Advertisement

ತೈಲೋತ್ಪನ್ನಗಳ ದರ ಏರಿಕೆ : ಪಾಕ್‌ನಲ್ಲಿ ಒಂದು ಲೀಟರ್ ಪೆಟ್ರೋಲ್‌ ಬೆಲೆ 233 ರೂ. !

11:53 PM Jun 16, 2022 | Team Udayavani |

ಇಸ್ಲಾಮಾಬಾದ್‌ : ಪಾಕಿಸ್ಥಾನ ಸರಕಾರ ತೈಲೋತ್ಪನ್ನಗಳ ಬೆಲೆಯನ್ನು ಶೇ. 29ರ ವರೆಗೆ ಹೆಚ್ಚಿಸಿ ಆದೇಶ ನೀಡಿದೆ. ಜತೆಗೆ ಸಹಾಯಧನ ಸೌಲಭ್ಯವನ್ನೂ ರದ್ದು ಮಾಡಲು ನಿರ್ಧರಿಸಿದೆ.

Advertisement

ಇಂಥ ಕ್ರಮದ ಮೂಲಕ ವಿತ್ತೀಯ ಕೊರತೆಯನ್ನು ನೀಗಿಸಲು ಕ್ರಮ ಕೈಗೊಂಡಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲದ ನೆರವು ಪಡೆಯಲೂ ಪಾಕಿಸ್ಥಾನಕ್ಕೆ ಅನುಕೂಲವಾಗಲಿದೆ. ಬೆಲೆ ಏರಿಕೆ ಬಳಿಕ ಪ್ರತೀ ಲೀಟರ್‌ ಪೆಟ್ರೋಲ್‌ಗೆ 233.89 ರೂ., ಪ್ರತೀ ಲೀಟರ್‌ ಹೈಸ್ಪೀಡ್‌ ಡೀಸೆಲ್‌ಗೆ 233.89 ರೂ., ಪ್ರತೀ ಲೀಟರ್‌ ಸೀಮೆ ಎಣ್ಣೆಗೆ 211. 47 ರೂ. ಆಗಲಿದೆ.

20 ದಿನಗಳ ಅವಧಿಯಲ್ಲಿ ಶೆಹಬಾಜ್‌ ಷರೀಫ್ ನೇತೃತ್ವದ ಸರಕಾರ ಮೂರನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡುತ್ತಿದೆ. ಆ ದೇಶದ ಬಿಕ್ಕಟ್ಟು ಎಷ್ಟು ಹದಗೆಟ್ಟಿದೆ ಎಂದರೆ ಬೊಕ್ಕಸಕ್ಕೆ ಉಂಟಾಗುತ್ತಿರುವ ವಿತ್ತೀಯ ಹೊರೆ ತಪ್ಪಿಸಲು ದಿನಕ್ಕೆ 2 ಕಪ್‌ ಟೀ ಕುಡಿಯುವುದನ್ನು ನಿಲ್ಲಿಸಬೇಕು ಎಂದು ಅಲ್ಲಿನ ಸರಕಾರ ಬುಧವಾರವಷ್ಟೇ ಮನವಿ ಮಾಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next