್ಟು ವೃದ್ಧಿಯಾಗಿದೆ.
ಇದೇ ವೇಳೆ, ಅಡುಗೆ ಅನಿಲದ ಮಾರಾಟದ ಪ್ರಮಾಣ ಶೇ.1.3ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಮಾರಾಟವಾದ ಅಡುಗೆ ಅನಿಲದ ಪ್ರಮಾಣಕ್ಕಿಂತ ಈ ಬಾರಿಯ ಮಾರ್ಚ್‌ನಲ್ಲಿ ಶೇ. 1.3ರಷ್ಟು ಇಳಿಮುಖವಾಗಿದೆ ಎಂದು ಅಂಕಿ-ಅಂಶಗಳು ಹೇಳಿವೆ. ಇದನ್ನೂ ಓದಿ:ಮುಷ್ಕರ ವಿಚಾರದಲ್ಲಿ ರಾಜಕೀಯ ಬೇಡ : ವಿರೋಧ ಪಕ್ಷಗಳಿಗೆ ಡಿಸಿಎಂ ಕಿವಿಮಾತು
Related Articles
ತೈಲ ಬೇಡಿಕೆ ಹೆಚ್ಚುತ್ತಿರುವುದು ದೇಶದ ಆರ್ಥಿಕತೆ ಸರಿ ದಾರಿಗೆ ಮರಳುತ್ತಿರುವುದಕ್ಕೆ ಸಾಕ್ಷಿ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. 2019ರ ಡಿಸೆಂಬರ್ ಬಳಿಕ ಭಾರತದ ಇಂಧನ ರಂಗದಲ್ಲಿ ಇಂಥದ್ದೊಂದು ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದಾಗಿ ಕುಸಿದಿದ್ದ ಆರ್ಥಿಕತೆ ಈಗ ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಇದು ಸಾಕ್ಷಿ ಒದಗಿಸಿದೆ ಎಂದು ತಜ್ಞರು ಹೇಳಿದ್ದಾರೆ.
Advertisement