Advertisement

ಇಂಧನ ಬೆಲೆ ಸಾರ್ವಕಾಲಿಕ ಜಿಗಿತ: 8 ದಿನದಲ್ಲಿ ಪೆಟ್ರೋಲ್‌ 1.94 ಏರಿಕೆ

11:34 AM May 21, 2018 | Team Udayavani |

ಹೊಸದಿಲ್ಲಿ : ಇಂದು ಸೋಮವಾರ ಪೆಟ್ರೋಲ್‌ ದರ ಲೀಟರ್‌ಗೆ 76.57 ಮತ್ತು ಡೀಸಿಲ್‌ ಲೀಟರ್‌ ದರ 67.82 ರೂ.ಗೆ ತಲುಪುವುದರೊಂದಿಗೆ ದೇಶದಲ್ಲಿನ ಇಂಧನ  ಬೆಲೆ ದಾಖಲೆಯ ಎತ್ತರವನ್ನು  ಮುಟ್ಟಿತು.

Advertisement

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ 19 ದಿನಗಳ ಕಾಲ ದೈನಂದಿನ ಇಂಧನ ಬೆಲೆ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ತೈಲ ಮಾರಾಟ ಕಂಪೆನಿಗಳು ಮೇ 14ರಂದು ಮತ್ತೆ ಈ ಪ್ರಕ್ರಿಯೆಯನ್ನು ಪುನರಾರಂಭಿಸಿದವು. ಅಂತೆಯೇ ಮೇ 14ರ ಬಳಿಕ ನಡೆದಿರುವ 8ನೇ ತೈಲ ಬೆಲೆ ಏರಿಕೆ ಇದಾಗಿದೆ. 

ಒಟ್ಟಾರೆಯಾಗಿ ಒಂದು ವಾರದೊಳಗೆ ಪೆಟ್ರೋಲ್‌ ಲೀಟರ್‌ ಬೆಲೆಯನ್ನು 1.94 ರೂ ಹೆಚ್ಚಿಸಲಾಗಿದೆ; ಡೀಸಿಲ್‌ ಲೀಟರ್‌ ಬೆಲೆಯ್ನು 1.89 ರೂ. ಹೆಚ್ಚಿಸಲಾಗಿದೆ. 

ದಿಲ್ಲಿಯಲ್ಲಿ ನಿನ್ನೆ ಭಾನುವಾರ ಪೆಟ್ರೋಲ್‌ ಬೆಲೆಯನ್ನು 33 ಪೈಸೆ ಏರಿಸಲಾಗಿತ್ತು.  2017ರ ಜೂನ್‌ ಮಧ್ಯದಲ್ಲಿ ದೈನಂದಿನ ತೈಲ ದರ ಪರಿಷ್ಕರಣೆಯನ್ನು ಆರಂಭಿಸಲಾದ ಬಳಿಕ ನಡೆದಿರುವ ಏಕದಿನ ಗರಿಷ್ಠ ಏರಿಕೆ ಇದಾಗಿದೆ. ಅಂತೆಯೇ ಡೀಸಿಲ್‌ ಬೆಲೆಯನ್ನು ನಿನ್ನೆ ಭಾನುವಾರ ಲೀಟರ್‌ಗೆ 25 ಪೈಸೆ ಏರಿಸಲಾಗಿತ್ತು. 

ರಾಜ್ಯದಿಂದ ರಾಜ್ಯಕ್ಕೆ ವ್ಯಾಟ್‌ ದರದಲ್ಲಿ ವ್ಯತ್ಯಾಸ ಇರುವುದರಿಂದ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆಯಲ್ಲಿ ಏಕರೂಪತೆ ಇಲ್ಲ. ಪೆಟ್ರೋಲ್‌ ಮತ್ತು ಡೀಸಿಲ್‌ ಅನ್ನು ಜಿಎಸ್‌ಟಿ ಅಡಿ ತಂದರೆ ಅವುಗಳ ದರ ಗಮನಾರ್ಹವಾಗಿ ಇಳಿಯಲು ಸಾಧ್ಯವಿದೆಯಾದರೂ ರಾಜ್ಯ ಸರಕಾರಗಳು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ . ಮಾತ್ರವಲ್ಲದೆ ಯಾವ ರಾಜ್ಯ ಸರಕಾರ ಕೂಡ ಇಂಧನ ಮೇಲಿನ ವ್ಯಾಟ್‌ ದರವನ್ನು ಕೂಡ ಇಳಿಸಲು ಒಪ್ಪುತ್ತಿಲ್ಲ. 

Advertisement

ಈ ಪರಿಣಾಮವಾಗಿ ಈಗ ಮುಂಬಯಿಯಲ್ಲಿ  ಪೆಟ್ರೋಲ್‌ ಲೀಟರ್‌ ದರ ದೇಶದಲ್ಲೇ ಅತ್ಯಧಿಕವಿದೆ = 84.40 ರೂ. ಕೋಲ್ಕತದಲ್ಲಿ ಇದು 79.24 ರೂ., ಚೆನ್ನೈನಲ್ಲಿ 79.47 ರೂ. ಇದೆ. 

ಡೀಸಿಲ್‌ ದರ ಕೂಡ ಮುಂಬಯಿಯಲ್ಲಿ ಅತ್ಯಧಿಕವಿದೆ = ಲೀಟರಿಗೆ 72.21 ರೂ. ಕೋಲ್ಕತದಲ್ಲಿ 70.37 ಮತ್ತು ಚೆನ್ನೈನಲ್ಲಿ 71.59 ರೂ. ಇದೆ. 

Advertisement

Udayavani is now on Telegram. Click here to join our channel and stay updated with the latest news.

Next