Advertisement

ಮುಂಬೈನಲ್ಲಿ ಶತಕದ ಸನಿಹಕ್ಕೆ ಪೆಟ್ರೋಲ್‌ ಬೆಲೆ!

08:45 PM May 18, 2021 | Team Udayavani |

ನವದೆಹಲಿ: ಮೇ ತಿಂಗಳಲ್ಲಿ ಹತ್ತನೇ ಬಾರಿಗೆ ಪೆಟ್ರೋಲ್‌-ಡೀಸೆಲ್‌ ಬೆಲೆಯೇರಿಕೆಯಾಗಿದೆ. ಪರಿಣಾಮ ದೇಶದ ಕೆಲವು ನಗರಗಳಲ್ಲಿ ಪೆಟ್ರೋಲ್‌ ಬೆಲೆ ಈಗಾಗಲೇ ನೂರು ರೂ. ದಾಟಿದೆ.

Advertisement

ಬೆಂಗಳೂರಿನಲ್ಲಿ ಇದಕ್ಕೆ ಕೆಲವೇ ದಿನಗಳು ಸಾಕು ಎನ್ನುವ ಪರಿಸ್ಥಿತಿಯಿದೆ. ಮಂಗಳವಾರ ಮತ್ತೆ 27 ಪೈಸೆ ಬೆಲೆಯೇರಿದ್ದರಿಂದ ಮುಂಬೈನಲ್ಲಿ ಲೀ. ಪೆಟ್ರೋಲ್‌ಗೆ 99.14 ರೂ. ಆಗಿದೆ. ಇನ್ನು 29 ಪೈಸೆ ಏರಿಕೆಯಿಂದ ಡೀಸೆಲ್‌ ಬೆಲೆ ಲೀ.90.71 ರೂ.ಗೆ ಮುಟ್ಟಿದೆ.

ಬೆಂಗಳೂರಿನಲ್ಲಿ 28 ಪೈಸೆ ಏರಿ ಪೆಟ್ರೋಲ್‌ ಲೀ.ಗೆ 95.94 ರೂ. ಆಗಿದೆ. ಡೀಸೆಲ್‌ ಬೆಲೆ 31 ಪೈಸೆ ಏರಿ ಲೀ.ಗೆ 88.53 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ಲೀ.ಗೆ 92.85 ರೂ., ಡೀಸೆಲ್‌ ಲೀ.ಗೆ 83.51 ರೂ.ಗೇರಿದೆ.

ಇದನ್ನೂ ಓದಿ :ನನಗೇನು ಆಗಿಲ್ಲ, ನಾನು ಚೆನ್ನಾಗಿದ್ದೇನೆ : ಸಾವಿನ ವದಂತಿಗೆ ತೆರೆ ಎಳೆದ ಕುರಿ ಪ್ರತಾಪ್

Advertisement

Udayavani is now on Telegram. Click here to join our channel and stay updated with the latest news.

Next