Advertisement

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ :ಪೆಟ್ರೋಲ್‌ಗೆ 25 ಪೈಸೆ, ಡೀಸೆಲ್‌ಗೆ 30 ಪೈಸೆ ಏರಿಕೆ

07:08 PM Sep 30, 2021 | Team Udayavani |

ನವದೆಹಲಿ: ತೈಲೋತ್ಪನ್ನಗಳ ಬೆಲೆಯಲ್ಲಿ ಬುಧವಾರ ಮತ್ತೆ ಏರಿಕೆ ಉಂಟಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 25 ಪೈಸೆ, ಪ್ರತಿ ಲೀಟರ್‌ ಡೀಸೆಲ್‌ಗೆ 30 ಪೈಸೆ ಏರಿಕೆಯಾಗಿದೆ.

Advertisement

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 26 ಪೈಸೆ ಏರಿಕೆಯಾದ್ದರಿಂದ 105.18 ರೂ. ಆಗಿದ್ದರೆ, ಪ್ರತಿ ಲೀಟರ್‌ ಡೀಸೆಲ್‌ಗೆ 23 ಪೈಸೆ ಏರಿಕೆಯಾಗಿ 95.38 ರೂ. ಆಗಿದೆ.

ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 101. 64 ರೂ. ಪ್ರತಿ ಲೀಟರ್‌ ಡೀಸೆಲ್‌ಗೆ 89.87 ರೂ., ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 107.71 ರೂ., ಪ್ರತಿ ಲೀಟರ್‌ ಡೀಸೆಲ್‌ಗೆ 97.52 ರೂ. ಆಗಿದೆ. ಸತತ 2ನೇ ದಿ️ನ ಪೆಟ್ರೋಲ್‌ ದರದಲ್ಲಿ ಏರಿಕೆಯಾಗುತ್ತಿದ್ದರೆ, ಡೀಸೆಲ್‌ ದರ 52ನೇ ದಿ️ನ ಏರಿಕೆಯಾಗುತ್ತಿದೆ. ಈ ಏರಿಕೆಯಿಂದಾಗಿ ದರ ಏರಿಕೆಯಲ್ಲಿ ಮತ್ತೂಂದು ದಾಖಲೆ ನಿರ್ಮಾಣವಾಗಿದೆ. ಜುಲೈನಲ್ಲಿ ಪೆಟ್ರೋಲ್‌ಗೆ ನವದೆಹಲಿಯಲ್ಲಿ 101.84 ರೂ, ಮುಂಬೈನಲ್ಲಿ 107.83 ರೂ. ಪ್ರತಿ ಲೀಟರ್‌ ಡೀಸೆಲ್‌ಗೆ ನವದೆಹಲಿಯಲ್ಲಿ 89.87 ರೂ.ಗೆ ಏರಿಕೆಯಾಗಿತ್ತು.

ಇದನ್ನೂ ಓದಿ :ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಬಳಕೆ: ಮುಖ್ಯಮಂತ್ರಿ ಸಲಹೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next